ರಾಯಚೂರು, ಜೂನ್ 13: ರಾಯಚೂರು ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಹೆಚ್ಚುವರಿ ಬಸ್‌ಗಳ ಸಂಚಾರ, ಆನ್‌ಲೈನ್ ಟಿಕೆಟ್ ವ್ಯವಸ್ಥೆ ಹಾಗೂ ನ್ಯಾಯಾಲಯ ಮತ್ತು ವಿಧಾನ ಸೌಧಕ್ಕೆ ನೇರ ಸಿಟಿ ಬಸ್ ಸೌಲಭ್ಯ ಕಲ್ಪಿಸುವಂತೆ AIMIM ರಾಯಚೂರು ನಗರ ಅಧ್ಯಕ್ಷ ಶಬ್ಬೀರ್ ಅಹ್ಮದ್ ಹೌದೊಡ್ಡಿ ಅವರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಸ್‌ಗಳ ಕೊರತೆಯಿಂದ ವೃದ್ಧರು, ಮಹಿಳೆಯರು, ರೋಗಿಗಳು ಹಾಗೂ ಗ್ರಾಮೀಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಬಸ್‌ಗಳು ಲಭ್ಯವಾಗದೇ ಇರುವುದರಿಂದ ವಿದ್ಯಾರ್ಥಿಗಳು ನಿಂತುಕೊಂಡೇ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರಸ್ತುತ ಬಸ್‌ಗಳಲ್ಲಿ ಟಿಕೆಟ್ ವಿತರಣೆಯ ಸಂದರ್ಭದಲ್ಲಿ ಚಿಲ್ಲರೆ ಹಣದ ಸಮಸ್ಯೆಯಿಂದ ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ಗೊಂದಲಗಳು ಉಂಟಾಗುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಫೋನ್‌ಪೇ, ಗೂಗಲ್ ಪೇ ಸೇರಿದಂತೆ ಯುಪಿಐ ಆಧಾರಿತ ಆನ್‌ಲೈನ್ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಲಾಗಿದೆ.

ಇದಲ್ಲದೆ, ಇಕ್ಲಾಸ್‌ಪುರದಲ್ಲಿರುವ ವಿಧಾನ ಸೌಧ ಹಾಗೂ ದೇವದುರ್ಗ ನಗರದಲ್ಲಿರುವ ನೂತನ ನ್ಯಾಯಾಲಯಕ್ಕೆ ಸಾರ್ವಜನಿಕರು, ವಕೀಲರು ಮತ್ತು ಫಿರ್ಯಾದಿದಾರರು ಪ್ರತಿದಿನ ಸರ್ಕಾರಿ ಕೆಲಸಗಳಿಗಾಗಿ ಭೇಟಿ ನೀಡುತ್ತಿದ್ದು, ಸೂಕ್ತ ಸಾರಿಗೆ ವ್ಯವಸ್ಥೆಯ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಮತ್ತು ವಿಧಾನ ಸೌಧದ ಆವರಣದವರೆಗೆ ನೇರ ಸಿಟಿ ಬಸ್ ಸೇವೆ ಆರಂಭಿಸಬೇಕೆಂದು ಮನವಿ ಮಾಡಲಾಗಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಸಂಬಂಧಿತ ಅಧಿಕಾರಿಗಳು ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಶಬ್ಬೀರ್ ಅಹ್ಮದ್ ಹೌದೊಡ್ಡಿ ಅವರು ವಿನಂತಿಸಿದ್ದಾರೆ.

ಈ ಮನವಿ ಪತ್ರದ ಪ್ರತಿಗಳನ್ನು ರಾಯಚೂರು ಜಿಲ್ಲಾಧಿಕಾರಿಗಳಿಗೆ, ರಾಯಚೂರು ಶಾಸಕ ಹಾಗೂ ದೇವದುರ್ಗ ಶಾಸಕ ಅವರಿಗೂ ಸಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ AIMIM ಮುಖಂಡ ಶಇಬಾಜ್ ಖಾನ್, ವಾರ್ಡ್ ಸಂಖ್ಯೆ 18ರ ಸಂತೋಷ್, ಈರಣ್ಣ, ಮೊಹಮ್ಮದ್ ಸಫಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

ಭಜನೆಗೆ ಸಕಾರಾತ್ಮಕ ಮನೋಭಾವ ವೃದ್ಧಿ : ವಾಗೀಶಾಚಾರ್ ಬಳ್ಳಾರಿ / ಕಂಪ್ಲಿ : ಅಧಿಕ ಮಾಸದಲ್ಲಿ ಭಗವಂತನ ಭಜನೆ ಮಾಡುವುದರಿಂದ ಸಕಾರಾತ್ಮಕ ಮನೋಭಾವನೆಯನ್ನು ವೃದ್ಧಿಗೊಳಿಸುತ್ತದೆ ಎಂದು ಗಂಗಾವತಿಯ ವಿಜಯಧ್ವಜ ವಿದ್ಯಾಪೀಠದ ಪ್ರಾಧ್ಯಾಪಕ ಪಂಡಿತ್ ವಾಗೀಶಾಚಾರ್ ಗೋರೆಬಾಳ ಹೇಳಿದರು. ಕಂಪ್ಲಿ-ಕೋಟೆಯ ಶ್ರೀಪಟ್ಟಾಭಿರಾಮಚಂದ್ರದೇವರ ದೇವಸ್ಥಾನದಲ್ಲಿ ಅಧಿಕ ಮಾಸದ ಮಂಗಳೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಭಜನಾ ಸಮಾರೋಪಕ್ಕೆ ಚಾಲನೆಯೊಂದಿಗೆ ಅಧಿಕ ಮಾಸ ಮಹಾತ್ಮೆ ಕುರಿತು ಉಪನ್ಯಾಸ ನೀಡಿ, ದಾನ ಧರ್ಮ ಪುಣ್ಯ ಪರೋಪಕಾರ್ಯಗಳನ್ನು ಮಕ್ಕಳಿಗೆ ಹೇಳಿಕೊಡುವ ಅಗತ್ಯವಿದೆ. ಮನಸ್ಸನ್ನು ಭಗವಂತನದಲ್ಲಿ ಸ್ಥಿರವಾಗಿ ನಿಲ್ಲಿಸಲು ನಿತ್ಯ ಜಪ ತಪ, ಭಜನೆ, ಆರಾಧನೆಯಲ್ಲಿ ತೊಡಗಿಕೊಳ್ಳಬೇಕು ಎಂದರು. ಕೋಟೆಯ ಶ್ರೀರಾಮ ಮಹಿಳಾ ಭಜನಾ ಮಂಡಳಿಯಿಂದ ಕಳೆದ 30ದಿನಗಳಿಂದ ಬ್ರಾಹ್ಮಣ ಸುವಾಸಿನಿಯರು ಹಮ್ಮಿಕೊಂಡಿದ್ದ ಭಜನೆಯನ್ನು ಮಂಗಳಗೊಳಿಸಲಾಯಿತು. ಈ ನಿಮಿತ್ತ ಶ್ರೀರಾಮದೇವರು, ಲಕ್ಷ್ಮಿ ನರಸಿಂಹ, ಪ್ರಾಣದೇವರು, ರುದ್ರದೇವರು, ರಾಯರ ಮೃತ್ತಿಕಾ ವೃಂದಾವನಗಳಿಗೆ ಸುಪ್ರಭಾತ, ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇವೆ ಸಲ್ಲಿಸಲಾಯಿತು. ಶ್ರೀರಾಮ ಮಹಿಳಾ ಭಜನಾ ಮಂಡಳಿಯ ಪ್ರಮುಖರಾದ ಸಾವಿತ್ರಿಬಾಯಿ ಜೋಷಿ, ರಮಾ ಪುರೋಹಿತ್, ವೇದಾ ಜೋಷಿ, ಚಂದ್ರಿಕಾ ಸಗರದ, ರಾಧಿಕ ಜೋಷಿ, ಜ್ಯೋತಿ ಗುಡಿ, ವಾಣಿ ಜೋಷಿ, ಲತಾ ರಾಮಾಯಣ, ರಚನಾ ಜೋಷಿ, ಸುಧಾ ವೈದ್ಯ, ಐಶ್ವರ್ಯ ಜೋಷಿ, ವರ್ಷಾವಿಕ್ರಮ್ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.