ತಾಲೂಕಿನ ತಿಡಿಗೋಳದಲ್ಲಿ ಜಾತ್ರೆಯ ಸಂದರ್ಭದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಖಂಡಿಸಿ, ನ.೮ರಂದು ದಲಿತರ ಹಾಗೂ ಪ್ರಗತಿಪರ ಸಂಘಟನೆಗಳು ಕರೆ ನೀಡಿ, ತಿಡಿಗೋಳ ಚಲೋ ಕಾರ್ಯಕ್ರಮಕ್ಕೆ ತಿಡಿಗೋಳ ಗ್ರಾಮ ಸೇರಿ ಸುತ್ತ 5 ಕಿ.ಮೀ.ವರೆಗೂ ನಿಷೇದಾಜ್ಞೆ ತಾಲೂಕು ಆಡಳಿತ ಜಾರಿ ಮಾಡಿದ ಹಿನ್ನಲೆಯಲ್ಲಿ ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.

 

ನಂತರ ತಿಡಿಗೋಳ ಗ್ರಾಮದ ಕಡೆಗೆ ಬೈಕ್ ರ್ಯಾಲಿ ಮುಖಾಂತರ ಮೆರೆವಣಿಗೆಯಲ್ಲಿ ಸಾವಿರಾರು ಜನರು ಬಪ್ಪೂರು ರಸ್ತೆಯಲ್ಲಿ ಪೋಲಿಸರು ಮುಖಂಡರನ್ನು ತಡೆದರು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು, ಸುಮಾರು 3 ರಿಂದ 4 ತಾಸ್ ವರೆಗೂ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

 

ಇದಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಬಂಡಾಯ ಸಾಹಿತಿ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಹಾಗೂ ರಾಜ್ಯ ದಲಿತ ಮುಖಂಡರಾದ ಎನ್.ಮೂರ್ತಿ, ಮೋಹನರಾಜ, ಜಿಲ್ಲಾ ದಲಿತ ಮುಖಂಡರು ಮಾರೆಪ್ಪ ವಕೀಲರು, ಎಂ.ಆರ್.ಭೇರಿ, ಅಂಬಣ್ಣ ಅರೋಲಿಕರ್, ರವಿಂದ್ರ ಪಟ್ಟಿ, ಸಿಪಿಐಎಮ್‌ಎಲ್ ಲಿಬಿರೇಷನ್ ಮುಖಂಡ ಕ್ಲಿಪ್ಟನ್, ಡಿ.ಹೆಚ್.ಪೂಜಾರ್, ನಾಗರಜ ಪೂಜಾರ್, ಶೇಖರಪ್ಪ ದುಮತಿ ವಕೀಲರು ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

 

ನಂತರ ಅಲ್ಲಿಂದ ತಿಡಿಗೋಳ ಗ್ರಾಮದ ಕಡೆಗೆ ಬೈಕ್ ಪ್ರತಿಭಟನಾ ರ್ಯಾಲಿ ನಡೆಯಿತು, ನಗರದ ಪ್ರಮುಖ ರಸ್ತೆಯ ಮೂಲಕ ತಿಡಿಗೋಳ ಕಡೆಗೆ ಪ್ರತಿಭಟನಾ ರ್ಯಾಲಿ ನಡೆಯಿತು. ಮಾರ್ಗ ಮಧ್ಯ ನಗರದ ಬಪ್ಪೂರು ರಸ್ತೆಯಲ್ಲಿ ಪೋಲಿಸರ ಸರ್ಪಗಾವಲು ಇವರನ್ನು ಮುಂದೆ ಹೋಗದಂತೆ ತಡೆಯಿತು. ಸುಮಾರು 3ರಿಂದ 4 ಗಂಟೆಯವರಿಗೆ ಪೊಲೀಸರ ಮತ್ತು ಪ್ರತಿಭಟನಾಕಾರರ ನಡುವೆ ವಾಕ್ಸಮರ ನಡೆಯಿತು. ನಂತರ ಪೊಲೀಸರು ಮುಖಂಡರನ್ನು ಬಂಧಿಸಿ, ಎರಡು ಬಸ್ಸು ಗಳಲ್ಲಿ ತುಂಬಿದರು, ಆದರೂ ಪ್ರತಿಭಟನೆ ನಿಲ್ಲಲಿಲ್ಲ ತಿಡಿಗೋಳ ಕಡೆಗೆ ನಾವು ಹೋಗೆ ಹೋಗುತ್ತೇವೆ ಎಂದು ಘೋಷಣೆ ಕೂಗಿದಾಗ ಬಂಧಿಸಿ ಬಿಡುಗಡೆ ಮಾಡಿದರು.

Leave a Reply

Your email address will not be published. Required fields are marked *