ಕೂಡಲಸಂಗಮದೇವನಂತಲ್ಲದೊಲ್ಲನಯ್ಯಾ ಎನ್ನುವ ಬಸವಣ್ಣನವರ ವಚನದ ಹಿತ ನುಡಿಗಳ ಹಾದಿಯಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು, ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಅವರು ಸಾಗುತ್ತಿದ್ದಾರೆ.ಇದಕ್ಕೆ ನಿದರ್ಶನ ಎನ್ನುವಂತೆ ಸಿಂಧನೂರು ನಗರದ ಆದರ್ಶ ಕಾಲೋನಿಯಲ್ಲಿ ಬಿಡಾಡಿ ದನಗಳು ಎಲ್ಲೆಂದರಲ್ಲಿ ತಿರುಗಾಡುತ್ತಿದ್ದಾಗ ಹಸು(ಆಕಳು)ಹೊಂದಕ್ಕೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭಾವಿದಾಗ ಅಲ್ಲಿದ್ದ ಸಾರ್ವಜನಿಕರು ವನಸಿರಿ ಅಮರೇಗೌಡ ಮಲ್ಲಾಪುರ ಅವರಿಗೆ ಕರೆ ಮಾಡಿ ತಿಳಿಸಿದರು.ತಕ್ಷಣ ಸ್ಥಳಕ್ಕೆ ಧಾವಿಸಿದ ಪರಿಸರ ಪ್ರೇಮಿ ಅಮರೇಗೌಡ ಮಲ್ಲಾಪುರ ಅವರು ಪಶು ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದರು.
ಸಿಂಧನೂರು ಪುಶು ವೈದ್ಯಧಿಕಾರಿ ಡಾ.ಮಲ್ಲಿಕಾರ್ಜುನ ಅವರಿಗೆ ಮಾಹಿತಿ ತಿಳಿಸಿದಾಗ ಪಶು ಆಸ್ಪತ್ರೆ ಸಿಬ್ಬಂದಿ ರಾಜ ಅವರು ಆಗಮಿಸಿ ಅಪಘಾತಕ್ಕೆ ಒಳಗಾದ ಹಸುವನ್ನು ಪರೀಕ್ಷಿಸಿದಾಗ ಹಸುವಿನ ಬಾಯಲ್ಲಿ ಹುಳುಗಳು ಮತ್ತು ಮೈಮೇಲೆ ಚುಕ್ಕಿ ರೋಗ ಕಂಡು ಬಂತು.ನಂತರ ಇದಕ್ಕೆ ಚಿಕಿತ್ಸೆ ನೀಡಿದರು.ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಅಮರೇಗೌಡ ಮಲ್ಲಾಪುರ ಅವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.
ಅಮರೇಗೌಡ ಮಲ್ಲಾಪುರ ಅವರು ಗಿಡ ಮರಗಳನ್ನು ಉಳಿಸಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ದೊಡಗಿದವರು.ಇದರ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳನ್ನು ರಕ್ಷಣೆ ಮಾಡುತ್ತಿರುವುದು ತುಂಬಾ ಶ್ಲಾಘನೀಯ ಎಂದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬಸವಣ್ಣನವರು ಹೇಳಿದಂತೆ ಪ್ರತಿಯೊಬ್ಬ ವ್ಯಕ್ತಿಯೂ ಸಕಲ ಜೀವಿಗಳ ಮೇಲೆ ಪ್ರೀತಿ ಮತ್ತು ಕರುಣೆ ತೋರುವುದು ಧರ್ಮದ ಮೂಲ.ಪ್ರತಿಯೊಬ್ಬರೂ ಪ್ರಾಣಿ- ಪಕ್ಷಿ,ಗಿಡಮರಗಳನ್ನು ರಕ್ಷಣೆ ಮಾಡುವ ಮೂಲಕ ಸಕಲ ಜೀವರಾಶಿಗಳ ಮೇಲೆ ದಯೇ ಕರುಣೆ ತೋರಬೇಕು ಎಂದು ವನಸಿರಿ ಅಮರೇಗೌಡ ಮಲ್ಲಾಪುರ ಅವರು ತಿಳಿಸಿದರು.
