ಮಸ್ಕಿ : ತಾಲ್ಲೂಕಿನ ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಮ್ ರಾಮಲದಿನ್ನಿ ಶಾಲೆಯಲ್ಲಿ ಅಡುಗೆ ಸಹಾಯಕಿ ಮತ್ತು ಗ್ರಾಮಸ್ಥರ ವೈಯಕ್ತಿಕ ದ್ವೇಷದಿಂದ ಕಳೆದ ಹದಿನೈದು ದಿನಗಳಿಂದ ಮಕ್ಕಳನ್ನು ಶಾಲೆಗೆ ಪಾಲಕರು ಕಳಿಸಿತ್ತಿಲ್ಲ,ಎರಡು ಸಲ ಅಧಿಕಾರಿಗಳು ಸಂಧಾನ ಮಾಡಿದರು ಮಕ್ಕಳನ್ನು ಶಾಲೆಗೆ ಪಾಲಕರು ಕಳಿಸಿರಲಿಲ್ಲ, ಆದರೆ ಇಂದು ಶಾಲೆಗೆ ಸ್ವತಃ ಮಾನ್ವಿ ಬಿಇಒ ಚಂದ್ರಶೇಖರ ದೊಡ್ಡಮನಿಯವರು ಆಗಮಿಸಿ ಗ್ರಾಮಸ್ಥರು ಮತ್ತು ಅಡುಗೆ ಸಹಾಯಕಿ ಜೊತೆ ಸುದೀರ್ಘವಾಗಿ ಚರ್ಚಿಸಿದರು, ಆದರೆ ಗ್ರಾಮಸ್ಥರು ಎಲ್ಲರೂ ಸೇರಿ ಅಡುಗೆ ಸಹಾಯಕಿ ನಮ್ಮ ಶಾಲೆಗೆ ಬೇಡವೇ ಬೇಡ ಎಂದು ಒಕ್ಕೊರಲಿನಿಂದ ಹೇಳಿದರು.ಕೊನಗೆ ಅನಿವಾರ್ಯವಾಗಿ ಬಿಇಒ ಚಂದ್ರಶೇಖರ ದೊಡ್ಡಮನಿ ಮಾತನಾಡಿ ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರಿಗೆ ತಿಳಿಸಿ ,ಬಿಸಿಯೂಟವನ್ನು ಹಾಲಾಪೂರ ಪ್ರಾಥಮಿಕ ಶಾಲೆಯಿಂದ ತಾತ್ಕಾಲಿಕ ವ್ಯವಸ್ಥೆ ಮಾಡಲು ಸೂಚಿಸಿ, ಮುಂದಿನ ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿಗಳಿಗೆ ಮಾಹಿತಿ ಕೊಟ್ಟು ಸಮಸ್ಯೆ ಬಗೆಹರಿಸಲಾಗುವುದು ಎಂದು ಪಾಟೀಲ್ ನ್ಯೂಜ್ ಜೊತೆ ಮಾತನಾಡಿದರು, ಈ ವೇಳೆಯಲ್ಲಿ ಮುಖ್ಯಗುರುಗಳಾದ ಮಂಜುನಾಥ ಹಾಲಾಪೂರ ನಿಂಗಪ್ಪ ಹಾಲಾಪೂರ ಹಾಗೂ ಗ್ರಾಮಸ್ಥರು ಇದ್ದರು.

