ಅರಕೇರಾ : ಶಾಲೆಯ ಸರ್ವತೋಮುಖ ಅಭಿವೃದ್ಧಿ ಯಲ್ಲಿ ಶಿಕ್ಷಕರ ಜತೆಗೆ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಪಾತ್ರ ಬಹುಮುಖ್ಯವಾದದ್ದು ಎಂದು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡ ವಿಭಾಗದ ಬ್ಲಾಕ್ ಅಧ್ಯಕ್ಷ ಬಸವರಾಜ ಪೂಜಾರಿ ಹೇಳಿದರು.

ಅವರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆದರ್ಶ ವಿದ್ಯಾಲಯದಲ್ಲಿ ಅವಿರೋಧವಾಗಿ ಆಯ್ಕೆಯಾದ ನೂತನ ಎಸ್ಡಿಎಂಸಿ ಅಧ್ಯಕ್ಷ ತಿಮ್ಮಪ್ಪ ನಾಯಕ ಜಲ್ಲೇ, ಉಪಾಧ್ಯಕ್ಷ ಅಮರೇಶ ಹಿರೇಬೂದುರು ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಿ ಮಾತನಾಡಿದರು.
ಇದೇ ವೇಳೆ ಮಹಾಂತೇಶ ಪೂಜಾರಿ, ಹನ್ಮಂತ್ರಾಯ ಗೌರ್ನಮೆಂಟ್, ರಂಗಪ್ಪ ತುಮನಮರಡಿ, ರಾಜು ನಾಯಕ, ಸಿದ್ದಯ್ಯ ಸ್ವಾಮಿ, ಹನ್ಮಂತ್ರಾಯ ಕುಲಕರ್ಣಿ,ಸಿದ್ದಪ್ಪ ಕಬ್ಬೇರ್, ನಾಗೇಶ ಜಲ್ಲೇ, ಮಹಿಬೂಬ ಬಡಿಗೇರ, ರಂಗಪ್ಪ ಜಾಲಹಳ್ಳಿ ಇದ್ದರು.

Leave a Reply

Your email address will not be published. Required fields are marked *