ರಾಯಚೂರು ಜೂನ್ 17 (ಕರ್ನಾಟಕ ವಾರ್ತೆ): ಬೆಂಗಳೂರಿನ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೆಶಕರಾದ ದೀಪಾಶ್ರೀ ಕೆ. ಅವರು ಇತ್ತೀಚಿಗೆ ರಾಯಚೂರು ಜಿಲ್ಲೆಗೆ ಅಗಮಿಸಿ ಜಿಲ್ಲೆಯಲ್ಲಿ ನಿಗಮದಿಂದ ಸಾಲ ಸೌಲಭ್ಯ ಪಡೆದ ಫಲಾನುಭವಿಗಳ ಘಟಕಗಳನ್ನು ಪರಿಶೀಲನೆ ಮಾಡಿ, ಫಲಾನುಭವಿಗಳಿಗೆ ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ನಿಯಮಿತವಾಗಿ ಸಾಲದ ಮರು ಪಾವತಿಯನ್ನು ಮಾಡುವಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ರಾಯಚೂರು ತಾಲೂಕು ಎಡಿಓ ಸುಧಾಕರ್, ರಮೇಶ ಸೇರಿದಂತೆ ಇತರರು ಇದ್ದರು.

