ಸಿಂಧನೂರು: ನಗರದ ಸುಕಾಲಪೇಟೆ ರಸ್ತೆಯಲ್ಲಿರುವ ತಾಲೂಕ ಕುರುಬರ ಸಂಘದ ಕಾರ್ಯಾಲದಯದಲ್ಲಿ ತಾಲೂಕ ಮಹಿಳಾ ಕನಕ ನೌಕರರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಗೌರವಾಧ್ಯಕ್ಷರಾಗಿ ಸುಮಂಗಲಾ ಬಸವರಾಜ, ಅಧ್ಯಕ್ಷರಾಗಿ ರಮಾದೇವಿ ಶಂಭೋಜಿ, ಉಪಾಧ್ಯಕ್ಷರಾಗಿ ಅಂಬಮ್ಮ ಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ಕವಿತಾ ಹೊಳಿಯಪ್ಪ, ಕೋಶಾಧ್ಯಕ್ಷರಾಗಿ ಈಶ್ವರಿ, ಸಹ ಕಾರ್ಯದರ್ಶಿಯಾಗಿ ಸಿದ್ದಮ್ಮ ಆಯ್ಕೆ ಆಗಿದ್ದಾರೆಂದು ತಾಲೂಕ ಕನಕ ನೌಕರರ ಸಂಘದ ಅಧ್ಯಕ್ಷ ಗ್ಯಾನಪ್ಪ ಕೆ. ತಿಳಿಸಿದ್ದಾರೆ.
ಚಿದಾನಂದಯ್ಯ ಗುರುವಿನ ಸಾನಿಧ್ಯ ವಹಿಸಿದ್ದರು, ಜಿಲ್ಲಾ ಕನಕ ನೌಕರರ ಸಂಘದ ಅಧ್ಯಕ್ಷ ನಾಗರಾಜ ಅರಳಿಮರ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖಂಡರಾದ ಅಮರೇಶಪ್ಪ ಮಲಾರ, ಬಸವರಾಜ ವಿ, ಮಲ್ಲಪ್ಪ ಬಾದರ್ಲಿ, ಹೊಳಿಯಪ್ಪ ನಾಗಲಾಪುರ, ತಾಲೂಕ ಅಧ್ಯಕ್ಷರಾದ ಗ್ಯಾನಪ್ಪ ಕೆ, ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ಆನೆಗುಂದಿ, ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಸುರೇಶ ಹಚ್ಚೊಳ್ಳಿ, ಉಪಸ್ಥಿತರಿದ್ದರು.

