ಕವಿತಾಳ -: ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಮಾಜಿ ಸಚಿವ ಎನ್.ಎಸ್. ಬೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದಲ್ಲಿ ಶನಿವಾರ ವಿವಿಧ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಇಲ್ಲಿನ ಶಿವಪ್ಪ ತಾತನ ಮಠದಿಂದ ಅಗಸಿಯವರೆಗೆ ರೂ. 45 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ 13ನೇ ವಾಡ್ ೯ನ ಈರಣ್ಣ ಅವರ ಮನೆಯಿಂದ ವೆಂಕಟೇಶ ಗಚ್ಚಿನಮನಿ ಅವರ ಮನೆಯವರೆಗೆ ರೂ. 20 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಉತ್ತಮ ಸ್ಥಿತಿಯಲ್ಲಿರುವ ರಸ್ತೆಯ ದುರಸ್ತಿಗೆ 50 ಲಕ್ಷ ರೂ. ವೆಚ್ಚದಲ್ಲಿ ಮತ್ತೊಂದು ರಸ್ತೆ ನಿರ್ಮಿಸಲು ಅಧಿ ಕಾರಿಗಳು ಅವೈಜ್ಞಾನಿಕವಾಗಿ ಜಿಪಿಎಸ್ ಮಾಡಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ರಸ್ತೆ ನಿರ್ಮಾಣಕ್ಕೆ ತೋರಿಸಿದ ಜಾಗ ಒಂದು ಕಡೆಯಾದರೆ, ಜಿಪಿಎಸ್ ಮಾಡಿದ ಜಾಗವೇ ಬೇರೆಯಾಗಿತ್ತು. ಅದನ್ನು ಗಮನಿಸಿದ ಸಚಿವರು ಸ್ಥಳದಲ್ಲೇ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೆ ಕಾಮಗಾರಿಗೆ ಭೂಮಿ ಪೂಜೆ ಮಾಡದೆಯೇ ಅಲ್ಲಿಂದ ವಾಪಸಾದರು.

ಹಳ್ಳಿ ಹೊಸೂರು ಗ್ರಾಮದಲ್ಲಿ ಮಾನ್ವಿ-ಸಿರವಾರ ಮುಖ್ಯ ರಸ್ತೆಯಿಂದ ಹಳ್ಳಿ ಹೊಸೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆಯ ನಿರ್ಮಾಣಕ್ಕೆ 50ಲಕ್ಷ ರೂಪಾಯಿ, ಹಳ್ಳಿ ಹೊಸೂರು ಕ್ಯಾಂಪ್ (ಬಾಜಿರಡ್ಡಿ) ಕ್ಯಾಂಪ್ ನಲ್ಲಿ ಆಂಜಿನಯ್ಯ ದೇವಸ್ಥಾನದ ಸಮುದಾಯ ಭವನಕ್ಕೆ 10 ಲಕ್ಷ ರೂ.ಗಳ ಶಿಲಾನ್ಯಾಸ ನೆರವೇರಿಸಿದರು.

ಕಾಮಗಾರಿ ವಿಳಂಬವಾದರೆ ಗ್ರಾಮೀಣ ಪ್ರದೇಶಗಳಲ್ಲಿ ಜನರ ಓಡಾಟಕ್ಕೆ ತೊಂದರೆ ಉಂಟಾಗುತ್ತದೆ, ಯಾವುದೇ ತೊಂದರೆಯಾಗದಂತೆ ಎಚರಿಕೆಯಿಂದ ಕಾಮಗಾರಿ ಪೂರ್ಣಗೊಳಿಸಲು ಕೆಆರ್ ಐಡಿ ಎಲ್ ಜೆಇ ರಾಘವೇಂದ್ರ ಅವರಿಗೆ ಸೂಚಿಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ರಸ್ತೆ ಕಾಮಗಾರಿ ಭೂಮಿ ಪೂಜೆ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾರರ “ಪಟ್ಟಿ ಪರಿಷ್ಕರಣೆ ಮಾಡಿಸಿಕೊಳ್ಳಬೇಕು. ಹೊಸ ವೋಟರ್ ಐಡಿ ಲಿಸ್ಟ್‌ನಲ್ಲಿ ಹೆಸರು ಬಂದರೆ ಮಾತ್ರ ನೀವು ಮತದಾನ ಮಾಡಲು ಅರ್ಹರಾಗುತ್ತೀರಿ, ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗಿರುವ ಸ್ಥಳೀಯರು ತಕ್ಷಣ ಊರಿಗೆ ಬಂದು ತಮ್ಮ ಎಸ್.ಐ.ಆರ್ ಪರಿಷ್ಕರಣೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಕೆಲವು ಪತ್ರಿಕೆಗಳಲ್ಲಿ ಕಾಮಗಾರಿಗಳು ಕಳಪೆಯಾಗಿವೆ ಹಾಗೂ ಇದಕ್ಕೆ ಮಾಜಿ ಸಚಿವರು ಮತ್ತು ಶಾಸಕರ ನಿರ್ಲಕ್ಷ್ಯವೇ ಕಾರಣ ಎಂದು ವರದಿಯಾಗಿರುವುದನ್ನು ಅವರು ತಳ್ಳಿ ಹಾಕಿದರು.

ನಾವು ಇದುವರೆಗೆ ಯಾವುದೇ ಅಭಿವೃದ್ಧಿ ಕೆಲಸಗಳಲ್ಲಿ ನಿರ್ಲಕ್ಷ್ಯ ವಹಿಸಿಲ್ಲ. ಒಂದು ವೇಳೆ ಎಲ್ಲಾದರೂ ಕಳಪೆ ಕಾಮಗಾರಿಯಾಗಿದ್ದರೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಲು ಯಾರಿಗೂ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲೆಯಾದ್ಯಂತ ಅನೇಕ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿದ್ದು, ಕವಿತಾಳ ಪಟ್ಟಣದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳಿಗೆ ಬೇಡಿಕೆ ಇದೆ ಮುಂದಿನ ದಿನಗಳಲ್ಲಿ ಅವುಗಳ ಈಡೇರಿಕೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ರೈತರ ಬೆಳೆ ಪರಿಹಾರದ ಕುರಿತು ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿ ಸಮೀಕ್ಷೆ ನಡೆಸುತ್ತಿವೆ. ಸಮೀಕ್ಷೆ ವರದಿ ಬಂದ ನಂತರ ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಚರ್ಚಿಸಿ ಶೀಘ್ರದಲ್ಲೇ ಪರಿಹಾರ ಘೋಷಣೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕ ಜಿ.ಹಂಪಯ್ಯ ನಾಯಕ, ಮುಖಂಡರಾದ ಶಿವುಕುಮಾರ ಚುಕ್ಕಿ ಸಿರವಾರ, ಕಿರಲಿಂಗಪ್ಪ, ಶೇಖರಪ್ಪ ಸಾಹುಕಾರ ಹಟ್ಟಿ, ಶಿವಣ್ಣ ವಕೀಲ, ಮಾಳಪ್ಪ ತೋಳ, ಬ್ರಿಜೇಶ್ ಪಾಟೀಲ್, ಗಂಗಪ ದಿನ್ನಿ, ಅಯ್ಯಪ್ಪ ನೀಲಗಲ್, ತಿಪ್ಪಯ್ಯ ಸ್ವಾಮಿ, ಚಾಂದ್ ಪಾಷ್, ಕೆ. ಶರಣಯ್ಯ ನಾಯಕ ಗುಡದಿನ್ನಿ, ಕರಿಯಪ್ಪ ಅಡೇದ್, ಮೌನೇಶ ಹಿರೇಕುರಬರು, ಓವಣ್ಣ, ಸೈಯದ್ ರಹಿಮುದ್ದಿನ್ ದಣಿ, ಅಮರೇಶ ಕಟ್ಟಿಮನಿ, ಸಣ್ಣ ಕರಿಯಪ್ಪ ಮಡಿವಾಳ, ನರಸಪ್ಪ, ರುದ್ರಪ್ಪ ಅಂಗಡಿ, ಚುಕ್ಕಿ ಶಿವಕುಮಾರ, ಆಹಾರ ಇಲಾಖೆಯ ನಿವೃತ್ತ ಅಧಿಕಾರಿ ಶಿವಪ್ಪಗೌಡ ಹಳ್ಳಿಹೊಸೂರು, ಅತ್ತನೂರು ಶಿವಕುಮಾರ್, ಲಿಂಗಪ್ಪ, ಚಂದ್ರಪ್ಪಗೌಡ ಬಸವರಾಜಗೌಡ ಮಾಡಗಿರಿ, ತಿಮ್ಮಪ್ಪ, ಚಿನ್ನಪ್ಪ, ಬಸಯ್ಯಸ್ವಾಮಿ, ಕೆ.ಶರಣಪ್ಪ, ಜಯವಂತ, ಬಾಲಪ್ಪ ಹುಸೇನ್ ಸಾಬ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *