ಹಾಲಾಪೂರ*: ಗ್ರಾಮದ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಇಂಡಿವಿಲೇಜ್ ಫೌಂಡೇಶನ್ ಸಂಸ್ಥೆಯು ಸಿ ಜೆ ಐ ಸಹಭಾಗಿತ್ವದಲ್ಲಿ 5 ಲಕ್ಷ, 50 ಸಾವಿರ ರೂಪಾಯಿ ಮೌಲ್ಯದ ಆರು ಲ್ಯಾಪ್ಟಾಪ್ ಗಳನ್ನ ಉಚಿತವಾಗಿ ನೀಡಲಾಗಿದೆ ಎಂದು ಇಂಡಿವಿಲೇಜ್ ಸಂಯೋಜಕರಾದ ಮಣಿಕಂಠ ತಿಳಿಸಿದರು, ನಮ್ಮ ಫೌಂಡೇಶನ್ ವತಿಯಿಂದ ಪ್ರತಿ ವರ್ಷ ಜಿಲ್ಲೆಯಲ್ಲಿ ಅನೇಕ ಸರಕಾರಿ ಶಾಲೆಗಳು , ಆರೋಗ್ಯ, ಕೃಷಿ ಇನ್ನಿತರ ಕ್ಷೇತ್ರಕ್ಕೆ ಸಾಮಾಜಿಕ ಕಾರ್ಯಕ್ರಮ ಚಟುವಟಿಕೆಯನ್ನು ಹಮ್ಮಿಕೊಂಡಿದ್ದೇವೆ, ನಮ್ಮ ಸಂಸ್ಥೆ ಕೇವಲ ಕಂಪ್ಯೂಟರ್ ಕ್ಷೇತ್ರಕ್ಕೆ ಅಷ್ಟೇ ಸೀಮಿತವಾಗದೆ ಅನೇಕ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮಕ್ಕೆ ಒತ್ತು ಕೊಟ್ಟಿದ್ದೇವೆ, ಹೀಗಾಗಿ ಇಂದು ಹಾಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಸದುಪಯೋಗ ಪಡೆದುಕೊಳ್ಳಿ ಪ್ರಸ್ತುತ ಕಂಪ್ಯೂಟರ್ ಜ್ಞಾನ ಅತಿ ಅವಶ್ಯಕ ಎಂದು ಹೇಳಿದರು. ನಂತರ ಶಾಲೆಯ ಮುಖ್ಯಗುರು ಮಂಜುನಾಥ ಹಾಲಾಪೂರ , ಅತಿಥಿಗಳಾಗಿ ಸುಭಾಷ್ ಸಿಂಗ್ ಹಜಾರೆ, ವೆಂಕೋಬ ದೇವಪುರ, ಅರವಿಂದ ಕುಲಕರ್ಣಿ ಮಾತನಾಡಿದರು. ಶಿವರಾಜ ಜಿನಾಪುರ, ಕಂಪ್ಯೂಟರ ಶಿಕ್ಷಕರಾದ ಮೌನೇಶ, ಕಿಶೋರ ಹಾಗೂ ಶಾಲಾ ಶಿಕ್ಷಕಿಯರಾದ ಸುಜಾತ ಎನ್, ನೇತ್ರಾವತಿ ಹಾಗೂ ಇನ್ನಿತರ ಶಿಕ್ಷಕಿಯರು ಇದ್ದರು.

Leave a Reply

Your email address will not be published. Required fields are marked *