ಸಿಂಧನೂರು – ತಾಲೂಕಿನ ಒಳಬಳ್ಳಾರಿ ಸುವರ್ಣಗಿರಿ ವಿರಕ್ತ ಮಠದ ತ್ರಿವಿಧ ದಾಸೋಹಿಮೂರ್ತಿಗಳು ಮಹಾ ತಪಸ್ವಿಗಳಾದ ಲಿಂಗೈಕ್ಯ ಶ್ರೀ ಮ. ನಿ. ಪ್ರ.ಚನ್ನಬಸವ ಮಹಾಶಿವಯೋಗಿಗಳ 44ನೇ ಪುಣ್ಯರಾಧನೆ ಸಮಾರಂಭ ಕಾರ್ಯಕ್ರಮವು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಶ್ರೀಮತಿ ಮಲ್ಲಮ್ಮ ಮಾಡಸಿರವಾರ ಸಾಮಾಜಿಕ ಸಾಂಸ್ಕೃತಿಕ ಸೇವಾ ಟ್ರಸ್ಟ್(ರಿ) ಮಾಡಸಿರವಾರ ಇವರುಗಳ ಸಹಯೋಗದಲ್ಲಿ ಆಶ್ರಯದಾತರುಗಳ ಮೂಲಕ ಲಿಂಗೈಕ್ಯ ಶ್ರೀ ಮ. ನಿ. ಪ್ರ. ಚನ್ನಬಸವ ಮಹಾಶಿವಯೋಗಿಗಳ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ವಿಶೇಷ ಪ್ರಾರ್ಥನೆಯ ಮೂಲಕ ನೆರವೇರಿತು. ಇಂದಿನ ಈ ಕಾರ್ಯಕ್ರಮದ ಮಹಾಪ್ರಸಾದ ಸೇವೆಯನ್ನು ಶರಣಪ್ಪ ಗಚ್ಚಿನಮನಿ ಅತ್ತನೂರು ನಿವೃತ್ತ ಪೊಲೀಸ ಅಧಿಕಾರಿಗಳು ಇವರ ಕುಟುಂಬದಿಂದ ಮಹಾಪ್ರಸಾದ ಸೇವೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ನಮ್ಮ ಒಳಬಳ್ಳಾರಿಯ ಶ್ರೀ ಮ. ನಿ. ಪ್ರ.ಚನ್ನಬಸವ ಮಹಾ ಶಿವಯೋಗಿಗಳು ನಡೆದಾಡುವ ದೇವರಾಗಿ ನಮ್ಮ ನಾಡಿನ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ ಶ್ರೀಗಳ ಹೆಸರಿನ ಮೇಲೆ ಹುಟ್ಟಿಕೊಂಡಿರುವ ಈ ಕಾರುಣ್ಯ ಕುಟುಂಬದ ಕಾರುಣ್ಯ ಮೂರ್ತಿಗಳಾಗಿ ನಮ್ಮ ಸೇವೆಗೆ ಆಶೀರ್ವದಿಸುತ್ತಿದ್ದಾರೆ. ವಿಶೇಷವಾಗಿ ಈಗಿರುವ ಶ್ರೀ ಮ. ನಿ. ಪ್ರಾ. ಡಾ.ಸಿದ್ದಲಿಂಗ ಮಹಾ ಶಿವಯೋಗಗಳು ಹಾಗೂ ಶ್ರೀ ಮ. ನಿ. ಪ್ರಾ. ಮಹಾಲಿಂಗ ಮಹಾ ಶಿವಯೋಗಿಗಳು ನಮ್ಮ ಈ ಸೇವೆಗೆ ಸ್ಫೂರ್ತಿಯಾಗಿದ್ದಾರೆ. ಈ ಕಾರುಣ್ಯ ಕುಟುಂಬದಲ್ಲಿರುವ ಅಂಧ -ಅನಾಥರು ನೊಂದ ಜೀವಿಗಳು ದಿನಾಲು ಒಳಬಳ್ಳಾರಿ ಶ್ರೀಗಳ ಪ್ರಾರ್ಥನೆ ಮಾಡಿ ತಮ್ಮ ಬದುಕನ್ನು ನೋವನ್ನು ಮರೆಸುವ ಮೂಲಕ ಕಟ್ಟಿಕೊಂಡಿದ್ದಾರೆ. ಮತ್ತು ವಿಶೇಷವಾಗಿ ಈ ಸೇವಾ ಕಾರ್ಯದಲ್ಲಿ ನನಗೆ ಬರುವಂತಹ ಹಲವಾರು ಟೀಕೆ ಟಿಪ್ಪಣಿ ಅವಮಾನ ಅಪಪ್ರಚಾರ ಮತ್ತು ಮತ್ಸರದ ಮನಸ್ಸುಗಳಿಂದ ನನ್ನನ್ನು ಕಾಪಾಡುತ್ತಿದ್ದಾರೆ. ಸ್ವಾರ್ಥದ ಈ ಜಗತ್ತಿನಲ್ಲಿ ಒಳಬಳ್ಳಾರಿ ಶ್ರೀಗಳ ಆಶೀರ್ವಾದ ನಿಸ್ವಾರ್ಥತೆಯ ಪಾಠವನ್ನು ನನ್ನ ಹಾಗೂ ನನ್ನ ಕುಟುಂಬಕ್ಕೆ ಕರುಣಿಸಿರುವುದು ನಮ್ಮ ಕುಟುಂಬದ ಜನ್ಮ ಸಾರ್ಥಕವಾಗಿದೆ. ಈ ಕಾರುಣ್ಯ ಆಶ್ರಮದ ಎಲ್ಲಾ ಸೇವಾ ಕಾರ್ಯಗಳಿಗೆ ಮತ್ತು ಯಶಸ್ವಿಗೆ ಒಳಬಳ್ಳಾರಿಯ ಲಿಂಗೈಕ್ಯ ಶ್ರೀಮ ನಿ.ಪ್ರ ಚನ್ನಬಸವ ಮಹಾಶಿವಯೋಗಿಗಳ ಆಶೀರ್ವಾದವೇ ಕಾರಣ ಈ ಕರುಣೆಯ ಕಾರುಣ್ಯ ಕುಟುಂಬ ಒಳಬಳ್ಳಾರಿ ಶ್ರೀ ಮಠವಾಗಿ ಅಂದ ಅನಾಥರ ಬಾಳಿಗೆ ಬದುಕಿನ ಬಂಗಾರದ ಅರಮನೆಯಾಗಿದೆ. ಒಳಬಳ್ಳಾರಿ ಶ್ರೀ ಮಠದಲ್ಲಿ ಭಕ್ತರಿಗೆ ಶ್ರೀಗಳ ಆಶೀರ್ವಾದ ಕಾರುಣ್ಯ ಕುಟುಂಬದಲ್ಲಿ ಅನಾಥರ ಬಾಳಿಗೆ ಬೆಳಕು ಇದುವೇ ಒಳಬಳ್ಳಾರಿಯ ಸುವರ್ಣಗಿರಿ ಕ್ಷೇತ್ರದ ಸಂಕಲ್ಪ. ಅವರು ನೀಡಿರುವ ಈ ನಮ್ಮ ಜನ್ಮವನ್ನು ಈ ರೀತಿ ಸಮಾಜಪರ ಜನಪರ ಅನಾಥಪರ ಕಾರ್ಯಗಳಲ್ಲಿ ಜಂಗಮನ ಜೋಳಿಗೆಯ ಮೂಲಕ ಬದುಕು ಸಾಗಿಸುತ್ತಿದ್ದೇವೆ. ಇಂತಹ ಸೇವೆಗೆ ಸಹಾಯ ಸಹಕಾರ ಮಾಡುವವರು ಒಳಬಳ್ಳಾರಿಯ ಶ್ರೀಮಠ ಶ್ರೀ ಮಠದ ಭಕ್ತರು ಎಂದು ಮಾತನಾಡಿ ಶ್ರೀಗಳಿಗೆ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಆಶ್ರಮದ ಸದಸ್ಯರಾದ ಸುಜಾತ ಹಿರೇಮಠ. ಸಿಬ್ಬಂದಿಗಳಾದ ಸಿದ್ದಯ್ಯ ಸ್ವಾಮಿ. ಮರಿಯಪ್ಪ. ವಿದ್ಯಾಶ್ರೀ. ಶಂಕ್ರಮ್ಮ. ಶರಣು ಸ್ವಾಮಿ.ಬಸವ ಸ್ವಾಮಿ. ಹಾಗೂ ಆಶ್ರಮದ ಆಶ್ರಯದಾತರುಗಳು ಉಪಸ್ಥಿತರಿದ್ದರು.

