ಮಾನ್ವಿ: ರಾಯಚೂರು ಕೃಷಿ ವಿಜ್ಞಾನ ಕೇಂದ್ರ ಮತ್ತು ಕಲ್ಲೂರು ಹಾಗೂ ಕುರ್ಡಿ ರೈತ ಸಂಪರ್ಕ ಕೇಂದ್ರದ ವತಿಯಿಂದ ನಡೆದ ಖೇತ್ ಬಚಾವೋ ಅಭಿಯಾನಕ್ಕೆ ರಾಯಚೂರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಹಾಗೂ ಬೇಸಾಯಶಾಸ್ತç ವಿಜ್ಞಾನಿ ಡಾ.ಮಲ್ಲರೆಡ್ಡಿ ಚಾಲನೆ ನೀಡಿ ಮಾತನಾಡಿ ಮಣ್ಣು ಆರೋಗ್ಯವಾಗಿದ್ದಾಗ ಮಾತ್ರ . ಬೆಳೆ ಉತ್ಪಾದಕತೆ ಹೆಚ್ಚಿಸುವುದಕ್ಕೆ ಸಾಧ್ಯ ಸಸ್ಯಗಳ ಬೆಳೆವಣಿಗೆಗೆ 17 ಪೋಷಕಾಂಶಗಳು ಅಗತ್ಯವಿರುತ್ತದೆ ಆದ್ದರೆ ರೈತರು ಕೇವಲ ಅಗತ್ಯ ಪೋಷಕಾಂಶಗಳನ್ನು ಹೆಚ್ಚಾಗಿ ರಾಸಾಯನಿಕ ಗೊಬ್ಬರ ಮೂಲಕ ನೀಡುವುದರಿಂದ ಬೆಳೆಗೆ ಸಮಗ್ರಪೋಷಕಾಂಶಗಳು ದೊರೆಯದೆ ಉತ್ಪಾದಕತೆ ಕಡಿಮೆಯಾಗುವುದಲ್ಲದೆ ಮಣ್ಣಿನ ಭೌತಿಕ,ರಾಸಾಯನಿಕ ಮತ್ತು ಜೈವಿಕ ಗುಣಮಟ್ಟ ಇಳಿಮುಖವಾಗಿ. ಮಣ್ಣಿನ ಆರೋಗ್ಯ , ಫಲವತ್ತತೆ ಕೆಡುತ್ತದೆ.ಅದ್ದರಿಂದ ರೈತರು ಸಮಗ್ರ ಪೋಷಕಾಂಶಗಳ ನಿರ್ವಹಣೆಗೆ ಭೂಮಿಗೆ ತಿಪ್ಪೆ ಗೊಬ್ಬರ, ಹಸಿರೆಲೆ ಗೊಬ್ಬರಗಳು, ದ್ರವಯುಕ್ತ ಸಾವಯುವ ಗೊಬ್ಬರಗಳಾದ ಜೀವಾಮೃತ,ಪಂಚಗವ್ಯ,ಎರೆಜಲ, ರೈಜೋಬಿಯಂ, ರಂಜಕ ಕರಗಿಸುವ ಸೂಕ್ಷಾö್ಮಣು ಜೀವಿಗಳಿಂದ ತಯಾರಿಸಿದ ಜೈವಿಕ ಗೊಬ್ಬರಗಳು, ಬೆಳೆ ಪರಿವರ್ತನೆ ಮತ್ತು ಕೃಷಿ ತ್ಯಾಜ್ಯ ವಸ್ತುಗಳನ್ನು ಭೂಮಿಗೆ ಸೇರಿಸುವುದರಿಂದ ಬೆಳೆಗೆ ಸಮಗ್ರ ಪೋಷಕಾಂಶಗಳು ದೊರೆಯುತ್ತವೆ ಎಂದು ತಿಳಿಸಿದರು.

ರೈತ ಸಂಪರ್ಕ ಕೇಂದ್ರ ಕುರ್ಡಿ ಹಾಗೂ ಕಲ್ಲೂರಿನ ಕೃಷಿ ಅಧಿಕಾರಿಗಳಾದ ಭೀಮರಾಯ ಪಡದಳ್ಳಿ ರೈತರಿಗೆ ರಾಷ್ಟಿçÃಯ ಆಹಾರ ಭದ್ರತಾ ಯೋಜನೆ ಹಾಗೂ ಕೃಷಿ ಇಲಾಖೆಯ ಇತರ ಸೌಲಭ್ಯಗಳ ಬಗ್ಗೆ ವಿವಾರವಾದ ಮಾಹಿತಿಯನ್ನು ನೀಡಿದರು.

ರೈತರಿಗೆ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು ಹಾಗೂ ಬೀಜೋಪಚಾರದ ಪ್ರಾತ್ಯಕ್ಷಿಕೆಯನ್ನು ತೋರಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಯಲ್ಲಪ್ಪ, ರೈತ ಸಂಪರ್ಕ ಕೇಂದ್ರ ಕಲ್ಲೂರು ಲೆಕ್ಕ ಸಹಾಯಕ ಅಮರೇಶ ಮಾಡಗಿರಿ, ಹಾಗೂ ವಿವಿಧ ಗ್ರಾಮಗಳ ನೂರಾರು ರೈತರು ಭಾಗವಹಿಸಿದರು.

ಮಾನ್ವಿ: ರಾಯಚೂರು ಕೃಷಿ ವಿಜ್ಞಾನ ಕೇಂದ್ರ ಮತ್ತು ಕಲ್ಲೂರು ಹಾಗೂ ಕುರ್ಡಿ ರೈತ ಸಂಪರ್ಕ ಕೇಂದ್ರದ ವತಿಯಿಂದ ನಡೆದ ಖೇತ್ ಬಚಾವೋ ಅಭಿಯಾನದಲ್ಲಿ ಕೃಷಿ ವಿಜ್ಞಾನಿ ಡಾ.ಮಲ್ಲರೆಡ್ಡಿ ರೈತರಿಗೆ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *