ಬಳ್ಳಾರಿ / ಕಂಪ್ಲಿ : ಭಾರತೀಯ ಜನತಾ ಪಾರ್ಟಿಯ ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಂಪ್ಲಿ ಮಂಡಲದ ಓ.ಬಿ.ಸಿ. ಮೋರ್ಚಾದ ನೂತನ ಅಧ್ಯಕ್ಷರಾಗಿ ಬಂಡಿ ಜಡೆಪ್ಪ ನೇಮಕಗೊಂಡಿದ್ದಾರೆ.
ಬಿಜೆಪಿ ಪಕ್ಷದ ಸಂಘಟನೆಯನ್ನು ಸದೃಢವಾಗಿ ಮತ್ತು ಅತ್ಯಂತ ಬಲಿಷ್ಠವಾಗಿ ಕಟ್ಟಲು ನಿಮ್ಮ ಪರಿಶ್ರಮ ಅತ್ಯವಶ್ಯವಾಗಿದೆ. ಸಂಪೂರ್ಣ ಪಕ್ಷದ ಹಿತದೃಷ್ಟಿಯಿಂದ ಪಕ್ಷದ ಶಿಸ್ತು ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಅವುಗಳನ್ನು ಅಳವಡಿಸಿಕೊಂಡು ಮುಂದಿನ ವರ್ಷದ ಅವಧಿಯಲ್ಲಿ ಪಕ್ಷದ ಸಂಘಟಣೆಯತ್ತ ಹೆಚ್ಚಿನ ಗಮನಹರಿಸಿ ಕಾರ್ಯಕರ್ತರಿಗೆ, ಸ್ಫೂರ್ತಿಯಾಗಿ, ಶಕ್ತಿಯಾಗಿ, ರಾಜಕೀಯವಾಗಿ, ಪಕ್ಷದ ಹಿತದೃಷ್ಟಿಯಿಂದ ಪಕ್ಷದ ಒಳಿತಿಗಾಗಿ ಪಕ್ಷದ ಸರ್ವತೋಮುಖ ಅಭಿವೃದ್ಧಿಗೆ ಪ್ರಮಾಣಿಕವಾಗಿ ಕೆಲಸ ನಿರ್ವಹಿಸಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.
ಇಲ್ಲಿನ ಕೊಟ್ಟಾಲ್ ರಸ್ತೆ ಬಳಿಯಲ್ಲಿರುವ ತುಂಗಭದ್ರ ಕಾರ್ಯಾಲಯದಲ್ಲಿ ಮಾಜಿ ಶಾಸಕ ಟಿ.ಎಚ್.ಸುರೇಶಬಾಬು ಅವರು ಆದೇಶ ಪ್ರತಿ ನೀಡಿದರು.

ನೂತನ ಅಧ್ಯಕ್ಷ ಬಂಡಿ ಜಡೆಪ್ಪ ಆದೇಶ ಪ್ರತಿ ಸ್ವೀಕರಿಸಿ ಮಾತನಾಡಿ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ. ಜನಾರ್ಧನ ರೆಡ್ಡಿ, ಮಾಜಿ ಶಾಸಕ ಸುರೇಶಬಾಬು, ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಹಾಗೂ ಎಲ್ಲ ಹಿರಿಯ ಬಿಜೆಪಿ ಮುಖಂಡರಿಗೂ ಅವರು ನಮ್ಮನ್ನು ಗುರುತಿಸಿ, ಕಂಪ್ಲಿ ಮಂಡಲ ಅಧ್ಯಕ್ಷರನ್ನಾಗಿ ನೇಮಕಗೊಳಿಸಿರುವುದಕ್ಕೆ ತುಂಬು ಹೃದಯದ ಕೃತಜ್ಞತೆಗಳನ್ನು ತಿಳಿಸಿದರು.

Leave a Reply

Your email address will not be published. Required fields are marked *