ಸಿಂಧನೂರು -ನಗರದ ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ. ಸುವಾರ್ತ ರಮೇಶ ಅವರು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್(ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಭೇಟಿ ನೀಡಿ ಆಶ್ರಯದಾತುರುಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ಆತ್ಮಸ್ಥೈರ್ಯ ತುಂಬಿದರು. ಇದೇ ಸಂದರ್ಭದಲ್ಲಿ ಮಸ್ಕಿ ತಾಲೂಕಿನ ಬೆಲ್ಲದಮರಡಿ ಗ್ರಾಮದ ವೆಂಕಣ್ಣ ತಂ. ದಿ. ಹನುಮಂತ್ರಾಯ ಅಸರಡ್ಡಿ 75 ವರ್ಷದ ಇವರು ಆಶ್ರಮದ ನಿರ್ವಹಣೆಗಾಗಿ ಆಶ್ರಮಕ್ಕೆ ಒಂದು ಲಕ್ಷ ರೂಪಾಯಿಗಳ ನಗದನ್ನು ಸಹಾಯ ಮಾಡಿ ಮಾನವೀಯತೆ ಮೆರೆದರು. ಇದೇ ಕಾರ್ಯಕ್ರಮದಲ್ಲಿ ದಿ. ಸುಂಕವಲ್ಲಿ ಹಮ್ಮಿರಾಜು ಸಾ. ಬೂದಿವಾಳ ಕ್ಯಾಂಪ್ ಇವರ ಧರ್ಮಪತ್ನಿಯವರಾದ ಸುಂಕವಲ್ಲಿ ವರಲಕ್ಷ್ಮಿ ಕಾರುಣ್ಯ ದತ್ತಿ ಧರ್ಮದರ್ಶಿಗಳಾಗಿ ಆಶ್ರಮಕ್ಕೆ ಸಹಾಯ ಸೌಜನ್ಯವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ. ಗಳಾದ ಸುವಾರ್ತ ರಮೇಶ ಇವರಿಗೆ ಆಶ್ರಮದ ವತಿಯಿಂದ ನೆನಪಿನ ಕಾಣಿಕೆ ವಿತರಿಸಲಾಯಿತು. ನಂತರ ಆಶ್ರಮಕ್ಕೆ ಸಹಾಯ ಸೌಜನ್ಯ ಮಾಡಿದ ವೆಂಕಣ್ಣ ತಂ. ದಿ. ಹನುಮಂತ್ರಾಯ ಆಸರಡ್ಡಿ ಬೆಲ್ಲದಮರಡಿ ಹಾಗೂ ವರಲಕ್ಷ್ಮಿಸುಂಕವಲ್ಲಿ ಸಾ. ಬೂದಿವಾಳ ಕ್ಯಾಂಪ್ ಇವರುಗಳನ್ನು ಆಶ್ರಮದ ವತಿಯಿಂದ ಗೌರವಿಸಲಾಯಿತು. ನಂತರ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐಗಳಾದ ಸುವಾರ್ತ ರಮೇಶ ಮಾತನಾಡಿ ಮನುಷ್ಯ ಮನುಷ್ಯನನ್ನೇ ತಿರಸ್ಕೃತಗೊಳಿಸುವ ಈಗಿನ ಕಾಲದಲ್ಲಿ ಕಾರುಣ್ಯ ಆಶ್ರಮವು ಮನುಷ್ಯತ್ವದ ಮಂದಿರವಾಗಿದೆ. ಇಂತಹ ಸೇವೆಗೆ ಇಂದು ಇಬ್ಬರು ಮಾದಾನಿಗಳು ಮಾಡಿರುವ ಕಾರ್ಯ ಭಗವಂತನ ಪ್ರೀತಿಗೆ ಪಾತ್ರವಾಗಿದೆ. ಸ್ವಾರ್ಥದ ಈ ಜಗತ್ತಿನಲ್ಲಿ ಸಾಮಾನ್ಯ ಅರ್ಚಕರಾಗಿ ವೇ.ಮೂ. ಅಮರಯ್ಯ ಸ್ವಾಮಿಯವರು ಕಾರುಣ್ಯ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಸೇವೆ ಸಮಾಜಕ್ಕೆ ಒದಗಿಸುತ್ತಿರುವ ಈ ಸಂಸ್ಥೆಗೆ ನಾನು ವೈಯಕ್ತಿಕವಾಗಿ ಮತ್ತು ನಮ್ಮ ಇಲಾಖೆಯಿಂದ ಕೈಲಾದಷ್ಟು ಸಹಾಯ ಮಾಡುತ್ತೇನೆ. ನಾಡಿನ ಸಮಸ್ತ ನಾಗರಿಕರ ಸಹಾಯದಿಂದ ಮಾಡುತ್ತಿರುವ ಈ ಕಾರ್ಯ ಅದೆಷ್ಟೋ ಅನಾಥ ಜೀವಿಗಳಿಗೆ ಸುಂದರ ಬದುಕು ಕಟ್ಟಿಕೊಟ್ಟಿದೆ. ಇ ಸೇವಾ ಕಾರ್ಯ ಮಾಡುತ್ತಿರುವ ಕಾರುಣ್ಯ ಕುಟುಂಬಕ್ಕೆ ನಾನು ವೈಯಕ್ತಿಕವಾಗಿ ಧನ್ಯವಾದಗಳು ತಿಳಿಸುತ್ತಿದ್ದೇನೆ ಎಂದು ಮಾತನಾಡಿ ಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ನಂತರ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಶಾಂಭವಿ ಪುಣ್ಯಾಶ್ರಮದ ವೇ. ಮೂ. ವೀರೇಶ ಯಡಿಯೂರುಮಠ ಮಾತನಾಡಿ ನಮಗೆ ಕಾರುಣ್ಯ ಆಶ್ರಮಕ್ಕೆ ಪೊಲೀಸ್ ಇಲಾಖೆಯಿಂದ ನಿರಂತರ ಸಹಾಯ ಸಹಕಾರ ದೊರೆಯುತ್ತಿದ್ದು ನಮ್ಮನ್ನು ಇನ್ನೂ ಹೆಚ್ಚಿನ ಸೇವೆ ಮಾಡಲು ಪ್ರೋತ್ಸಾಹಿಸಿದೆ. ಸಮಾಜದ ಅದೆಷ್ಟೋ ಟಿಕೆ ಟಿಪ್ಪಣಿ ಅವಮಾನ ಅಪಪ್ರಚಾರಗಳನ್ನೇ ಸವಾಲನ್ನಾಗಿ ಸ್ವೀಕಾರ ಮಾಡಿ ಚನ್ನಬಸಯ್ಯನವರ ಈ ಅಂತರಾಳದ ಆತ್ಮಸಾಕ್ಷಿಯ ಸೇವೆಗೆ ಸಹಾಯ ಸಹಕಾರ ಮಾಡುವಂತ ದಾನಿಗಳೇ ನಡೆದಾಡುವ ದೇವರುಗಳಾಗಿದ್ದಾರೆ ಎಂದು ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿಂಧನೂರಿನ ಪಿ.ಡಬ್ಲ್ಯೂ.ಡಿ.ಕ್ಯಾಂಪಿನ ಪೀಠಾಧಿಪತಿಗಳಾದ ವೇ. ಮೂ. ವೀರೇಶ ಯಡಿಯೂರು ಮಠ ಸಾನಿಧ್ಯ ವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಮಹಾದಾನಿಗಳಾದ ವೆಂಕಣ್ಣ ಅಸರೆಡ್ಡಿ ಬೆಲ್ಲದಮರಡಿ. ಸುಂಕವಲ್ಲಿ ವರಲಕ್ಷ್ಮಿ ಬೂದಿವಾಳ ಕ್ಯಾಂಪ್. ನಾರಾಯಣಪ್ಪ ಮಾಡಸಿರವಾರ ಗೌರವಾಧ್ಯಕ್ಷರು ಶ್ರೀಮತಿ ಮಲ್ಲಮ್ಮ ಮಾಡಸಿರವಾರ ಸಾಮಾಜಿಕ ಸಾಂಸ್ಕೃತಿಕ ಸೇವಾ ಟ್ರಸ್ಟ್. ಸೀತಾರಾಮಯ್ಯ ಬೂದಿವಾಳ ಕ್ಯಾಂಪ್. ಶರಣಯ್ಯ ಸ್ವಾಮಿ ಆದಾಪುರ. ಅಮರೇಗೌಡ ಆದಾಪುರ. ಹಾಗೂ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳಾದ ಜಗದೀಶ. ಪಂಪಾಪತಿ. ಆಶ್ರಮದ ಕಾರ್ಯಾಧ್ಯಕ್ಷರಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ. ಸದಸ್ಯರಾದ ಸುಜಾತ ಹಿರೇಮಠ. ಸಿಬ್ಬಂದಿಗಳಾದ ಸಿದ್ದಯ್ಯ ಸ್ವಾಮಿ.ಮರಿಯಪ್ಪ. ವಿದ್ಯಾಶ್ರೀ. ಶಂಕ್ರಮ್ಮ ಶರಣ ಸ್ವಾಮಿ. ಬಸವ ಸ್ವಾಮಿ. ಹಾಗೂ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *