ಸಿರವಾರ:* ರಕ್ತದಾನವು ದಾನದಲ್ಲಿಯೇ ಅತ್ಯಂತ ಶ್ರೇಷ್ಠವಾದ ದಾನವಾಗಿದ್ದು, ಒಬ್ಬ ವ್ಯಕ್ತಿ ನೀಡುವ ರಕ್ತವು ಮತ್ತೊಬ್ಬರ ಜೀವ ಉಳಿಸಲು ಸಹಕಾರಿಯಾಗುತ್ತದೆ. ಇಂದಿನ ದಿನಗಳಲ್ಲಿ ಅಪಘಾತಗಳು, ಶಸ್ತ್ರಚಿಕಿತ್ಸೆಗಳು ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದ ಅವಶ್ಯಕತೆ ಹೆಚ್ಚಾಗಿದೆ. ನಮ್ಮ ಗ್ರಾಮದ ಯುವಕರು ಮತ್ತು ಸರ್ವಶಕ್ತ ಬ್ಲೆಸ್ಸಿಂಗ್ ಟ್ರಸ್ಟ್ ವತಿಯಿಂದ ಇಂದು ಹಮ್ಮಿಕೊಂಡ ಕಾರ್ಯ ಮಾನವೀಯ ಕಾರ್ಯವಾಗಿದೆ ಎಂದು ಮಾಡಗಿರಿ ಗ್ರಾಮದ ಹಿರಿಯ ಮುಖಂಡರಾದ ನಟರಾಜ್ ಗೌಡ ಪೊಲೀಸ್ ಪಾಟೀಲ್ ಹೇಳಿದರು.ತಾಲೂಕಿನ ಮಾಡಗಿರಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರದಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಾಡಗಿರಿ ಯುವಕರ ಬಳಗ ಮತ್ತು ಸರ್ವಶಕ್ತ ಬ್ಲೆಸ್ಸಿಂಗ್ ಟ್ರಸ್ಟ್ ರಿ ಮಾಡಗಿರಿ ಹಾಗೂ ರಕ್ತನಿಧಿ ಕೇಂದ್ರ ರಿಮ್ಸ್ ಬೋಧಕರ ಆಸ್ಪತ್ರೆ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಸುವುದರ ಜೊತೆಗೆ ಸಮಾಜದಲ್ಲಿ ಮಾನವೀಯತೆ ಮತ್ತು ಸೇವಾ ಮನೋಭಾವವನ್ನು ಬೆಳೆಸಲು ಸಾಧ್ಯವಾಗುತ್ತದೆ. ಆದ್ದರಿಂದ ಆರೋಗ್ಯವಂತ ಯುವಕರು ಯಾವುದೇ ಭಯ ಅಥವಾ ಹಿಂಜರಿಕೆಯಿಲ್ಲದೆ ವೈದ್ಯಕೀಯ ಮಾರ್ಗಸೂಚಿಗಳ ಪ್ರಕಾರ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬಂದು ರಕ್ತದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಅಗತ್ಯವಿರುವ ರೋಗಿಗಳಿಗೆ ನೆರವಾಗುವುದು ಸಮಾಜದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು. ಇದೇ ವೇಳೆ ಮೋದಿನ್ ಮಾಚನೂರು, ಮಹೆಬೂಬ್ ಮದ್ಲಾಪುರು, ಸಂಪನ್ಮೂಲ ವ್ಯಕ್ತಿ ಮಾನವಿ, ದಲಿತ ಸಾಹಿತ್ಯ ಪರಿಷತ್ ಸಿರವಾರ ತಾಲ್ಲೂಕು ಅಧ್ಯಕ್ಷ ಶಿವಪ್ಪ ನಾಯಕ ಕಲ್ಲೂರು, ಮಾತನಾಡಿದರು. ರಕ್ತದಾನ ಶಿಬಿರದಲ್ಲಿ ಭಾಗವಹಿಸಿ 64 ಜನರು ರಕ್ತದಾನ ಮಾಡಿದ್ದಕ್ಕೆ ಮಾಡಗಿರಿ ಯುವಕರ ಬಳಗ ಮತ್ತು ಸರ್ವಶಕ್ತ ಬ್ಲೆಸ್ಸಿಂಗ್ ಟ್ರಸ್ಟ್ ರಿ ಮಾಡಗಿರಿ ಹಾಗೂ ರಕ್ತನಿಧಿ ಕೇಂದ್ರ ರಿಮ್ಸ್ ಬೋಧಕರ ಆಸ್ಪತ್ರೆ ರಾಯಚೂರು ಇವರುಗಳ ವತಿಯಿಂದ ಅಭಿನಂದನೆಗಳು ಸಲ್ಲಿಸಿ ಪ್ರಮಾಣ ಪತ್ರ ನೀಡಿ ಧನ್ಯವಾದಗಳು ಕೋರಿದರು.
ನಿರೂಪಣೆಯನ್ನು ಅಜೀಂ ಪ್ರೇಮ್ ಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಹುಸೇನ್ ಅವರು ನೆರವೇರಿಸಿದರು ಹಾಗೂ ಪ್ರಾಸ್ತಾವಿಕವಾಗಿ ಎಂ.ಡಿ. ಇಸ್ಮಾಯಿಲ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಉನ್ನತಿಕರಿಸಿದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನರಸಮ್ಮ,ಡಾ.ರಾಧ ರಕ್ತನಿಧಿ ಕೇಂದ್ರ ರಿಮ್ಸ್ ಬೋಧಕರ ಆಸ್ಪತ್ರೆ ರಾಯಚೂರು, ಸಿ.ಹೆಚ್.ಒ. ಎಂ.ಡಿ. ಶಬೀರ್, ಪಿ. ಬಸವರಾಜ್ ನಾಯಕ ದೈಹಿಕ ಶಿಕ್ಷಣ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಮಾಡಗಿರಿ, ಗ್ರಾಮದ ಹಿರಿಯ ಮುಖಂಡರಾದ ಬಸವರಾಜ ಗೌಡ, ದೇವರಾಜ ಗೌಡ, ಬಸಯ್ಯ ತಾತ, ಹುಸೇನ್ ಸಾಬ್, ಲವಕುಮಾರ , ಜಯವಂತ, ಅನಿಲ್ ಕುಮಾರ್, ಕೆ.ಯೇಸು, ಎಂ. ಹನುಮಂತ ನಾಯಕ, ರವಿಕುಮಾರ್, ಸಂಗಮೇಶ ತಾತ, ಡಾ.ವಲಿಪಾಷ, ಡಾ. ಶರಣಪ್ಪ, ಶರಣಪ್ಪ ಗೌಡ , ಬಸವರಾಜ್ ಗೌಡ ಮೈನುದ್ದೀನ್ ಎಸ್ ಡಿ ಎಮ್ ಸಿ ಅಧ್ಯಕ್ಷರು, ಅರುಣ ಕುಮಾರ್ ಎಸ್ ಡಿ ಎಂ ಸಿ ಸದಸ್ಯರು, ಪ್ರಕಾಶ ಸಾಹುಕಾರ, ಪ್ರದೀಪ್ ಕುಮಾರ್, ಖಾಸಿಂ ಅಲಿ ಸಾಬ್, ದಿಲೀಪ್ ಕುಮಾರ, ಬಸವರಾಜ್ ಮಾಸ್ಟರ್, ಗುಂಡಪ್ಪ, ವೆಂಕಟೇಶ್, ಜಾರ್ಜ್, ಭೀಮಣ್ಣ, ನಿಲ್ಲಯ್ಯ, ಮನೋಜ್, ಅರುಣ ಕುಮಾರ್, ಯಮೂನಪ್ಪ, ಸೇರಿದಂತೆ ರಕ್ತದಾನ ಶಿಬಿರದ ಎಲ್ಲಾ ಯುವಕರು, ಸರ್ವಶಕ್ತ ಬ್ಲೆಸ್ಸಿಂಗ್ ಟ್ರಸ್ಟ್ ರಿ ಮಾಡಗಿರಿ ಹಾಗೂ ಆಸ್ಪತ್ರೆ ಸಿಬ್ಬಂದಿಗಳು, ಗ್ರಾಮಸ್ಥರು , ಮತ್ತು ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
