ಲಿಂಗಸೂರು: ಪಟ್ಟಣದ ಶ್ರೀಮತಿ ಶಕುಂತಲಾ ಹನುಮಂತಪ್ಪ ಪೊ ಪಾ ಹಿರಿಯ ಮುಖ್ಯಗುರುಗಳು ಇವರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುಂತಗೋಳ ಶಾಲೆಯಲ್ಲಿ ಸೇವೆ ಸಲ್ಲಿಸಿ, ವಯೊನಿವೃತ್ತಿ ಹೊಂದಿದ ಪ್ರಯುಕ್ತ ಸನ್ಮಾನ ಮತ್ತು ಅಭಿನಂದನೆ ಕಾರ್ಯಕ್ರಮ ನಡೆಯಿತು.ಉದ್ಘಾಟನೆಯನ್ನು ಡಾ.ರುದ್ರಗೌಡ ಪಾಟೀಲ್ ಮುಖ್ಯವೈದ್ಯಾಧಿಕಾರಿಗಳು ನೇರವೆರಿಸಿ ಮಾತನಾಡಿ ಶ್ರೀ ಮತಿ ಶಕುಂತಲಾ ಹನುಮಂತಪ್ಪ ಪೊ ಪಾ ಹಿರಿಯ ಮುಖ್ಯಶಿಕ್ಷಕಿಯವರು ಸುಧೀರ್ಘ ಮುವತ್ತು ವರ್ಷಕ್ಕೂ ಹೆಚ್ಚು ಕಾಲ ಶಿಕ್ಷಕಿಯಾಗಿ ಸೇವೆಸಲ್ಲಿಸಿ ಅಪಾರ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸಿ ಭವಿಷ್ಯ ರೂಪಿಸಿ ಸಮಾಜಕ್ಕೆ ದೊಡ್ಡ ಸೇವೆ ಮಾಡಿದ್ದು ಹೆಮ್ಮೆಯ ವಿಚಾರ,ಶಿಕ್ಷಕ ವೃತ್ತಿ ಪವಿತ್ರವಾದದ್ದು, ಜೊತೆಗೆ ನಮ್ಮ ಕುಟುಂಬ ಅವರ ಕುಟುಂಬ ಹಲವು ವರ್ಷಗಳ ಕಾಲ ಉತ್ತಮ ಸಂಬಂಧ ಇದೆ, ಮುಂದಿನ ತಮ್ಮ ನಿವೃತ್ತಿ ಜೀವನ ಆರೋಗ್ಯ ಸುಖ ನೆಮ್ಮದಿಯಿಂದ ಕೂಡಿರಲಿ ಎಂದು ಹೇಳಿದರು. ನಂತರ ಶಿಕ್ಷಕರು,ಸಹೋದ್ಯೋಗಿಗಳು, ಕುಟುಂಬವರ್ಗ,ವಿದ್ಯಾರ್ಥಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಅಮರೆಶಪ್ಪ ಹೂನೂರು ನಿವೃತ್ತ ತಹಶಿಲ್ದಾರ,ಶರಣೆಗೌಡ ಬೂದಗುಂಪ,ಶರಣಬಸವ ನಾಡಗೌಡ,ಸಂಗಪ್ಪ ದೈಹಿಕ ಶಿಕ್ಷಕರ ಸಂಘ,ಭೀಮಣ್ಣ ನಾಯಕ,ಗದ್ದೆಪ್ಪ ಪ್ರಭಾರಿ ಮುಖ್ಯಗುರು , ಹುಲಗಪ್ಪ ಮುಖ್ಯಗುರು ಹಾಗೂ ಇನ್ನೂ ಅನೇಕರು ಇದ್ದರು. ಕಾರ್ಯಕ್ರಮ ನಿರೂಪಣೆಯನ್ನು ಜಮದಗ್ನಿ ರವರು ನಡೆಸಿಕೊಟ್ಟರು.

Leave a Reply

Your email address will not be published. Required fields are marked *