ಮಾನ್ವಿ : ಹಾಸ್ಟೆಲ್ ಜೀವನ ಎನ್ನುವುದು ವಿದ್ಯಾರ್ಥಿಗಳಿಗೆ ಸ್ವಾವಲಂಬನೆ ಮತ್ತು ಶಿಸ್ತನ್ನು ವಿದ್ಯಾರ್ಥಿಗಳು ಕಲಿಸುವ ದೊಡ್ಡ ಪಾಠಶಾಲೆ. ಮನೆಯಿಂದ ದೂರವಿದ್ದರೂ ಎಲ್ಲರೂ ಒಂದೇ ಸಮಾಜದ ಉತ್ತಮ ಕುಟುಂಬದಂತೆ ಬಾಳಿ, ಇಂದು ಉನ್ನತ ಶಿಕ್ಷಣ ಮುಗಿಸಿ ಹೊರಡುತ್ತಿರುವ ವಿದ್ಯಾರ್ಥಿಗಳು ಸಮಾಜದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು,” ಎಂದು ಆಂಜನೇಯ ನಸಲಾಪುರ ತಿಳಿಸಿದರು.ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಬಿ.ಎ. ಬಿ.ಕಾಂ ಮತ್ತು ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಸಮಾರಂಭ ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ಯುವಕರಲ್ಲಿ ನೈತಿಕ ಮೌಲ್ಯಗಳು ಕಾಣದಾಗಿವೆ. ವಿದ್ಯಾರ್ಥಿಗಳಲ್ಲಿ ಶಾಂತಿ ಸೌಹಾರ್ದತೆ, ಭ್ರಾತೃತ್ವ ಮನೋಭಾವನೆಗಳನ್ನು ಬೆಳಸಿಕೊಳ್ಳಬೇಕು ವಸತಿ ನಿಲಯದಲ್ಲಿರುವ ಅನೇಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮವಾದ ಜ್ಞಾನವನ್ನು ಪಡೆದು ಕೊಳ್ಳಬೇಕು. ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಕಳೆದ ದಿನಗಳು ಮರೆಯಲಾಗದು.ಇಲ್ಲಿ ಕಲಿತ ಮೌಲ್ಯಗಳು ನಿಮ್ಮ ಭವಿಷ್ಯದ ಸಾಧನೆಗೆ ದಾರಿದೀಪವಾಗಲಿ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಆಗಿಮಿಸಿದ ಸಹಾಯಕ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ಚಂದ್ರಶೇಖರ ಮಾತನಾಡಿ ವಿದ್ಯಾರ್ಥಿಯ ಜೀವನ ಅತ್ಯಮೂಲ್ಯವಾದದ್ದು ಅದನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ. ತಂದೆ ತಾಯಿಗಳ ಕನಸನ್ನ ನನಸು ಮಾಡಬೇಕು. ಸಾಮಾನ್ಯರೇ ಅಸಾಮಾನ್ಯರಾಗಿ ಉನ್ನತವಾದ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಮೂರ್ಖನಿಗಿಂತ ಅತಿ ಮೂರ್ಖನೇ ಮುಂದೆ ಅತಿ ದೊಡ್ಡ ವ್ಯಕ್ತಿಯಾಗಿದ್ದಾರೆ. ಅನೇಕ ಸಾಧಕರ ಜೀವನ ಬಗ್ಗೆ ತಿಳಿಸಿ ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪರಿಶಿಷ್ಟ ಪಂಗಡದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಾದ ಭಾಗಯ್ಯ ನಾಯಕ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖ ಘಟ್ಟವನ್ನು ಯಶಸ್ವಿಯಾಗಿ ಮುಗಿಸಿರುವ ನೀವು, ಭವಿಷ್ಯದಲ್ಲಿ ದೇಶದ ಜವಾಬ್ದಾರಿಯುತ ಪ್ರಜೆಗಳಾಗಬೇಕು. ಹಾಸ್ಟೆಲ್ ಅಲ್ಲಿ ಕಲಿತ ಶಿಸ್ತು ಮತ್ತು ಮೌಲ್ಯಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದ ಪ್ರಸ್ತಾವಿಕವಾಗಿ ವಸತಿ ನಿಲಯ ಮೇಲ್ವಿಚಾರಾದ ಅಮರೇಶ ಮಾತನಾಡಿ, ಪದವಿ ಮುಗಿಯುವುದು ಶಿಕ್ಷಣದ ಅಂತ್ಯವಲ್ಲ, ಇದು ನಿಮ್ಮ ಮುಂದಿನ ಸಾಧನೆಯ ಹಾದಿಯ ಆರಂಭ. ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.

ಇದೇ ಸಂದರ್ಭದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಸ್ಟೆಲ್ ಅಲ್ಲಿ ಕಳೆದ ತಮ್ಮ ಮಧುರ ನೆನಪುಗಳನ್ನು ಹಂಚಿಕೊಳ್ಳುತ್ತಾ ಭಾವುಕರಾದರು. ಕಿರಿಯ ವಿದ್ಯಾರ್ಥಿಗಳು ತಮ್ಮ ಹಿರಿಯ ಸಹಪಾಠಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ತದನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡು ಎಲ್ಲರ ಮನರಂಜಿಸಿದವು.
ಕಾರ್ಯಕ್ರಮದಲ್ಲಿ ಹುಸೇನ್ ಬಡಿಗೇರ ವಸತಿ ನಿಲಯ ಮೇಲ್ವಿಚಾರಕರು, ಶ್ರೀನಿವಾಸ್ ವಸತಿ ನಿಲಯ ಮೇಲ್ವಿಚಾರಕರು ಹಾಸ್ಟೆಲ್ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ವಿರೇಶ ಕಾರ್ಯಕ್ರಮ ನಿರೂಪಿಸಿದರು, ಶಿವಕುಮಾರ ಸ್ವಾಗತಿಸಿದರು ರಂಗನಾಥ ವಂದಿಸಿದರು.

Leave a Reply

Your email address will not be published. Required fields are marked *