ಆರಂಭದಲ್ಲಿ ಹವ್ಯಾಸವಾಗಿ ನಂತರ ಚಟವಾಗಿ ಬದಲಾಗುವ, ತಂಬಾಕು ಉತ್ಪನ್ನವಾದ ಗುಟ್ಕಾ, ಪಾನ್ ಮಸಾಲ ಹಾಗೂ ಸಿಗರೇಟ್, ಬೀಡಿ, ಹುಕ್ಕಾ, ಸೇದುವವರು ತಮಗಿಂತ ಸುತ್ತಲಿನ ಸಹಪಾಟಿಗಳು, ಮಿತ್ರರು, ಕುಟುಂಬದ ಸದಸ್ಯರ ಆರೋಗ್ಯದ ಮೇಲಾಗುವ ಹಾನಿ ತಡೆಗಟ್ಟಲು ತಂಬಾಕು ಉತ್ಪನ್ನಗಳ ಸೇವನೆಯನ್ನು ಸ್ವಯಂ ಪ್ರೇರಣೆಯಿಂದ ನಿಯಂತ್ರಿಸಿಕೊಳ್ಳಬೇಕು. ಅದರಲ್ಲೂ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕ, ನಿರ್ವಾಹಕ, ಮೆಕ್ಯಾನಿಕ್ ಸೇರಿದಂತೆ ಇತರ ಸಿಬ್ಬಂದಿ ಜಾಗೃತರಾಗಬೇಕು ಎಂದು ಕೆಕೆಆರಟಿಸಿ ರಾಯಚೂರುನ ವಿಭಾಗೀಯ ನಿಯಂತ್ರಣಾಧಿಕಾರಿ ಇಮಾಮ್ ಕಾಸೀಮ್ ಕಂದಗಲ್ ತಿಳಿಸಿದರು.
ಆರೋಗ್ಯ ಇಳಾಖೆ, ಕಲ್ಯಾಣ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಕೆಕೆಆರ್‌ಟಿಸಿ ಡಿಪೋ 1 ಹಾಗೂ 2 ರಲ್ಲಿ ಸಂಸ್ಥೆಯ ಸಿಬ್ಬಂದಿಯವರ ಪ್ರತಿ ವರ್ಷ ಮೇ 31 ರಂದು ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಜಾಗೃತಿ ನೀಡುವ ಹಿನ್ನಲೆ ಪತ್ರಿಕೆಗಳೊಂದಿಗೆ ಮಾತನಾಡುತ್ತಾ ಜಿಲ್ಲೆಯಾದ್ಯಂತ ಎಲ್ಲ ತಾಲೂಕುಗಳಲ್ಲಿ ಜನಜಾಗೃತಿ ಶಿಬಿರ, ಗುಂಪುಸಭೆ, ಶಾಲಾ, ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮವನ್ನು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ್ ಕೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ತಂಬಾಕು 4000 ರಾಸಾಯನಿಕಗಳನ್ನು ಹೊಂದಿದ್ದು, ಅದರಲ್ಲಿ 70 ರಾಸಾಯನಿಕಗಳು ಕ್ಯಾನ್ಸರ್‌ಗೆ ಕಸರಣವಾಗಿವೆ. ವಿಶೇಷವಾಗಿ ಬಾಯಿ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್‌ನೊಂದಿಗೆ ಇತರೆ ಅಂಗಾಂಗಗಳು ಹಾನಿಗೀಡಾಗುತ್ತವೆ.
ಪ್ರಸಕ್ತ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ‘ಆಕರ್ಷಣೆಯ ಮುಖವಾಡವನ್ನು ಬಹಿರಂಗಪಡಿಸುವುದು’ ಎಂಬ ಘೋಷವಾಕ್ಯ ದೊಂದಿಗೆ ಮಾರಕಟ್ಟೆಯಲ್ಲಿ ಜನತೆಯನ್ನು ಅದರಲ್ಲೂ ಯುವಜನತೆಯನ್ನು ಆಕರ್ಷಿಸಲು ತರವೆವಾರಿ ಪ್ಯಾಕಿಂಗ್, ಆಕರ್ಷಕ ಹೆಸರು, ಹೊರನೋಟ ಹೊಂದಿರುವ ಉತ್ಪನ್ನಗಳಲ್ಲಿ ಅಡಗಿರುವ ನಿಕೋಟಿನ್ ಮತ್ತು ತಂಬಾಕು ದುಷ್ಪರಿಣಾಮವನ್ನು ಅದರಿಂದಾಗುವ ವ್ಯಸನವನ್ನು, ಕುಟುಂಬದ ಆರ್ಥಿಕ ದುಸ್ಥಿತಿಯನ್ನು, ಆಸ್ಪತ್ರೆಗಳಿಗೆ ದಾಖಲಾಗಿ ಯಾತನೆ ಅನುಭವಿಸುವ ಸಂಕಟವನ್ನು, ಎದುರಿಗೆ ತಂಬಾಕು ಸೇವನೆಯಿಂದ ಉಂಟಾಗುವ ಮಾರಕ ಕಾಯಿಲೆಗಳು ಮತ್ತು ಅವುಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಈ ದಿನವನ್ನು ಆಯೋಜಿಸುತ್ತದೆ. 1987 ರಲ್ಲಿ ವಿಶ್ವ ಆರೋಗ್ಯ ಸಂಘಟನೆಯು ಈ ದಿನಾಚರಣೆಯನ್ನು ಜಾರಿಗೆ ತಂದಿತು. ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ಆರೋಗ್ಯದ ಹಾನಿ, ಸಾವು-ನೋವುಗಳು ಹಾಗೂ ತಂಬಾಕು ಕಂಪನಿಗಳ ವ್ಯಾಪಾರ ನೀತಿಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿ ಸಾರ್ವಜನಿಕರಿಗೆ ಇದರ ಕುರಿತು ಅರಿವು ಮೂಡಿಸುವುದಾಗಿದೆ.
ತಂಬಾಕು ಒಂದು ಸಸ್ಯದಿಂದ ದೊರೆಯುವ ಪದಾರ್ಥವಾಗಿದ್ದು, ಇದರ ಎಲೆಗಳನ್ನು ಒಣಗಿಸಿ ವಿವಿಧ ರೂಪಗಳಲ್ಲಿ ಬಳಸಲಾಗುತ್ತದೆ. ಮುಖ್ಯವಾಗಿ ಇದರಲ್ಲಿ ನಿಕೋಟಿನ್ ಎಂಬ ವ್ಯಸನಕಾರಿ ರಾಸಾಯನಿಕವಿದೆ. ತಂಬಾಕಿನ ಬಳಕೆಗಳ ರೂಪಗಳು : ಸಿಗರೇಟ್, ಬೀಡಿ, ಸಿಗಾರ್, ಗುಟ್ಕಾ, ಖೈನಿ, ಜರ್ದಾ, ಹುಕ್ಕಾ. ತಂಬಾಕಿನ ಹಾನಿಕಾರಕ ಪರಿಣಾಮಗಳು : ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳ ಅಪಾಯ ಹೆಚ್ಚಾಗುತ್ತದೆ. ಹೃದಯ ಸಂಬಂಧಿತ ಕಾಯಿಲೆ ಮತ್ತು ಹೃದಯಾಘಾತದ ಸಾಧ್ಯತೆ ಹೆಚ್ಚುತ್ತದೆ. ದೀರ್ಘ ಕಾಲದ ಶ್ವಾಸಕೋಶದ ಕಾಯಿಲೆಗಳು ಉಂಟಾಗಬಹುದು. ಬಾಯಿ, ಗಂಟಲು ಮತ್ತು ನಾಲಿಗೆಯ ಆರೋಗ್ಯ ಹದಗೆಡುತ್ತದೆ. ನಿಕೋಟಿನ್ನಿಂದ ವ್ಯಸನ ಉಂಟಾಗುತ್ತದೆ. ತಂಬಾಕು ಬಿಡುವುದರಿಂದ ಆಗುವ ಲಾಭಗಳು: ಉಸಿರಾಟ ಸುಧಾರಿಸುತ್ತದೆ. ಹೃದಯದ ಆರೋಗ್ಯ ಉತ್ತಮವಾಗುತ್ತದೆ. ಕ್ಯಾನ್ಸರ್ ಮತ್ತು ಇತರ ಗಂಭೀರ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ಹಣದ ಉಳಿತಾಯವಾಗುತ್ತದೆ. ಜೀವನದ ಗುಣಮಟ್ಟ ಹೆಚ್ಚುತ್ತದೆ. ವಾಣಿಜ್ಯ ಬೆಳೆಯಾಗಿರುವ ತಂಬಾಕು ಉತ್ಪನ್ನವು 4000ಕ್ಕಿಂತ ಹೆಚ್ಚು ರಾಸಾಯನಿಕಗಳನ್ನು ಹೊಂದಿದ್ದು ಅನಿಯಮಿತ ಸೇವನೆಯಿಂದ ವ್ಯಕ್ತಿಯ ದೇಹದ ಎಲ್ಲಾ ಅಂಗಗಳು ಹಾನಿಯಾಗುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವವರಿಗೆ ಕಾಯ್ದೆ ಅಡಿಯಲ್ಲಿ ದಂಡ ವಿಧಿಸುವ ಜೊತೆಗೆ ಮಾರಾಟಗಾರರು ಪರವಾನಿಗೆ ಪಡೆದಿರಬೇಕು.
ಜಿಲ್ಲೆಯಲ್ಲಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ತಂಬಾಕು ಸೇವೆನೆ ದುಷ್ಪರಿಣಾಮ ಕುರಿತು ಜಾಗೃತಿಯನ್ನು ನೀಡಲಾಗುತ್ತಿದ್ದು ಪ್ರಮುಖ ಹೋಟೆಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸ್ಟೋಕಿಂಗ್ ಝನ್ ಗಳನ್ನು ಕಡ್ಡಾಯವಾಗಿ ಸ್ಥಾಪಿಸಲು ಸ್ಥಳೀಯ ಆಡಳಿತಗಳ ಸಹಕಾರ ಅತ್ಯಗತ್ಯವಾಗಿದೆ. ಅಲ್ಲದೇ ಜಿಲ್ಲಾ ಆಸ್ಪತ್ರೆ ರೂಮ್ ನಂ-43 ರಲ್ಲಿ ತಂಬಾಕು ವ್ಯಸನಿಗಳಿಗಾಗಿ ತಂಬಾಕು ವ್ಯಸನ ಮುಕ್ತ ಕೇಂದ್ರವು ಉಚಿತ ಆಪ್ತಸಮಾಲೋಚನೆ ಹಾಗೂ ಅಗತ್ಯ ಚಿಕಿತ್ಸೆ ಸೇವೆಯನ್ನು ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಬಳಸಿಕೊಂಡು ತಂಬಾಕು ರಹಿತ ಸಮಾಜ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.


