ನಗರದ ಕುಷ್ಟಗಿ ರಸ್ತೆಯಲ್ಲಿನ ಕರೆಯಪ್ಪ ಲೇಔಟ್ ಕಡೆಗೆ ಹೋಗುವ ದಾರಿಯ ಎಡಗಡೆಯಿರುವ ಎನ್.ಜಿಒ ಕಾಲೋನಿಯಲ್ಲಿ ಈಗಾಗಲೇ ಅನೇಕರು ಮನೆಗಳನ್ನು ಕಟ್ಟಿಸಿ ವಾಸಮಾಡುತ್ತಿದ್ದು, 8 ರಿಂದ 10 ವರ್ಷಗಳೇ ಕಳೆಯುತ್ತಾ ಬಂದರೂ ಸಹ, ಇಲ್ಲಿ ಒಂದು ಚರಂಡಿ ವ್ಯವಸ್ಥೆಯಿಲ್ಲ, ಸಿಸಿ ರಸ್ತೆ ವ್ಯವಸ್ಥೆಯಿಲ್ಲ, ಮಳೆ ಬಂದರೆ ಸಾಕು, ಮನೆಗಳ ಸುತ್ತಮುತ್ತಲಿನಲ್ಲಿ ನೀರು ನಿಂತು, ವಿಪರೀತ ಸೊಳ್ಳೆಗಳು ಹಾಗೂ ವಿಷಪೂರಿತ ಜಂತುಗಳಾದ ಹಾವು, ಚೇಳುಗಳು ಬರುತ್ತಿವೆ. ಇದರ
ಜೊತೆಗೆ ಬಹಳಷ್ಟು ಮಕ್ಕಳು ವಿದ್ಯಾಭ್ಯಾಸ ಮಾಡುವ ಅಂಬಾದೇವಿ ಶಾಲೆಯಿದೆ. ಹೀಗಾಗಿ ಮನೆಗಳ ಮಲೀನ ನೀರು, ಹಾಗೂ ಮಳೆಯ ನೀರು, ನಿಲ್ಲದಂತೆ ಚರಂಡಿ ವ್ಯವಸ್ಥೆ ಮಾಡಬೇಕೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಪಂಪಯ್ಯಸ್ವಾಮಿ ಸಾಲಿಮಠ ಹಾಗೂ ಕಾಲೋನಿಯ ಸ್ಥಳೀಯರಾದ ರಾಜಕುಮಾರ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ದಿನ ಕ್ರಿಮಿಕೀಟಗಳ ಭಯದಲ್ಲೇ ಕಾಲೋನಿಯಲ್ಲಿ ವಾಸಿಸುವ ನಿವಾಸಿಗಳು ಮತ್ತು ಶಾಲೆಯ ಮಕ್ಕಳು ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣವಾಗಿ ನಗರಸಭೆ ಪೌರಾಯುಕ್ತರು, ಸಿಬ್ಬಂದಿಗಳು, ಸದಸ್ಯರು, ಹಾಗೂ ಎಂ.ಎಲ್.ಎ ಮತ್ತು ಎಂಎಲ್ಸಿ ಅವರಲ್ಲಿ ಮಾನವಿ ಮಾಡಿ ಮಾತನಾಡಿದರು. ಮನೆಗಳು ಕಟ್ಟಲು ಅನುಮತಿಕೊಟ್ಟು, ಟ್ಯಾಕ್ಸ್ ಕಟ್ಟಿಸಿಕೊಂಡು, ನಿವಾಸಿಗರ ಹಿತ ಬಯಸದೇ ಇರುವುದು ಸರಿಯಾದ ಕ್ರಮವಲ್ಲ, ಮನೆಗಳ ಮುಂದಿರುವ ರಸ್ತೆ ಸಂಪೂರ್ಣ ಬಂದ್ ಆಗಿ ಕಸ, ಕಡ್ಡಿ, ಮೇವು, ಜಾಲಿಗಿಡಗಳು, ಬೆಳೆದು ನಿಂತಿವೆ ಜೊತೆಗೆ ವಿಷಪೂರಿತ ವಿಷಜಂತುಗಳು ಬರುತ್ತಿವೆ.

ಮಳೆಗಾಲದಲ್ಲಿ ಕನಿಷ್ಠವೆಂದರೂ 4 ರಿಂದ 5 ತಿಂಗಳ ಕಾಲ ನೀರು ನಿಂತು, ವಿಪರೀತ ಸೊಳ್ಳೆಗಳು, ಹಾವು, ಚೇಳುಗಳು, ಬರುವುದು ಸಹಜ. ಈ ಕಾರಣವಾಗಿ ಸಂಬಂಧಪಟ್ಟ ಅಧಿಕಾರಿಗಳು ಕುಷ್ಟಗಿ ರಸ್ತೆಯಲ್ಲಿನ ಎನ್.ಜಿಒ ಕಾಲೋನಿಯ ಕಡೆಗೆ ಗಮನಕೊಟ್ಟು ಚರಂಡಿ ವ್ಯವಸ್ಥೆ ಹಾಗೂ ಸಿಸಿ ರಸ್ತೆ ವ್ಯವಸ್ಥೆ ಮತ್ತು ಸುತ್ತಮುತ್ತ ನೀರು ನಿಲ್ಲುವುದನ್ನು ತಡೆಗಟ್ಟಲು ನಗರಸಭೆ ಅಧಿಕಾರಿಗಳಲ್ಲಿ ಎಂ.ಎಲ್.ಎ, ಹಾಗೂ ಎಂಎಲ್ಸಿಯವರಲ್ಲಿ ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *