ಒಮ್ಮೆ ಚಟವಾಗಿ ರೂಡಿಯಾಗುವ ನಶಾ ಪದಾರ್ಥಗಳಾದ, ಗಾಂಜಾ, ಅಫೀಮು, ಚರಸ್, ಹೆರಾಯೀನ್, ಹಾಗೂ ಮಧ್ಯಪಾನ, ಹಾಗೂ ತಂಬಾಕು ಹಾಗೂ ಅದರ ಉತ್ಪನ್ನಗಳು ವ್ಯಕ್ತಿಯ ವ್ಯಕ್ತಿತ್ವವನ್ನು ನಾಶ ಮಾಡುವ ಜೋತೆಗೆ ಕುಟುಂಬದ ಗೌರವವನ್ನು ಸಹ ಕುಂದಿಸುತ್ತವೆ. ಇದನ್ನು ತಡೆಯಲು ಆರಂಭದಲ್ಲಿಯೇ ನಾವೆಲ್ಲರೂ ಜಾಗೃತಿ ನೀಡೋಣವೆಂದು ಜಿಲ್ಲಾಧಿಕಾರಿ ಪೂವಿತಾ ಎಸ್ ರವರು ಕರೆ ನೀಡಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಪೋಲಿಸ್ ಇಲಾಖೆ, ರಿಮ್ಸ್ ಭೋಧಕ ಆಸ್ಪತ್ರೆ, ನವೋದಯ ವೈದ್ಯಕೀಯ ಮಹಾ ವಿದ್ಯಾಲಯ, ಎ.ಎಮ್.ಇ ಡೆಂಟಲ್ ಕಾಲೇಜ್, ನಂದಿನಿ ನರ್ಸಿಂಗ್ ಕಾಲೇಜ್, ಸರಕಾರಿ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಸಂಘ ಸಂಸ್ಥೆಗಳೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇವರು ಹಮ್ಮಿಕೊಂಡ ನಶಾ ಮುಕ್ತ ರಾಯಚೂರ ಹಾಗೂ ತಂಬಾಕು ಮುಕ್ತ ಯುವ ಅಭಿಯಾನ 4.0 ‘ಜಾಗೃತಿ ನಡಿಗೆ’ ಯನ್ನು ಉದ್ಘಾಟಿಸಿ ಮಾತನಾಡುತ್ತಾ, ದೇಶಾದ್ಯಂತ 2020 ರ ಅಗಷ್ಟ 15 ರಂದು ಅಭಿಯಾನವನ್ನು ಆರಂಭಿಸಿದ್ದು, ರಾಯಚೂರು ಜಿಲ್ಲೆಯ ಜನತೆಗೆ ನಶಾ ಪದಾರ್ಥಗಳ ಸೇವನೆಯಿಂದಾಗುವ ಹಾನಿ, ದುಷ್ಪರಿಣಾಮಗಳ ಕುರಿತು ನಗರ, ಗ್ರಾಮಗಳಲ್ಲಿ ಕಾಲೇಜು ವಿಧ್ಯಾರ್ಥಿಗಳಿಗೆ, ಯುವಕರಿಗೆ ಜಾಗೃತಿ ನೀಡಲಾಗುತ್ತಿದ್ದು, ಇದನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗುವ ಜೊತೆಗೆ ಇವುಗಳ ಸೇವನೆಯಿಂದ ಆರೋಗ್ಯ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟುವ ದಿಶೆಯಲ್ಲಿ ಹಾಗೂ ಯುವಜನತೆಗೆ ನಶಾ ಪದಾರ್ಥಗಳ ಸೇವನೆಯಿಂದ ಆರೋಗ್ಯ ಸಮಸ್ಯೆಗಳಾದ ಕ್ಯಾನ್ಸರ್ (ವಿಶೇಷವಾಗಿ ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್), ಲಿವರ್ ಸಿರೋಸಿಸ್, ಹೃದಯಾಘಾತ, ಪಾರ್ಶ್ವವಾಯು, ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳಾದ ಖಿನ್ನತೆ, ಮಾನಸಿಕ ಅಸ್ವಸ್ಥತೆ, ಆತ್ಮಹತ್ಯೆಯಂತ ಪ್ರಯತ್ನಗಳಿಗೆ ಒಳಗಾಗುತ್ತಾರೆ.
ಅಲ್ಲದೆ ನಶಾ ಪದಾರ್ಥಗಳ ಅಮಲಿನಿಂದ ಹಲ್ಲೆ ಮಾಡುವ, ಮನೆಯ ಕೌಟುಂಬದ ಸದಸ್ಯರಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ, ಆರ್ಥಿಕ ಸಂಕಷ್ಟದ ಸಮಸ್ಯೆಗಳಿಗೆ ಈಡಾಗುವುದನ್ನು ತಡೆಯಲು ಜಾಗೃತಿ ನೀಡೊಣ, ಹಾಗೂ ರಾಯಚೂರಿನಲ್ಲಿ ವ್ಯಸನದಿಂದ ಮುಕ್ತಿ ಪಡೆಯಲು ರಿಮ್ಸ್ ಆಸ್ಪತ್ರೆಯ ಬಿ ಬ್ಲಾಕ್ ರೂಮ್ ನಂಬರ್ 27 ನಲ್ಲಿ ಕೌನ್ಸಿಲಿಂಗ್ ಸಹಾಯ ಪಡೆಯುಲು ಮಾಡಲಾದ ವ್ಯವಸ್ಥೆಯ ಹಾಗೂ ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿ 14416 ಸದುಪಯೋಗ ಪಡೆಯಲು ತಿಳಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ ಮಾತನಾಡಿ, ರಾಯಚೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಗಾಂಜಾ ಬಳಕೆ, ಮಾರಾಟದ ಮಾಹಿತಿ ಲಭ್ಯವಾಗಿದ್ದು, ತಕ್ಷಣವೆ ದಾಳಿ ಮಾಡಿ, 138 ಕೇಸ್ ಮಾಡಲಾಗಿದ್ದು, ಮಾರಾಟಗಾರರ ಬಂಧನವನ್ನು ಸಹ ಮಾಡಲಾಗಿದೆ. ನಶಾ ಪದಾರ್ಥಗಳ ಅಮಲಿನಲ್ಲಿ ಕೊಲೆ, ಸುಲುಗೆ, ದೊಂಬಿಯಂತಹ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಗಳು ಇದ್ದು ಸಾರ್ವಜನಿಕರು ಈ ದಿಶೆಯಲ್ಲಿ ನಶಾ ಪದಾರ್ಥಗಳ ಬಳಕೆ, ಮಾರಾಟದಿಂದ ದೂರವಿರಲು ವಿನಂತಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ನಂದಿತಾ ಎಮ್ ಎನ್ ಎಲ್ಲರಿಗೂ ಅಭಿನಂದಿಸಿರು. ಈ ಸಂದರ್ಭದಲ್ಲಿ ರಿಮ್ಸ್ ಅಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸ ಡಾ ವಿಜಯಶಂಕರ, ರಿಮ್ಸ್‌ನ ಪ್ರಾಂಶುಪಾಲರಾದ ಡಾ ರಾಹುಲ್ ಸಿ ಕೀರ್ತೆ, ನವೋದಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ ಗುರುದತ್ತ ಎಸ್ ಪವಾರ್, ಎ.ಎಮ್.ಇ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ಸೋಮನಾಥ ರೆಡ್ಡಿ, ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳಾದ ಡಾ ಗಣೇಶ್ ಕೆ, ಡಾ ಶಾಕೀರ್ ಮೋಯುನುದ್ದೀನ್, ಡಾ ಶಿವಕುಮಾರ್ ನಾರಾ, ಡಾ ಚಂದ್ರಶೇಖರಯ್ಯ, ಡಾ ಅಮೃತ್ ಹುಕ್ಕೇರಿ, ತಜ್ಞ ವೈದ್ಯ ಡಾ ಬಸವರಾಜ್ ಎಮ್ ಪಾಟೀಲ್, ತಾಲೂಕಾ ಆರೋಗ್ಯಾಧಿಕಾರಿ ಡಾ ಲಕ್ಷ್ಮೀಕಾಂತ, ಮನೋರೋಗ ತಜ್ಞ ಡಾ ಮನೋಹರ ಪತ್ತಾರ, ಗ್ರೀನ್ ರಾಯಚೂರುನ ರಾಜೇಂದ್ರ ಶಿವಾಳಿ, ನಂದಿನಿ ನರ್ಸಿಂಗ್ ಕಾಲೇಜ್ ಟ್ಯೂಟರ್ ಸೋನಿ, ಅಭಿನಯ ಕೆ, ಎನ್‌ಎಸ್‌ಎಸ್ ಅಧಿಕಾರಿ ಸಂತೋಷ್ ಕುಮಾರ, ಸೇರಿದಂತೆ ವೈದ್ಯಾಧಿಕಾರಿಗಳು, ಪೋಲಿಸ್ ಸಿಬ್ಬಂದಿ, ವೈದ್ಯ ವಿದ್ಯಾರ್ಥಿಗಳು, ಆರೋಗ್ಯ ಶಿಕ್ಷಣಾಧಿಕಾರಿಗಳು, ಬಿಹೆಚ್‌ಇಓ, ಪಿಹೆಚ್‌ಸಿಓ ಹೆಚ್‌ಐಓ, ಎಲ‌್‌ಟಿಓ, ಫಾರ್ಮಸಿಸ್ಟ್, ಅಶಾ ಕಾರ್ಯಕರ್ತೆಯರು, ಸೇರಿದಂತೆ ಅಧಿಕಾರಿ ಸಿಬ್ಬಂದಿ ವರ್ಗದವರು ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
