ಕುಷ್ಟಗಿ: ತಾಲೂಕಿನ ಚಳಗೇರಿ ಗ್ರಾಮದ ಶ್ರೀ ಹಿರೇಮಠದಲ್ಲಿ ನಡೆಯಲಿರುವ ಪ್ರಥಮ ಮಹಾರಥೋತ್ಸವದ ಅಂಗವಾಗಿ ನೂತನ ಬೆಳ್ಳಿ ಕಳಸವನ್ನು ಇಂದು ಕುಷ್ಟಗಿ ಪಟ್ಟಣದಿಂದ ಭವ್ಯ ಮೆರವಣಿಗೆಯ ಮೂಲಕ ಚಳಗೇರಿ ಗ್ರಾಮಕ್ಕೆ ಕಳುಹಿಸಿಕೊಡಲಾಯಿತು.ಕುಷ್ಟಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆದ ಬೆಳ್ಳಿ ಕಳಸದ ಮೆರವಣಿಗೆಯಲ್ಲಿ ಭಕ್ತರು, ಗಣ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾದರು. ಮೆರವಣಿಗೆಯು ಭಕ್ತಿ, ಶ್ರದ್ಧೆ ಹಾಗೂ ಉತ್ಸಾಹದಿಂದ ಕಂಗೊಳಿಸಿತು.
ಈ ಸಂದರ್ಭದಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ, ಹಿರಿಯರಾದ ಬಿ.ಎಸ್. ಪಾಟೀಲ, ದೇವೇಂದ್ರಪ್ಪ ಬಳೂಟಗಿ, ಜೆ. ಶರಣಪ್ಪ, ಕೆ. ಮಹೇಶ, ಕಲ್ಲೇಶ ತಾಳದ, ಮಹಾಂತಯ್ಯ ಅರಳಲಿಮಠ, ಶಿವಕುಮಾರ ಗಂಧದಮಠ, ಶ್ರೀ ರವಿಕುಮಾರಸ್ವಾಮಿ ಹಿರೇಮಠ ಗುರುಗಳು, ಸಂಗಮೇಶ ಶಿವನಗುತ್ತಿ, ಶಶಿಧರ ಕವಲಿ, ಬಸೇಟೆಪ್ಪ ಕುಂಬಳಾವತಿ, ಉಮೇಶ ಮಂಗಳೂರು, ಉಮೇಶ ಮೇಳಿ, ರವಿಕುಮಾರ ಮೇಳಿ, ಶಿವಾಜಿ ಹಡಪದ, ಉಮೇಶ ಅಕ್ಕಿ, ರಮೇಶ ಕೋನಸಾಗರ ಸೇರಿದಂತೆ ಚಳಗೇರಿ ಗ್ರಾಮದ ಹಿರಿಯರು, ಕುಷ್ಟಗಿ ಪಟ್ಟಣದ ಗಣ್ಯರು ಹಾಗೂ ಯುವಕರು ಉಪಸ್ಥಿತರಿದ್ದರು.
ಶ್ರೀ ಹಿರೇಮಠದ ಪ್ರಥಮ ಮಹಾರಥೋತ್ಸವದ ಹಿನ್ನೆಲೆಯಲ್ಲಿ ಬೆಳ್ಳಿ ಕಳಸದ ಮೆರವಣಿಗೆ ಭಕ್ತರಲ್ಲಿ ಧಾರ್ಮಿಕ ಉತ್ಸಾಹ ಮತ್ತು ಸಂಭ್ರಮವನ್ನು ಮೂಡಿಸಿತು.
