ರಾಯಚೂರು,ನ,2: ಅರಳು ಹುರಿದಂತೆ ಮಾತನಾಡಬಹುದಾದ ಸುಂದರ ಭಾಷೆಯಾದ ಕನ್ನಡವನ್ನು ಭಾಷೆಯನ್ನು, ಚಿಕಿತ್ಸೆಗಾಗಿ ಆಗಮಿಸುವ ಕನ್ನಡ ಭಾಷೆ ಗೊತ್ತಿರದವರಿಗೂ ಭಾಷೆಯ ಮೇಲೆ ಅಭಿಮಾನ ಬರುವ ರೀತಿಯಲ್ಲಿ ನಡೆದುಕೊಳ್ಳೊಣ. ಮತ್ತು ನಾವೆಲ್ಲರೂ ಆರೋಗ್ಯ ಇಲಾಖೆಯ ಸೇವೆ, ಸೌಲಭ್ಯಗಳನ್ನು ಜನತೆಗೆ ನಿಸ್ವಾರ್ಥದಿಂದ ಒದಗಿಸೊಣವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ನಂದಿತಾ ಎಮ್ ಎನ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ 71 ನೆರಯ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಯಿ ಭುವನೇಶ್ವರಿಗೆ ಪೂಜೆ ನೇರವೆರಿಸಿ ಮಾತನಾಡುತ್ತಾ, ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ, ರಾಷ್ಟ್ರದ ಶಾಸ್ತ್ರಿಯ ಭಾಷೆಗಳಲ್ಲಿ ಒಂದಾಗಿದೆ. ಕನ್ನಡ ಬಾರದ ಅನ್ಯ ಭಾಷಿಕರಿಗೂ ಸಹ ಅವರ ಭಾಷೆಗೆ ಗೌರವ ನೀಡಿ ಕನ್ನಡ ಭಾಷೆಯನ್ನು ಕಲಿಸಬೇಕು ಎಂದರು. ಆರೋಗ್ಯ ಸೇವೆ ನೀಡುವ ಇಲಾಖೆಯಲ್ಲಿರುವ ನಾವೆಲ್ಲರೂ ಗ್ರಾಮೀಣ, ನಗರ ಪ್ರದೇಶಗಳಲ್ಲಿ ಸರಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಆಗಮಿಸುವ ಜನತೆಗೆ ಸೌಜನ್ಯಯುತವಾಗಿ ಸ್ಪಂದಿಸಿ, ಈಗ ನೀಡುತ್ತಿರುವ ಗುಣಮಟ್ಟದ ತಾಯಿ ಮಗುವಿನ ಸೇವೆ ಸೇರಿದಂತೆ ಎಲ್ಲ ಸೇವೆಗಳನ್ನು ಇನ್ನು ಉತ್ತಮಗೊಳಿಸಿ, ಸಮರ್ಪಣಾ ಭಾವದಿಂದ ಕರ್ತವ್ಯ ನಿರ್ವಹಿಸಿ ಮಾನವೀಯತೆಯಿಂದ ಕೂಡಿದ ಸುಂದರ ಸಮಾಜದ ನಿರ್ಮಾಣಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ್ ಕೆ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ ಮಹಮ್ಮದ್ ಶಾಕೀರ್, ಸೇರಿದಂತೆ ಎಲ್ಲ ವಿಭಾಗಗಳ ಸಿಬ್ಬಂದಿಯವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

