ಸಿಂಧನೂರು ನ.೦೪ ಭೂ-ಗ್ಯಾರಂಟಿ ಯೋಜನೆ ಅಡಿಯಲ್ಲಿ ಪಂಚಾಯತ ರಾಜ್ಯ ಇಲಾಖೆ ನಿರ್ದೆಶನ ಮೇರೆಗೆ ಡಿಸೆಂಬರ್ ತಿಂಗಳ ಅಂತ್ಯದೊಳಗೆ ತಾಲೂಕಿನ ಎಲ್ಲಾ ಪಿಡಿಒಗಳು ಇ-ಸ್ವತ್ತು
ಕೊಡುವ ಕೆಲಸವನ್ನು ಪೂರ್ಣಗೊಳಿಸಿ ಎಂದು ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳಾದ ಹಾಲಸಿದ್ದಪ್ಪ ಸೂಚನೆ ನೀಡಿದರು.
ನಗರದ ತಾಲೂಕು ಪಂಚಾಯತಿ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕಿನ ಅಧಿಕಾರಿಗಳ ಜೊತೆ ಸಭೆ ನಡೆಸಿ, ಮೊದಲು ಜನರಿಗೆ ಇದರ ಬಗ್ಗೆ ಪ್ರಚಾರ ಮಾಡಿ ನಂತರ ನೋಟಿಸ್ ನೀಡಿ, 7 ದಿನದೊಳಗಾಗಿ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಿ, ನಂತರ ವಿದ್ಯುತ್ ಬಿಲ್ ಸೇರಿದಂತೆ ಇನ್ನಿತರೆ ದಾಖಲಾತಿಗಳ ಅನ್ವಯ ನೈಜ ಮಾಲೀಕರಿಗೆ ಇ-ಸ್ವತ್ತು ಕೊಡಿ ಎಂದು ತಿಳಿಸಿ, ನಂತರ ಗ್ರಾಮ ಪಂಚಾಯತಿ ಪಿಡಿಒಗಳಿಂದ ಪಂಚಾಯತಿಯ ವ್ಯಾಪ್ತಿಯಲ್ಲಿರುವ ಒಟ್ಟು ಆಸ್ತಿಗಳು ಇ-ಸ್ವತ್ತು ಕೊಟ್ಟ ಆಸ್ತಿಗಳು ಮತ್ತು ಬಾಕಿ ಇರುವ ಆಸ್ತಿಗಳ ಬಗ್ಗೆ ಮಾಹಿತಿ ಪಡೆದರು.
ನಂತರ ಕುಡಿಯುವ ನೀರಿನ ವಿಚಾರದ ಬಗ್ಗೆ ಚರ್ಚೆ ನಡೆಸಿ, ಮುಂದಿನ ಜನವರಿ ವರೆಗೂ ನೀರಿನ ಅಭಾವ ತಲೆದೂರದಂತೆ ತಾಲೂಕಿನ ಎಲ್ಲಾ ಪಿಡಿಒಗಳು ಕೂಡ ಕುಡಿಯುವ ನೀರಿನ ಕೆರೆಗಳನ್ನು ಭರ್ತಿ ಮಾಡಿಕೊಳ್ಳಿ, ನೀರಿನ ಬಗ್ಗೆ ಯಾವುದೇ ಗ್ರಾಮಗಳಲ್ಲಿ ದೂರು ಬಂದರೆ ಅದಕ್ಕೆ ನೀವೆ ಹೊಣೆಗಾರರು ಎಂದು ಎಚ್ಚರಿಸಿದರು.
ಬಾಕ್ಸ್:
ಈ ಸಭೆಯಲ್ಲಿ ಪಿಡಿಒಗಳು ಮತ್ತು ವಿವಿಧ ಇಲಾಖೆಯ ಕೆಲವು ಅಧಿಕಾರಿಗಳು ಗೈರಾಗಿದ್ದು ಕಂಡು ಬಂತು.
ಕಾಟಾಚಾರಕ್ಕೆ ನಡೆಸಿದ ಸಭೆ, ಪಿಡಿಒಗಳ ಹತ್ತಿರ ಸಂಪೂರ್ಣ ಮಾಹಿತಿ ಕೊರತೆ ಎದ್ದು ಕಂಡಿತು. ಸಾಕಷ್ಟು ಇ-ಸ್ವತ್ತು ಮತ್ತು ಮನೆ ಟ್ಯಾಕ್ಸ್ ಬಿಲ್ ಗಳ ಬಾಕಿ ಉಳಿಸಿ ಕೊಂಡ ಪಿಡಿಒಗಳ ವಿರುದ್ದ ಗರಂ ಆದ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಹಾಲಸಿದ್ದಪ್ಪ.
ಈ ಸಭೆಯಲ್ಲಿ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ, ತಾಲೂಕು ಪಂಚಾಯತಿ ಎಡಿ ಯಂಕಪ್ಪ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
