ರಾಯಚೂರು,ನ,08:
ದೇಹದ ಸದೃಡತೆ, ದೈಹಿಕ ಕ್ಷಮತೆಗೆ, ಬುದ್ದಿಮಟ್ಟದ ಬೆಳವಣಿಗೆ ಅಥವಾ ಕುಟುಂಬದ ಏಳ್ಗೆಗೆ ಏನನ್ನು ಸಹಾಯ ಮಾಡದ, ಮತ್ತುಬರಿಸುವ, ಅಮಲು ತರಿಸುವ ವ್ಯಕ್ತಿತ್ವ, ಕುಟುಂಬವನ್ನೆ ನಾಶ ಮಾಡುವ ನಶಾ ಪದಾರ್ಥಗಳನ್ನು ನಾವೆಲ್ಲರೂ ಸೇರಿ ಸಮುದಾಯದಿಂದ ದೂರ ಮಾಡೋಣವೆಂದು ರಾಯಚೂರು ಮಹಾನಗರ ಪಾಲಿಕೆ ಆಯುಕ್ತ ಜೂಬಿನ್ ಮೊಹಪಾತ್ರ ಜನತೆಗೆ ಮನವಿ ಮಾಡಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಪೋಲಿಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ನಗರದ ಶೆಟ್ಟಿ ಬಾವಿ ಚೌಕ್ದಿಂದ ಹರಿಜನವಾಡದ ನಾಗರಕಟ್ಟೆ ದೇವಸ್ಥಾನದ ವರೆಗೆ ಹಮ್ಮಿಕೊಂಡ ನಶಾ ಮುಕ್ತ ರಾಯಚೂರ ಹಾಗೂ ತಂಬಾಕು ಮುಕ್ತ ಯುವ ಅಭಿಯಾನ 4.0 ‘ಜಾಗೃತಿ ನಡಿಗೆ’ ಹಾಗೂ ಜಾಗೃತಿ ನಾಟಕ ಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಒಮ್ಮೆ ಹವ್ಯಾಸವಾಗಿ ಬಳಸಲು ಆರಂಭವಾದ ನಂತರ ಚಟವಾಗಿ ಬದಲಾಗುವ ನಶಾ ಪದಾರ್ಥಗಳಾದ, ಗಾಂಜಾ, ಅಫೀಮು, ಚರಸ್, ಹೆರಾಯೀನ್ ಹಾಗೂ ತಂಬಾಕು ಹಾಗೂ ಅದರ ಉತ್ಪನ್ನಗಳಾದ ಸಿಗರೇಟ್, ಬೀಡಿ, ಹುಕ್ಕಾ ಹಾಗೂ ಮಧ್ಯಪಾನದಂತಹ ಅದರಲ್ಲೂ ಜಿಲ್ಲೆಯ ಕೆಲವು ಸ್ಥಳಗಲ್ಲಿ ಸಿಹೆಚಗ ಪೌಡರ್ನಿಂದ ತಯಾರಿಸಿದ ‘ನಕಲಿ ಸೇಂಧಿ’ ಯಂತಹ ವಸ್ತುಗಳು ವ್ಯಕ್ತಿಯ ವ್ಯಕ್ತಿತ್ವವನ್ನು ನಾಶ ಮಾಡುವ ಜೊತೆಗೆ ಕುಟುಂಬದ ಗೌರವವನ್ನು ಸಹ ಕುಂದಿಸುತ್ತವೆ.
ಈ ಹಿನ್ನಲೆ ದೇಶಾದ್ಯಂತ 2020 ರ ಅಗಷ್ಟ 15 ರಂದು ಜಾಗೃತಿ ಅಭಿಯಾನವನ್ನು ಆರಂಭಿಸಿದ್ದು, ರಾಯಚೂರು ಜಿಲ್ಲೆಯ ಜನತೆಗೆ ನಶಾ ಪದಾರ್ಥಗಳ ಸೇವನೆಯಿಂದಾಗುವ ಹಾನಿ, ದುಷ್ಪರಿಣಾಮಗಳ ಕುರಿತು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ನಗರ, ಗ್ರಾಮಗಳಲ್ಲಿ ಕಾಲೇಜು ವಿಧ್ಯಾರ್ಥಿಗಳಿಗೆ, ಸ್ಲಂ ಪ್ರದೇಶಗಳಲ್ಲಿ ಜಾಗೃತಿ ನೀಡಲಾಗುತ್ತಿದ್ದು, ನಶಾ ಪದಾರ್ಥಗಳ ಸೇವನೆ ಮಾಡಿದಾಗ ಹಲ್ಲೆ ಮಾಡುವ, ಮನೆಯ ಕೌಟುಂಬದ ಸದಸ್ಯರಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ, ಆರ್ಥಿಕ ಸಂಕಷ್ಟದ ಸಮಸ್ಯೆಗಳಿಗೆ ಈಡಾಗುವುದನ್ನು ಮನವರಿಕೆ ಮಾಡಲು, ಅದರಲ್ಲೂ ಈ ಕುರಿತು ಯುವಕರಿಗೆ ಹೆಚ್ಚಿನ ಜಾಗೃತಿ ನೀಡೊಣವೆಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ನಂದಿತಾ ಎಮ್ ಎನ್ ಮಾತನಾಡಿ, ನಶಾ ಪದಾರ್ಥಗಳನ್ನು ಸೇವಿಸುವ ವ್ಯಕ್ತಿಯು ಗಂಭೀರ ಆರೋಗ್ಯ ಸಮಸ್ಯೆಗಳಾದ ಕ್ಯಾನ್ಸರ್ (ವಿಶೇಷವಾಗಿ ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್), ಲಿವರ್ ಸಿರೋಸಿಸ್, ಹೃದಯಾಘಾತ, ಪಾರ್ಶ್ವವಾಯು, ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳಾದ ಖಿನ್ನತೆ, ಮಾನಸಿಕ ಅಸ್ವಸ್ಥತೆ, ಆತ್ಮಹತ್ಯೆಯಂತ ಪ್ರಯತ್ನಗಳಿಗೆ ಒಳಗಾಗುವುದು ಕಾಣುತ್ತಿದ್ದೆವೆ.
ಅಲ್ಲದೆ *ತಂಬಾಕು ಮುಕ್ತ ಯುವ ಅಭಿಯಾನ 4.O* ಅಡಿಯಲ್ಲಿ ಜಿಲ್ಲೆಯಾದ್ಯಂತ 26 ನೇಯ ಡಿಶಂಬರ್ವರೆಗೆ ತಂಬಾಕು ಸೇವೆಯಿಂದಾಗುವ ದುಷ್ಪರಿಣಾಮಗಳನ್ನು ತಡೆಯಲು ಕೋಟ್ಪಾ ಕಾಯ್ದೆ 2003 ರ ಪರಿಣಾಮಕಾರಿ ಅನುಷ್ಟಾನದ ಜಾಗೃತಿ ಕಾರ್ಯ ನಡೆಯುವುದು. *ಡಿ-ಅಡಿಕ್ಷನ್ ಕೇಂದ್ರ:* ಈಗಾಗಲೆ ರಾಯಚೂರಿನಲ್ಲಿ ವ್ಯಸನದಿಂದ ಮುಕ್ತಿ ಪಡೆಯಲು ರಿಮ್ಸ್ ಆಸ್ಪತ್ರೆಯ ಬಿ ಬ್ಲಾಕ್ ರೂಮ್ ನಂಬರ್ 27 ನಲ್ಲಿ ಕೌನ್ಸಿಲಿಂಗ್ ಸಹಾಯ ಪಡೆಯುಲು ಮಾಡಲಾದ ವ್ಯವಸ್ಥೆಯ ಹಾಗೂ ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿ 14416 ಸದುಪಯೋಗ ಪಡೆಯಲು ತಿಳಿಸಿದರು.
*ಜಾಗೃತಿ ನಾಟಕ*
ನಶಾ ಪದಾರ್ಥಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಹರಿಜನವಾಡಾದಲ್ಲಿ ವೈದ್ಯಾಧಿಕಾರಿ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಜನತೆಗೆ ಮನ ಮುಟ್ಟುವಂತೆ ಕಿರು ನಾಟಕ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಕಾರ್ಯಕ್ರಮಗಳ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಿಎಸ್ಓ ಡಾ ಗಣೇಶ್ ಕೆ, ಆರ್ಸಿಹೆಚ್ಓ ಡಾ ಶಾಕೀರ್ ಮೋಯುನುದ್ದೀನ್, ಡಿಎಫ್ಡಬ್ಲ್ಯುಓ ಡಾ ಶಿವಕುಮಾರ್ ನಾರಾ, ಡಿಟಿಓ ಡಾ ಯಶೋಧಾ, ಡಿಎಲ್ಓ ಡಾ ಅಮೃತ್ ಹುಕ್ಕೇರಿ, ತಾಲೂಕಾ ಆರೋಗ್ಯಾಧಿಕಾರಿ ಡಾ ಲಕ್ಷ್ಮಿಕಾಂತ, ಮನೋರೋಗ ತಜ್ಞ ಡಾ ಮನೋಹರ ಪತ್ತಾರ, ಪಾಲಿಕೆ ಪರಿಸರ ಅಭಿಯಂತರ ಜಯಪಾಲರೆಡ್ಡಿ, ವೈದ್ಯಾಧಿಕಾರಿಗಳಾದ ಡಾ ಸುನೀಲ್, ಡಾ ಗುಂಡಮ್ಮ, ಡಾ ಶ್ವೇತಾಂಬರಿ, ಡಾ ಸುನೀತಾ, ಡಿಹೆಚ್ಇಓ ಈಶ್ವರ ಹೆಚ್ ದಾಸಪ್ಪನವರ, ಡಿವೈಹೆಚ್ಇಓ ಬಸಯ್ಯ, ಸೇರಿದಂತೆ ಮಹಾನಗರ ಪಾಲಿಕೆ, ಪೋಲಿಸ್, ಆರೋಗ್ಯ ಇಲಾಖೆಯ ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.
