ಬೆಂಗಳೂರು: ಚಂದ್ರಗಿರಿ ಸಿನಿಪ್ರೊಡಕ್ಷನ್ ರವರ ತೊಚ್ಚಲ ಕಾಣಿಕೆ ‘ಸ್ವರ್ಣ ಮೇದಿನಿ’ ಕನ್ನಡ ಚಲನಚಿತ್ರದ ‘ಉಸಿರಲ್ಲಿ ಏರಿಳಿತ’ ಮೊದಲ ಹಾಡನ್ನು ಕನ್ನಡ ಚಿತ್ರರಂಗದ ಭರಾಟೆ, ಬಹದ್ದೂರ್, ಜೇಮ್ಸ್ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ನಿರ್ಮಾಪಕ-ನಿರ್ದೇಶಕ ಚಂದ್ರಗಿರಿ ದಿನೇಶ್, ನಾಯಕ ಕಾರ್ತಿಕ್ ಯಜತ, ನಾಯಕಿ ಅನುಷಾ ದಿನೇಶ್, ಖಳನಾಯಕ ಶಿವಪ್ರಸಾದ್ ಆಚಾರ್ಯ, ಛಾಯಾಗ್ರಾಹಕ ಬಸವರಾಜ್ ಇಂದ್ರ, ಸಹ ನಿರ್ದೇಶಕ ರೇಣುಕಾ ಪ್ರಸಾದ್.ಎಂಡಿ, ಗೀತೆ ರಚನೆಕಾರ ಶಿವಪ್ರಸಾದ್ ಶಾನುಭಾಗ್ ಚಿತ್ರ ತಂಡದವರಿದ್ದರು.
ಮಕ್ಕಳಿಗೆ ಮಣ್ಣಿನ ಮಹತ್ವ ತಿಳಿಸುವ, ಯುವಕರಿಗೆ ಕೃಷಿಯ ಬಗ್ಗೆ ಗೌರವ ಮೂಡಿಸುವ, ಹಿರಿಯರಿಗೆ ಬಾಲ್ಯದ ನೆನಪು ತರಿಸುವ ರೈತಾಪಿ ಕುಟುಂಬ ಕಥಾ ಚಿತ್ರ ಇದು. ಶೃಂಗೇರಿ, ಕಳಸ ಸುತ್ತಮುತ್ತ ಮಲೆನಾಡಿನ ಪರಿಸರದಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಮೊದಲ ಹಾಡು ಎ೨ ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು ಅಭಿಮಾನಿಗಳು ವೀಕ್ಷಿಸಿ ಪ್ರೋತ್ಸಾಹಿಸಲು ನಿರ್ದೇಶಕ ಚಂದ್ರಗಿರಿ ದಿನೇಶ ಕೋರಿದ್ದಾರೆ.
ತಾರಾಗಣದಲ್ಲಿ ನಾಯಕ ಕಾರ್ತಿಕ್ ಯಜತ, ನಾಯಕಿ ಅಪರ್ಣ ಭಟ್, ಅನುಷ ದಿನೇಷ್, ಅಕ್ಷಯ್ ವಿಭು, ಶೃಂಗೇರಿ ರಾಮಣ್ಣ, ರಾಘವೇಂದ್ರ ರೈ, ಶಿವಪ್ರಸಾದ್ ಆಚಾರ್ಯ, ಅಭಿಷೇಕ್ ಹೆಬ್ಬಾರ್, ಶರತ್ ಕುಂಬ್ಳೆ, ಸುರಭಿ ಶೆಟ್ಟಿ, ಕಾವ್ಯಶ್ರಿ ಅಡಿಗ ಮೊದಲಾದವರಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಬಸವರಾಜ್ ಇಂದ್ರ, ಕಥೆ-ಚಿತ್ರಕಥೆ ಪ್ರದೀಪ್ ಹೆಬ್ಬಾರ್ ಎಂ ಪಿ, ಸಂಭಾಷಣೆ ವೀಣಾ ದಿನೇಶ್, ಸಂಕಲನ ಪ್ರವೀಣ್ ಚಿದಾನಂದ್, ವಸ್ತ್ರ ವಿನ್ಯಾಸ ಅನುಪಮ ದಿನೇಶ್, ನೃತ್ಯ ನಿರ್ದೇಶನ ಕಂಬಿ ರಾಜು, ಸಾಹಸ ಗಿರೀಶ್ ಎ ಪಿ, ಪಿಆರ್ ಓ ಆರ್. ಚಂದ್ರಶೇಖರ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಸಹಾಯಕ ನಿರ್ದೇಶನ ಯತೀಶ್, ರೇಣುಕಾ ಪ್ರಸಾದ್.ಎಂಡಿ ಸಹನಿರ್ದೇಶನ, ಚಂದ್ರಗಿರಿ ದಿನೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದು. ನಿರ್ದೇಶನ ಚಂದ್ರಗಿರಿ ದಿನೇಶ್, ಪ್ರದೀಪ್ ಹೆಬ್ಬಾರ್ ಎಂ ಪಿ ಮಾಡಿದ್ದಾರೆ,
-ಡಾ.ಪ್ರಭು ಗಂಜಿಹಾಳ
