ಮಸ್ಕಿ: ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು ಹಾಗೂ ಪ್ರಥಮ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಪ್ರಸನ್ನ ಪಾಟೀಲ್, ಮಾತನಾಡಿ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಡಾ. ಮುಖರ್ಜಿ ಅವರು ನೀಡಿದ ಕೊಡುಗೆ ಅಪಾರ ವಾಗಿದೆ.ಜಮ್ಮು-ಕಾಶ್ಮೀರದ ಪೂರ್ಣ ವಿಲೀನಕ್ಕಾಗಿ ಹೋರಾಡಿದ ಧೀಮಂತ ನಾಯಕ ಅವರಾಗಿದ್ದಾರೆ. ಅವರ ರಾಷ್ಟ್ರೀಯತಾವಾದದ ಸಿದ್ಧಾಂತಗಳು ಹಾಗೂ ದೇಶಭಕ್ತಿ ಇಂದಿಗೂ ಪ್ರತಿಯೊಬ್ಬ ಕಾರ್ಯಕರ್ತನಿಗೂ ಪ್ರೇರಣೆಯಾಗಿದೆ,” ಎಂದು ಸ್ಮರಿಸಿದರು.ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಾಯಕರು ಹಾಗೂ ಕಾರ್ಯಕರ್ತರು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವ ನಮನಗಳನ್ನು ಅರ್ಪಿಸಿದರು.
ಈ ವೇಳೆ,ಮಸ್ಕಿ ಕ್ಷೇತ್ರದ ಪ್ರಮುಖ ಬಿಜೆಪಿ ನಾಯಕರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯ ಪಕ್ಷದ ಕಾರ್ಯಕರ್ತರು ಭಾಗವಹಿಸಿ ಡಾ. ಮುಖರ್ಜಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಿದರು.

