*ಮಸ್ಕಿ*: ತಾಲೂಕ ತೋರಣದಿನ್ನಿ ಹತ್ತಿರ ತುಂಗಭದ್ರಾ ಎಡದಂಡೆ 69 ನೇ ವಿತರಣೆ ಕಾಲುವೆಯ ನೀರು ಸರಬರಾಜು ಮಾಡುವಲ್ಲಿ ನೀರಾವರಿ ಅಧಿಕಾರಿಗಳು ಬಹಳಷ್ಟು ಎಡವಟ್ಟು ಮಾಡುತ್ತಿದ್ದು ಅದಕ್ಕೆ ಭಾಗದ ರೈತರು ಆಕ್ರೋಶ ಭರಿತರಾಗಿದ್ದು, ರೈತರಿಗೆ ಕೊಡುವ ನೀರಿನ ಗೇಜ್ ಸರಿಯಾಗಿ ಪಾಲಿಸುತ್ತಿಲ್ಲ, ಅದರಲ್ಲಿ ಕೂಡ ಮೋಸದಾಟ ಹೀಗಾದರೆ ರೈತರ ಗೋಳು ಶಿವನೇ ಬಲ್ಲ, ಈಗಾಗಲೇ ಒಂದು ಎಕರೆಗೆ 50 ರಿಂದ 60 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ, ಇಂಥ ಕಷ್ಟದ ಸಂದರ್ಭದಲ್ಲಿ ಭತ್ತಕ್ಕೆ ಸರಿಯಾಗಿ ನೀರು ಬರೆದಿದ್ದರೆ ರೈತರು ಬಹಳಷ್ಟು ನಷ್ಟ ಉಂಟಾಗುತ್ತದೆ ಅದಕ್ಕೆ ನೀರಿನ ಅವಶ್ಯಕತೆ ತುಂಬಾ ಇದೆ, ಇದರಲ್ಲಿ ನೀರಾವರಿ ಸಹಾಯಕ ಕಾರ್ಯಪಾಲಕ ಅಭಿಯಂತರ ರೈತರ ವಿಚಾರದಲ್ಲಿ ತಾರತಮ್ಯ ಮಾಡುತ್ತಾರೆ ಜೊತೆಗೆ ನೀರಿನ ವಿಚಾರದಲ್ಲಿ ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದ ನೀರಾವರಿ ಅಧಿಕಾರಿಗಳು ಕರ್ತವ್ಯ ಲೋಪ ಮಾಡುತ್ತಿದ್ದು, ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಎಂಬಂತಿದೆ ಅಧಿಕಾರಿಗಳ ನಡೆ, ಹೀಗೆ ಆದರೆ ಅತಿ ಶೀಘ್ರದಲ್ಲಿ ರೈತರ ಶಕ್ತಿ ಸಾಮರ್ಥ್ಯ ಏನು ಎಂಬುದನ್ನು ಅಧಿಕಾರಿಗಳಿಗೆ, ಸರಕಾರಕ್ಕೆ ಶಕ್ತಿಪ್ರದರ್ಶನ ವೇದಿಕೆ ಸಿದ್ಧವಾಗುತ್ತಿದೆ ಎಂದು ನೂರಾರು ಮನನಂದ ರೈತರು ಎಚ್ಚರಿಸಿದ್ದಾರೆ.ರೈತರಾದ ಶರಣೀಗೌಡ ಮಾತನಾಡಿ ಆತ್ಮೀಯ ರೈತ ಬಾಂಧವರೇ ನಿಮ್ಮ ಮೇಲಿನ ಮೋಸದಾಟಕ್ಕೆ ಎಷ್ಟು ಅಂತ ಬಲಿ ಆಗ್ತೀರಾ, ಅದಕ್ಕೆ ನಾವೇ ಎಚ್ಚೆತ್ತು , ಬೃಹತ್ ಹೋರಾಟ ವೇದಿಕೆ ಸಜ್ಜುಗೊಳ್ಳಿಸೊಣ. ಇದು ನಮ್ಮ ಮನವಿ ಮತ್ತು ಕಳಕಳಿ, ಈಗಾಗಲೇ ಹೋರಾಟಕ್ಕೆ ವೇದಿಕೆ ಸಿದ್ಧವಾಗುತ್ತದೆ ಎಲ್ಲವೂ ಹೊರಾಟ ನಮಗಾಗಿ ದಯವಿಟ್ಟು ಸಹಕರಿಸಿ ರೈತರ ಗತ್ತು ತಾಕತ್ತು ತೊರಿಸೊಣ ಎಂದು ಹೇಳಿದರು.
