ಹನುಮಸಾಗರ: ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಸಮೀಪದ ಬಾದಿಮನಾಳ ಕ್ರಾಸ್‌ನಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ಬುಧವಾರ ತೆರೆ ಬಿದ್ದಿದೆ.

ಪ್ರತಿಭಟನಾ ಸ್ಥಳಕ್ಕೆ ಶಾಸಕ ದೊಡ್ಡನಗೌಡ ಪಾಟೀಲ್ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ, ಕೆರೆಗಳಿಗೆ ನೀರು ತುಂಬಿಸುವ ಭರವಸೆ ನೀಡುವ ಮೂಲಕ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಬಾದಿಮನಾಳ ಹಾಗೂ ಗುಡ್ಡದೇವಲಾಪೂರ ಗ್ರಾಮದ ಕೆರೆಗಳಿಗೆ ನೀರು ತುಂಬಿಸಲು ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪೈಪ್‌ಲೈನ್ ದುರಸ್ತಿ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ರೈತರ ಬೇಡಿಕೆಯಂತೆ ಹಗಲು-ರಾತ್ರಿ ಕೆರೆಗಳಿಗೆ ನೀರು ಹರಿಸಲಾಗುವುದು. ಇದರಿಂದ ಕೆರೆಗಳು ಶೀಘ್ರದಲ್ಲೇ ಭರ್ತಿಯಾಗಲಿವೆ. ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಮಾತ್ರ ನೀರು ಹರಿಸಲು ವಿಳಂಬವಾಗಬಹುದು ಎಂದು ತಿಳಿಸಿದರು.

ಶಾಸಕರ ಭರವಸೆಗೆ ಸ್ಪಂದಿಸಿದ ರೈತರು ಪ್ರತಿಭಟನೆಯನ್ನು ಹಿಂಪಡೆದರು.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಎಇಇ ದೇವೇಂದ್ರಪ್ಪ ಇಟ್ಟಂಗಿ, ಪಿಎಸ್‌ಐ ಧನುಂಜಯ ಎಂ., ಮುಖಂಡರಾದ ಮರಿಯಪ್ಪ ಗ್ವಾತಗಿ, ವೀರಣ್ಣ ಗಜೇಂದ್ರಗಡ, ಮಹಾಂತೇಶ ಗಣವಾರಿ, ನಜೀರ್‌ಸಾಬ್ ಮೂಲಿಮನಿ, ಕೆ.ಎಸ್. ಹನುಮಂತಪ್ಪ, ಶರಣಪ್ಪ ಕುಂಬಾರ, ಸತ್ಯಪ್ಪ ರಾಜೂರು, ರವಿ ಪರಸಾಪೂರ, ಅಶೋಕ ವಾಲಿಕಾರ, ಶರಣಪ್ಪ ಪರಸಾಪೂರ, ನೀಲಪ್ಪ ಕಡಿಯವರ, ಯಮನೂರ ಮಡಿವಾಳರ, ಶ್ರೀಕಾಂತ ಅಂಗಡಿ, ಪರಶುರಾಮ ಮಾಸ್ತಕಟ್ಟಿ ಸೇರಿದಂತೆ ರೈತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *