ಭೂಮಿಯ ಆಳದಿಂದ ಬೋರ್‌ಬೆಲ್ ಮೂಲಕ ಕುಡಿಯಲು ಬಳಸುವ ನೀರಿನಲ್ಲಿ ಅತಿಯಾದ ಫ್ಲೋರೈಡ್ ಅಂಶವು ಕಂಡುಬಂದಲ್ಲಿ ಉಂಟಾಗುವ ಆರೋಗ್ಯದ ಸಮಸ್ಯೆಗಳು ಕೇವಲ ವೈಯಕ್ತಿಕ ಸಮಸ್ಯೆಯಲ್ಲಾ, ಸಾಮಾಜಿಕ ಸಮಸ್ಯೆಯಾಗಿದೆ, ಹದಿಹರೆಯರದಲ್ಲೂ ವಯಸ್ಕರಂತೆ ಕಾಣುತ್ತಾರೆ. ಆದ್ದರಿಂದ ಕುಡಿಯಲು ಅಧಿಕ ಪ್ಲೋರೈಡ್‌ಯುಕ್ತ ನೀರು ಬಳಸದೆ ಮಳೆಯಾದರೀತ ನೀರನ್ನು ಕುಡಿಯಲು ಆಧ್ಯತೆ ನೀಡಲು ಜಿಲ್ಲಾ ಪ್ಲೋರೋಸಿಸ್ ಸಲಹೆಗಾರರಾದ ಗುರುಪ್ರಸಾದ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಜಿಲ್ಲಾ ಫ್ಲೋರೊಸಿಸ್ ನಿಯಂತ್ರಣ ಕಾರ್ಯಕ್ರಮದಡಿ ರಾಯಚೂರು ತಾಲೂಕಿನ ವಡ್ಲೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ದಂತ ಫ್ಲೋರೈಡ್ ತಪಾಸಣೆ ಕೈಗೊಂಡು ಮಾತನಾಡುತ್ತಾ, ಪ್ಲೋರೈಡ್ ಪ್ರಮುಖವಾಗಿ ಹಲ್ಲು ಮತ್ತು ಮೂಳೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಒಂದು ಬಾರಿ ಫ್ಲೋರೈಡ್ ಅಧಿಕ ಮಟ್ಟದಲ್ಲಿ ದೇಹ ಸೇರಿದಾಗ ಮೊಣಕಾಲು ಒಳಕ್ಕೆ ಅಥವಾ ಹೊರಕ್ಕೆ ಬಾಗಿ ಜೀವನ ಪರ್ಯಂತ ಉಳಿಯುವಂತೆ ಮಾಡುತ್ತದೆ.
ವಿವಿಧ ವಿಧಗಳು ಮತ್ತು ಲಕ್ಷಣಗಳು:
ದಂತ ಫ್ಲೋರೋಸಿಸ್, ಇದು ಹೆಚ್ಚಾಗಿ 8 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬರುತ್ತದೆ. ಹಲ್ಲುಗಳ ಮೇಲೆ ಬಿಳಿ ಚುಕ್ಕೆಗಳು, ಹಳದಿ ಅಥವಾ ಕಂದು ಬಣ್ಣದ ಗೆರೆಗಳು ಮೂಡುವುದು ಇದರ ಮುಖ್ಯ ಲಕ್ಷಣವಾಗಿದೆ.
ಅಸ್ಥಿಪಂಜರದ ಫ್ಲೋರೋಸಿಸ್:
ದೀರ್ಘಾವಧಿಯ ಫ್ಲೋರೈಡ್ ಸೇವನೆಯಿಂದ ಮೂಳೆಗಳು ಮತ್ತು ಕೀಲುಗಳ ಮೇಲೆ ಪ್ರಭಾವ ಬೀರುತ್ತದೆ. ಕೀಲು ನೋವು, ಬೆನ್ನು ನೋವು, ಮೂಳೆಗಳು ಗಟ್ಟಿಯಾಗುವುದು ಮತ್ತು ವಿಕಲಾಂಗತೆಗೆ ಕಾರಣವಾಗುವುದು ಇದರ ತೀವ್ರ ಲಕ್ಷಣಗಳಾಗಿವೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಮನೆಗಳಿಗೆ ಬೇಟಿ ಮಾಡಿ, ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾ, ಫ್ಲೋರೈಡ್‌ನಿಂದಾಗುವ ಹಾನಿ ತಡೆಯಲು ಜಿಲ್ಲಾ ಪಂಚಾಯತಿಯು ಗ್ರಾಮ ಪಂಚಾಯತಗಳ ಮೂಲಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮಾಡಿದ್ದು,
ಸದರಿ ನೀರನ್ನು ಕುಡಿಯಲು ಬಳಸುವುದಕ್ಕೆ ಆಧ್ಯತೆ ನೀಡಿ ಮತ್ತು ಶುದ್ಧೀಕರಿಸಿದ ಕುಡಿಯುವ ನೀರನ್ನು (ಬೋರ್‌ವೆಲ್ ನೀರನ್ನು ಪರೀಕ್ಷಿಸಿ ಬಳಸುವುದು ಉತ್ತಮ) ಬಳಸುವುದು.
ಅಲ್ಲದೆ ಆಹಾರ ಸೇವಿಸುವಾಗ ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶವಿರುವ ಆಹಾರಗಳಾದ (ಉದಾ: ಅಡುಗೆಗೆ ಹುಣಸೆಹಣ್ಣು, ಹಸಿರು ತರಕಾರಿಗಳು, ರಾಗಿ, ನುಗ್ಗೆಕಾಯಿ, ನೆಲ್ಲಿಕಾಯಿ, ಹಾಗೂ ಹಣ್ಣುಗಳಾದ ಕಿತ್ತಳೆ, ಮೋಸಂಬಿ, ಹಾಗೂ ಹಾಲು ಬೆಲ್ಲ, ಮುಂತಾದವುಗಳನ್ನು ಫ್ಲೋರೋಸಿಸ್ ತೀವ್ರತೆಯನ್ನು ಕಡಿಮೆ ಮಾಡಲು ಬಳಸಬಹುದಾಗಿದೆ.
ಅತಿ ಮುಖ್ಯವಾಗಿ ದಿನಕ್ಕೆರಡು ಬಾರಿ ಹಲ್ಲುಜ್ಜಲು ಹಾಗೂ ಮಕ್ಕಳು ಫ್ಲೋರೈಡ್ ಅಂಶವಿರುವ ಟೂತ್‌ಪೇಸ್ಟ್‌ನ್ನು ನುಂಗದಂತೆ ಎಚ್ಚರ ವಹಿಸಬೇಕು ಎಂದರು.
ಈ ಸಂಧರ್ಭದಲ್ಲಿ ಬಳ್ಳಾರಿ ಜಿಲ್ಲಾ ಪ್ಲೋರೋಸಿಸ್ ಕನ್ಸ್‌ಲ್ಟಂಟ್ ಡಾ ಬುಲಂ ಪ್ರೀಯಾ ಭಗ್ವತ್‌ಗಿತಾಂಜಲಿ, ಮುಖ್ಯ ಗುರುಗಳಾದ ವಿ, ಭಾರತಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಹಾಗೂ ಸಿಪಿಓ ಬಸವರಾಜಪ್ಪ ಗೌಡ, ಇ ಪ್ರೋಗ್ರಾಮರ್ ಭುವನೇಶ್ವರಿ, ಸಮುದಾಯ ಆರೋಗ್ಯ ಅಧಿಕಾರಿ ಪ್ರತ್ಯುಷಾ, ಶಿಕ್ಷಕರಾದ ಅನಿತಾ, ಸುಜಾತಾ, ಚಂದ್ರಿಕಾ, ಉಮಾ, ಪ್ರಯೋಗಾಲಯ ತಂತ್ರಜ್ಞ ಗಂಗಾಧರ, ಆಶಾ ಕಾರ್ಯಕರ್ತೆ ಗೌರಮ್ಮ, ಸೇರಿದಂತೆ ಶಾಲಾ ಶಿಕ್ಷಕರು ಮಕ್ಕಳು ಹಾಜರಿದ್ದರು

