ಸಿಂಧನೂರು – ನಗರದ ಉದ್ಯಮಿಗಳಾದ ಶ್ರೀಮತಿ ಸ್ವಪ್ನಾ ಶ್ರೀ ಅಭಯ್ ಶೇಟ್ ಇವರಿಂದ ಪ್ರತಿ ವರ್ಷವೂ ಕೂಡ ದೀಪಾವಳಿ ಹಬ್ಬವನ್ನು ಸಿಂಧನೂರಿನ ಕರುಣೆಯ ಕಾರುಣ್ಯ ಕುಟುಂಬವಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಆಶ್ರಯ ಪಡೆದಿರುವ ಆಶ್ರಯದಾತರುಗಳಿಗೆ ಹಾಗೂ ಅಲ್ಲಿನ ಸೇವಾ ಸಿಬ್ಬಂದಿಗಳಿಗೆ ಹೊಸ ವಸ್ತ್ರಗಳನ್ನು ವಿತರಣೆ ಮಾಡುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸುವುದು ಸಂಪ್ರದಾಯವಾಗಿದೆ. ಈ ಸಂದರ್ಭದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ನಮ್ಮ ಸಂಸ್ಥೆಯ ಮಾರ್ಗದರ್ಶಕರು ಕರುಣಾಮಯಿಗಳಾದ ಅಭಯ್ ಶೇಟ್ ಮತ್ತು ಅವರ ಮಗನಾದ ಯಶ್ ಇವರು ಪ್ರತಿವರ್ಷ ದೀಪಾವಳಿ ಹಬ್ಬವನ್ನು ಆಶ್ರಯದಾತರುಗಳಿಗೆ ಇಷ್ಟವಾದ ಹೊಸ ವಸ್ತುಗಳನ್ನು ವಿತರಿಸಿ ಅಲ್ಲಿನ ಸಿಬ್ಬಂದಿಗಳಿಗೂ ಕೂಡ ಹೊಸ ವಸ್ತ್ರಗಳನ್ನು ಹಾಗೂ ಸಿಹಿ ತಿಂಡಿಗಳನ್ನು ವಿತರಿಸುವ ಮೂಲಕ ಆಚರಿಸುತ್ತಿರುವ ಈ ಕುಟುಂಬದ ಸಂಪ್ರದಾಯ ಮಾನವೀಯತೆಗೆ ಶೋಭೆ ತರುವಂತದ್ದು ಮತ್ತು ವಿಶೇಷವಾಗಿ ಈ ಕುಟುಂಬದ ಯಾವುದೇ ಕಾರ್ಯಕ್ರಮವನ್ನು ಕಾರುಣ್ಯ ಆಶ್ರಮದಲ್ಲಿರುವ ಎಲ್ಲಾ ಹಿರಿಯರು ಕೂಡ ನಮ್ಮ ಕುಟುಂಬದ ಹಿರಿಯರ ಸಮಾನರು ಮತ್ತು ವಯಸ್ಕರ ಬುದ್ಧಿಮಾಂದ್ಯರು ನಮ್ಮ ಕುಟುಂಬದ ಮಕ್ಕಳ ಸಹೋದರ ಸಹೋದರಿಯರ ಸಮಾನರು ಎನ್ನುವ ಮನೋಭಾವನೆಯನ್ನು ಇಟ್ಟುಕೊಂಡಿರುವ ಈ ಕುಟುಂಬ ನಮ್ಮ ಕಲ್ಯಾಣ ಕರ್ನಾಟಕದ ಕರುಣಾಮಯಿ ಕುಟುಂಬವಾಗಿದೆ. ಇಂದಿನ ನಮ್ಮ ಅಭಯ್ ಶೇಟ್ ಅವರ ಕುಟುಂಬಕ್ಕೆ ಸಕಲ ದೇವಾನುದೇವತೆಗಳು ಆ ಭಗವಂತ ಸಕಲೈಶ್ವರ್ಯ ಸಿರಿ ಸಂಪತ್ತು ಆಯಸ್ಸು ಆಯುರಾರೋಗ್ಯ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎನ್ನುವ ವಿಶೇಷ ಪ್ರಾರ್ಥನೆಯೊಂದಿಗೆ ಯಶ್ ಶೇಟ್ ಅವರ ಕುಟುಂಬಕ್ಕೆ ಹಾಗೂ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಕೋರುತ್ತಿದ್ದೇವೆ ಎಂದು ಮಾತನಾಡಿ ಅಭಯ್ ಶೇಟ್ ಅವರ ಕುಟುಂಬಕ್ಕೆ ಧನ್ಯವಾದಗಳನ್ನು ತಿಳಿಸಿದರು. ಈ ಸಮಯದಲ್ಲಿ ಆಶ್ರಮದ ಸದಸ್ಯರಾದ ಸುಜಾತ ಹಿರೇಮಠ. ಸಿಬ್ಬಂದಿಗಳಾದ ಸಿದ್ದಯ್ಯ ಸ್ವಾಮಿ. ಮರಿಯಪ್ಪ.ವಿದ್ಯಾಶ್ರೀ. ಶಂಕ್ರಮ್ಮ ಶರಣು ಸ್ವಾಮಿ. ಬಸವ ಸ್ವಾಮಿ. ಹಾಗೂ ಎಲ್ಲಾ ಆಶ್ರಯದಾತರುಗಳು ಹೊಸ ಬಟ್ಟೆಗಳನ್ನು ಧರಿಸಿ ದೀಪಾವಳಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದರು.

Leave a Reply

Your email address will not be published. Required fields are marked *