ಬಳ್ಳಾರಿ / ಕಂಪ್ಲಿ : ಕಂಪ್ಲಿ ಮಂಡಲದ ಉಪಾಧ್ಯಕ್ಷರಾಗಿ ಬಿ. ರಮೇಶ ಹಾಗೂ ಕಂಪ್ಲಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಕಂಪ್ಲಿ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾಗಿ ಬಡಿಗೇರ್ ವಿರೇಶ ನೇಮಕ ಇವರು ನೇಮಕಗೊಂಡಿದ್ದು, ಮಾಜಿ ಶಾಸಕ ಟಿ.ಎಚ್.ಸುರೇಶ ಬಾಬು ನೇತೃತ್ವದಲ್ಲಿ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಸಮ್ಮುಖದಲ್ಲಿ ಪಟ್ಟಣದ ತುಂಗಭದ್ರ ಕಾರ್ಯಾಲಯದಲ್ಲಿ ನೇಮಕಾತಿ ಆದೇಶ ಪ್ರತಿಗಳನ್ನು ಶನಿವಾರ ವಿತರಿಸಲಾಯಿತು.
ಕೂಡಲೇ ತಮ್ಮ ಅಧಿಕಾರದ ಜವಾಬ್ದಾರಿಯನ್ನು ಸ್ವೀಕರಿಸಿ, ಪಕ್ಷದ ಶಿಸ್ತು, ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಮತ್ತು ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು, ಮುಂದಿನ ವರ್ಷದ ಅವಧಿಯಲ್ಲಿ ಪಕ್ಷದ ಸಂಘಟಣೆಯತ್ತ ಹೆಚ್ಚಿನ ಗಮನಹರಿಸಿ ಕಾರ್ಯಕರ್ತರಿಗೆ, ಸ್ಪೂರ್ತಿಯಾಗಿ, ಶಕ್ತಿಯಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಪಕ್ಷದ ಹಿತದೃಷ್ಟಿಯಿಂದ ಪಕ್ಷದ ಒಳಿತಿಗಾಗಿ ಪಕ್ಷದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ಮತ್ತು ಅವಧಿಯಲ್ಲಿ ಪಕ್ಷದ ಸಂಘಟನೆಯನ್ನು ಸದೃಢವಾಗಿ ಮತ್ತು ಅತ್ಯಂತ ಬಲಿಷ್ಠವಾಗಿ ಕಟ್ಟಲು ನಿಮ್ಮ ಪರಿಶ್ರಮ ಹಾಗೂ ಸಮಯ ಅತ್ಯವಶ್ಯವಾಗಿದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ನೂತನ ಉಪಾಧ್ಯಕ್ಷ ಬಿ. ರಮೇಶ ಆದೇಶ ಪ್ರತಿ ಸ್ವೀಕರಿಸಿದ ನಂತರ ಮಾತನಾಡಿ, ಮಾಜಿ ಶಾಸಕ ಸುರೇಶಬಾಬು ಅವರ ಆದೇಶದ ಮೇರೆಗೆ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಅವರು ನಮ್ಮನ್ನು ಗುರುತಿಸಿ, ಕಂಪ್ಲಿ ಮಂಡಲ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಖುಷಿ ತಂದಿದೆ. ಈ ಜವಬ್ದಾರಿಗೆ ತಕ್ಕಂತೆ ಪಕ್ಷದ ಏಳಿಗೆಗಾಗಿ ಹಗಲಿರುಳು ಶ್ರಮಿಸಲಾಗುವುದು. ಕಂಪ್ಲಿ ಮಂಡಲದಲ್ಲಿ ಹೆಚ್ಚಿನ ಮಟ್ಟದಲ್ಲಿ ಕಾರ್ಯಗಳೊಂದಿಗೆ ಕೇಂದ್ರ ಸರ್ಕಾರದ ಯೋಜನೆಗಳು, ಮಾಜಿ ಶಾಸಕ ಸುರೇಶಬಾಬು ಅವರ ಜನಪರ ಅಭಿವೃದ್ಧಿ ಕಾರ್ಯಗಳನ್ನು ಜನರಲ್ಲಿ ಮನದಟ್ಟು ಮಾಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅನೀಲ್‌ಕುಮಾರ ಮೋಕಾ, ಎಸ್.ಟಿ ಮೋರ್ಚದ ನೂತನ ಅಧ್ಯಕ್ಷ ಎಸ್ ಈರಣ್ಣ, ಪ್ರಧಾನ ಕಾರ್ಯದರ್ಶಿಗಳಾದ, ಕಟ್ಟೆ ವಿಶ್ವಾನಾಥ, ಉಪ್ಪಾರಹಳ್ಳಿ ಮುನಿಯಪ್ಪ, ಬೆಳಗೋಡ್ ನಾಗರಾಜ, ಮುಖಂಡರಾದ ಸುಗ್ಗೇನಹಳ್ಳಿ ರಾಮಾಂಜಿನಿ, ಜಿ.ಹನುಮಂತ, ಚಟ್ಲೇ ಜಡೆಪ್ಪ, ನರ‍್ಗುಂಟಿ ಮುದಿಯಪ್ಪ, ಕುಮಾರಸ್ವಾಮಿ, ರಾಮಾಲಿಸ್ವಾಮಿ, ಹೊನ್ನಳ್ಳಿ ವಿರೇಶ, ನೂರ್‌ವಂದಪ್ಪ, ಮಲ್ಲನಗೌಡ ಸುಗ್ಗೇನಹಳ್ಳಿ ಸೇರಿದಂತೆ ಬಿಜೆಪಿಯ ವಿವಿಧ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *