ಕವಿತಾಳ -: ಕೆಎಸ್ಎನ್ ಸಮಾಜ ಸೇವಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಜುಲೈ 14 ರಂದು ಹಮ್ಮಿಕೊಂಡ ಸಂಕಲ್ಪ ಸಮಾಗಮ ಕಾರ್ಯಕ್ರಮದ ಕರಪತ್ರವನ್ನು ಕಲ್ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಅವರು ಶನಿವಾರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಸಮಿತಿಯು ಹಮ್ಮಿಕೊಂಡಿರುವ ನವಲಿ ಜಲಾಶಯ, ತಿಂತಿಣಿ ಬ್ರಿಡ್ಜ್ ಹತ್ತಿರ ಜಲಾಶಯ ನಿರ್ಮಾಣ ಹಾಗೂ ರಾಯಚೂರು ಜಿಲ್ಲೆಗೆ ಏಮ್ ಮಂಜೂರಾತಿಗಾಗಿ ಒತ್ತಾಯಿಸುವುದು ಸೂಕ್ತ. ಸಂಕಲ್ಪ ಸಮಾಗಮ ಸಮಾವೇಶದಲ್ಲಿ ಚಿಕ್ಕಮಗಳೂರು ಗೌರಿಗದ್ದೆ ಆಶ್ರಮದ ಅವಧೂತ ವಿನಯ ಗುರೂಜಿ ಸೇರಿದಂತೆ ಇನ್ನಿತರ ಮಠಾಧೀಶರು ಭಾಗವಹಿಸಲಿದ್ದು ಸಭೆ ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಯಮನಪ್ಪ ದಿನ್ನಿ, ಎಚ್ ಬಸವರಾಜ, ಈರಣ್ಣ ಕೆಳಗೇರಿ, ಗಫೂರ್ ಸಾಬ್, ಅಳರಪ್ಪ ತುಪ್ಪದೂರು, ನೀಲಕಂಠ ಬೋವಿ, ಕರಿಯಪ್ಪ ದಿನ್ನಿ, ಎಂ.ರಾಘವೇಂದ್ರ ಶೆಟ್ಟಿ, ಯಲ್ಲಪ್ಪ ಮಾಡಗಿರಿ, ರಮೇಶ ನಗನೂರು, ಯಲ್ಲಪ್ಪ ಕೊಡ್ಲಿ, ಯಮನಪ್ಪ ಭಜಂತ್ರಿ, ಮೌನೇಶ ಪೂಜಾರಿ, ರಮೇಶ ಯಾದವ, ಅಜಯ ಕಲಶೆಟ್ಟಿ, ದೇವರಾಜ ರೊಟ್ಟಿ, ಶೈಲೇಶ ಮಿಶ್ರಾ, ನಿಂಗಪ್ಪ ಯಡವಟ್, ರಮೇಶ ಛಲವಾದಿ, ರಮೇಶ ಇರಬಗೇರ, ಮೌನೇಶ ದಿನ್ನಿ, ತಾಯಣ್ಣ ಯಾದವ, ವಿರೂಪಾಕ್ಷಪ್ಪ ಗಲಗ, ವೆಂಕಟೇಶ ಮಡಿವಾಳ ಮತ್ತು ಕೆ.ಎಸ್.ಎನ್. ಸಾಮಾಜಿಕ ಸೇವಾ ಸಮಿತಿಯ ಅಭಿಮಾನಿಗಳು ಉಪಸ್ಥಿತರಿದ್ದರು.

