ಕಂಪ್ಲಿ: ಕ್ರೀಡೆಗಳು ಕೇವಲ ದೈಹಿಕ ಫಿಟ್‌ನೆಸ್‌ಗೆ ಮಾತ್ರ ಸೀಮಿತವಾಗಿರದೆ, ಯುವಜನರಲ್ಲಿ ಒಗ್ಗಟ್ಟು, ಶಿಸ್ತು ಮತ್ತು ಸೌಹಾರ್ದತೆಯನ್ನು ಹೆಚ್ಚಿಸುತ್ತವೆ ಎಂದು ವೀರಶೈವ ಲಿಂಗಾಯತ ಮಹಾವೇದಿಕೆಯ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಜಗದೀಶ್ ಹೊಸಕೋಟೆ ಅಭಿಪ್ರಾಯಪಟ್ಟರು.
ತಾಲೂಕಿನ ಮುದ್ದಾಪುರದ ಯಲ್ಲಮ್ಮ ಕ್ಯಾಂಪ್ ನಂ 10 ರ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಗೌಳಿ ಬಾಯ್ಸ್ ಕಂಪ್ಲಿ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಗ್ರಾಮೀಣ ಭಾಗದ ಯುವಕರಲ್ಲಿ ಅದ್ಭುತ ಕ್ರೀಡಾ ಪ್ರತಿಭೆಯಿರುತ್ತದೆ. ಇಂತಹ ಸ್ಥಳೀಯ ಲೀಗ್ ಪಂದ್ಯಾವಳಿಗಳು ಆ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಉತ್ತಮ ವೇದಿಕೆಯಾಗಿವೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾ ಮನೋಭಾವದಿಂದ ಆಟವಾಡುವುದು ಮುಖ್ಯ” ಎಂದು ಅವರು ಆಟಗಾರರಿಗೆ ಕರೆ ನೀಡಿದರು. ಕಾರ್ಯಕ್ರಮದ ಮುಕ್ತಾಯದ ವೇಳೆ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
ಕರ್ನಾಟಕ ಗೌಳಿ ಸಮಾಜದ ಅಧ್ಯಕ್ಷರಾದ ಗೌಳಿ ಕುಮಾರ್ ಮತ್ತು ಕಂಪ್ಲಿ ತಾಲೂಕು ಕರವೇ (ನಾರಾಯಣಗೌಡ ಬಣ) ಅಧ್ಯಕ್ಷರಾದ ಬಳೆ ಮಲ್ಲಿಕಾರ್ಜುನ ವೇದಿಕೆಯಲ್ಲಿ ಮಾತನಾಡಿದರು. ಪ್ರಮುಖರಾದ ಗೌಳಿ ಪಂಪಾಪತಿ, ಹಂಪರೆಡ್ಡಿ, ರಾಜ ಮೆಟ್ರಿ, ಶಂಭುಲಿಂಗ, ಮಂಜುನಾಥ, ಬಿ. ರಾಜಾವಲಿ, ಶಿವಯ್ಯ, ಗುರು, ಮೌಲಹುಸೇನ್, ಗೌಳಿ ಸಮಾಜದ ಮುಖ್ಯಸ್ಥರಾದ
ಗಂಗಾಧರ ,ರುದ್ರೇಶ್ , ಶಿವಯ್ಯ, ರಮೇಶ್,ಲೋಕೇಶ್, ಪಂಪಾಪತಿ,
ಬಸವರಾಜ ಮುದ್ದಾಪುರ, ಮಲ್ಲಿಕಾರ್ಜುನ, ಬಸವರಾಜ, ಗಂಗಾಧರ ಹೊಸಪೇಟೆ, ಸೇರಿದಂತೆ ಗೌಳಿ ಸಮಾಜದ ಯುವ ಮುಖಂಡರು ಹತ್ತಾರು ಗಣ್ಯರು ಉಪಸ್ಥಿತರಿದ್ದರು.

*ಕ್ರಿಕೆಟ್ ಹಬ್ಬಕ್ಕೆ ತೆರೆ:* ಭಾನುವಾರ ಜರುಗಿದ ರೋಮಾಂಚಕ ಮುದ್ದಾಪುರದ ಯಲ್ಲಮ್ಮ ಕ್ಯಾಂಪ್ ಮೈದಾನದಲ್ಲಿ ಧೂಳೆಬ್ಬಿಸಿದ್ದ ‘ಗೌಳಿ ಬಾಯ್ಸ್ ಕಂಪ್ಲಿ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯು ಭಾನುವಾರ (ನವೆಂಬರ್ 1) ಜರುಗಿದ ರೋಚಕ ಫೈನಲ್ ಪಂದ್ಯದೊಂದಿಗೆ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಈ ಟೂರ್ನಿಯಲ್ಲಿ ವಿಜೇತ ತಂಡ
ಹೋಸಪೇಟೆ ಗೌಳೇರ್ ಹಟ್ಟಿ
ರನ್ನರ್ ಅಪ್ ತಂಡ ಗೌಳಿ ಬಾಯ್ಸ್ ಮುದ್ದಾಪುರ ತಂಡ ಕ್ರೀಡಾಭಿಮಾನಿಗಳ ಭಾರಿ ಕರತಾಡನದ ನಡುವೆ ವಿಜೇತ ತಂಡಗಳು ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಪಂದ್ಯ ಮುಕ್ತಾಯದ ನಂತರ ಜರುಗಿದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳು ವಿಜೇತ ಮತ್ತು ರನ್ನರ್-ಅಪ್ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ಬಹುಮಾನಗಳನ್ನು ವಿತರಿಸಿ ಗೌರವಿಸಿದರು. ಕಂಪ್ಲಿ ಸೇರಿದಂತೆ ಸುತ್ತಮುತ್ತಲಿನ ನೂರಾರು ಕ್ರಿಕೆಟ್ ಪ್ರೇಮಿಗಳು ಹಾಜರಿದ್ದು ಕ್ರೀಡಾಕೂಟದ ಯಶಸ್ಸಿಗೆ ಸಾಕ್ಷಿಯಾದರು.

ವರದಿ : ಜಿಲಾನಸಾಬ್ ಬಡಿಗೇರ

 

Leave a Reply

Your email address will not be published. Required fields are marked *