ಸಿಂಧನೂರು — ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಹುಸೇನ್ ಬಿ ವಯಸ್ಸು-62 ಇವರು ಅನಾರೋಗ್ಯದಿಂದಾಗಿ ಮರಣ ಹೊಂದಿದ್ದರು. ಇವರಿಗೆ ಯಾರೂ ಇಲ್ಲದ ಅಂಶವನ್ನು ಗಮನದಲ್ಲಿಟ್ಟುಕೊಂಡು ಅವರ ಪರಿಚಯಸ್ತರ ಒಪ್ಪಿಗೆಯ ಮೇರೆಗೆ ಮತ್ತು ಕಾರುಣ್ಯ ಸಂಸ್ಥೆಯ ಪದಾಧಿಕಾರಿಗಳ ಒಪ್ಪಿಗೆಯೊಂದಿಗೆ ರಾಯಚೂರಿನ ರಿಮ್ಸ್ ಮೆಡಿಕಲ್ ಕಾಲೇಜಿಗೆ ಇವರ ನೇತ್ರ ಮತ್ತು ದೇಹ ದಾನವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ನಾವು ಅನಾಥರಾಗಿರಬಹುದು ಆದರೆ ಸಮಾಜ ಅನಾಥವಾಗಬಾರದು ನಮ್ಮ ಕಣ್ಣುಗಳು ಇನ್ನೊಬ್ಬರ ಬಾಳಿಗೆ ಬೆಳಕಾಗಲಿ ಮತ್ತು ದೇಹವು ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಿ ಎನ್ನುವ ಉದ್ದೇಶದಿಂದ ಈ ತಾಯಿಯ ನೇತ್ರ ಹಾಗೂ ದೇಹ ದಾನ ಮಾಡಲಾಗಿದೆ. ಈ ತಾಯಿಯ ಆತ್ಮಕ್ಕೆ ಆ ಭಗವಂತ ನಿರಂತರ ಆತ್ಮ ಶಾಂತಿಯನ್ನು ಕರುಣಿಸಲಿ ಎನ್ನುವ ವಿಶೇಷ ಪ್ರಾರ್ಥನೆಯೊಂದಿಗೆ ಈ ತಾಯಿಯ ದೇಹವನ್ನು ರಿಮ್ಸ್ ಮೆಡಿಕಲ್ ಕಾಲೇಜಿಗೆ ಒಪ್ಪಿಸಲಾಗಿದೆ. ನಮ್ಮ ಸಂಸ್ಥೆ ಹುಟ್ಟಿದಾಗ ನಿಂದಲೂ ಸಹ ಸಾರ್ವಜನಿಕರಲ್ಲಿಯೂ ಕೂಡ ನೇತ್ರದಾನ ಮತ್ತು ದೇಹ ದಾನದ ಜಾಗೃತಿಗಳನ್ನು ಮಾಡುತ್ತಿರುವುದು ಇಡೀ ನಾಡಿಗೆ ಗೊತ್ತಿರುವಂತಹ ವಿಚಾರ ನಮ್ಮ ಸಂಸ್ಥೆಯೂ ಬರೀ ವೃದ್ಧಾಶ್ರಮ ಹಾಗೂ ಅನಾಥಾಶ್ರಮ ನಡೆಸುವುದಲ್ಲದೆ ಸಮಾಜಕ್ಕೆ ಉಪಯೋಗವಾಗುವಂತಹ ಹಲವಾರು ಅಭಿಯಾನಗಳನ್ನು ಕೂಡ ಹಮ್ಮಿಕೊಳ್ಳುತ್ತಿದ್ದೇವೆ. ನಮ್ಮ ಸಿಂಧನೂರಿನ ಇಬ್ಬರು ಶಾಸಕರುಗಳು ನಮ್ಮ ಸಂಸ್ಥೆಗೆ ಸ್ವಂತ ಜಾಗ ಹಾಗೂ ಅನುದಾನ ಕಲ್ಪಿಸಿಕೊಟ್ಟಲ್ಲಿ ತಾಲೂಕಾಡಳಿತ ಜಿಲ್ಲಾಡಳಿತ ಮತ್ತು ಸರ್ಕಾರದೊಂದಿಗೆ ಕೆಲಸ ಮಾಡುವಂತಹ ಹಲವಾರು ಯೋಜನೆಗಳನ್ನು ಕೂಡ ರೂಪಿಸಿದ್ದೇವೆ. ಈಗಾಗಲೇ ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿರುವ ಸಖಿ ಸೆಂಟರ್ ನಲ್ಲಿ ಆಶ್ರಯ ಪಡೆದಿದ್ದ ಹಲವಾರು ಮಹಿಳೆಯರನ್ನು ಕೂಡ ರಕ್ಷಣೆ ಮಾಡಿ ಅಷ್ಟೇ ಕಲ್ಪಿಸುತ್ತಿದ್ದೇವೆ. ಈ ಎಲ್ಲಾ ಸೇವೆಗೆ ಮಹಾದಾನಿಗಳೇ ನಮಗೆ ಬಹುದೊಡ್ಡ ಶಕ್ತಿಯಾಗಿ ನಮ್ಮೆಲ್ಲರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಮಕ್ಕಳಿಗೆ ಶಿಕ್ಷಣ ಕೊಡಿಸುವ ಪೋಷಕರು ಕೂಡ ನೇತ್ರದಾನ ದೇಹ ದಾನ ಮಾಡಿದರೆ ತಮ್ಮ ಬದುಕು ಸಾರ್ಥಕವಾಗುತ್ತದೆ ಎನ್ನುವ ಆಶಯ ಕಾರುಣ್ಯ ಕುಟುಂಬದ್ದು. ನಮ್ಮ ಈ ಸೇವೆಗೆ ರಿಮ್ಸ್ ಮೆಡಿಕಲ್ ಕಾಲೇಜಿನ ಎಲ್ಲಾ ವಿಭಾಗದ ವೈಜ್ಞಾನಿಕಾರಿಗಳು ಸಹಕರಿಸುತ್ತಿರುವುದು. ಇಂತಹ ಸೇವೆಗೆ ಪ್ರೋತ್ಸಾಹಿಸಿದಂತಾಗಿದೆ ಎಂದು ಮಾತನಾಡಿ ರಿಮ್ಸ್ ಮೆಡಿಕಲ್ ಕಾಲೇಜಿನ ಶವ ವಾಹನಕ್ಕೆ ದೇಹವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬೂದಿವಾಳ ಗ್ರಾಮದ ಬಡೇಸಾಬ್ ತಂ.ಮೊಹಮ್ಮದ್ ಸಾಬ್. ಜಲಾಲ್ ತಂ. ಮೊಹಮ್ಮದ್ ಸಾಬ್. ಬಸವರಾಜ ತಂ.ಹನುಮಂತಪ್ಪ ಗುಡಿಹಾಳ. ಹುಸೇನ್ ಬಾಷಾ ತಂ. ಆಲಂ ಸಾಬ್. ಖಾದರ್ ಭಾಷಾ ತಂ.ಹುಸೇನ್ ಸಾಬ್ ಹಾಗೂ ರಿಮ್ಸ್ ಮೆಡಿಕಲ್ ಕಾಲೇಜಿನ ಅಂಗ ರಚನಾ ಶಾಸ್ತ್ರ ವಿಭಾಗದ ಸಿಬ್ಬಂದಿಗಳಾದ ಜಬ್ಬಿ. ವಾಜಿದ್. ಮತ್ತು ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ ಹಾಗೂ ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ. ಸಿದ್ದಯ್ಯ ಸ್ವಾಮಿ ಮರಿಯಪ್ಪ ಜ್ಯೋತಿ ಇವರುಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *