ಸಿಂಧನೂರು – ನಗರದ ವಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಟಿ. ಎ. ನಾರಾಯಣಗೌಡ ಬಣ) ಸಿಂಧನೂರು ತಾಲೂಕ ಘಟಕದ ವತಿಯಿಂದ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ ಅವರ 60ನೇ ವರ್ಷದ ಜನ್ಮದಿನ ಸಮಾರಂಭ ಕಾರ್ಯಕ್ರಮವನ್ನು ಆಶ್ರಮದಲ್ಲಿ ಅನ್ನ ಸಂತರ್ಪಣೆ ಹಾಗೂ ಹಣ್ಣುಹಂಪಲುಗಳನ್ನು ವಿತರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಕರವೇ ಜಿಲ್ಲಾ ಉಪಾಧ್ಯಕ್ಷರಾದ ದೇವೇಂದ್ರ ಗೌಡ ಎಲ್ಲಾ ಪದಾಧಿಕಾರಿಗಳೊಂದಿಗೆ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಕರವೇ ತಾಲೂಕಾಧ್ಯಕ್ಷರಾದ ಎಲ್. ರಾಜಸಾಬ್ ಗಾಂಧಿನಗರ ಹಾಗೂ ಗೌರವಾಧ್ಯಕ್ಷರಾದ ಕಾಳಪ್ಪ ಮೇಸ್ತ್ರಿ ಇವರುಗಳನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿ ಶುಭ ಕೋರಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕರವೇ ಸಿಂಧನೂರು ತಾಲೂಕ ಅಧ್ಯಕ್ಷರಾದ ಎಲ್.ರಾಜಾಸಾಬ್ ಮಾತನಾಡಿ ಇಂದು ನಮ್ಮ ರಾಜ್ಯಾಧ್ಯಕ್ಷರ ಹುಟ್ಟು ಹಬ್ಬವನ್ನು ರಾಜ್ಯಾದ್ಯಂತ ಅನೇಕ ಸಮಾಜಪರ ಜನಪರ ಕಾರ್ಯಗಳನ್ನು ಮಾಡುವ ಮೂಲಕ ನೆರವೇರಿಸಲು ಆದೇಶಿಸಿದ್ದರು. ನಮ್ಮ ತಾಲೂಕ ಪದಾಧಿಕಾರಿಗಳ ಒಪ್ಪಿಗೆ ಮೇರೆಗೆ ಕಾರುಣ್ಯ ಆಶ್ರಮದಲ್ಲಿ ಅವರ ಜನ್ಮದಿನ ನಡೆಯುತ್ತಿರುವುದು ನಮ್ಮೆಲ್ಲರಿಗೆ ಸಂತೋಷವನ್ನುಂಟು ಮಾಡಿದೆ. ಕನ್ನಡ ನಾಡಿನ ಉಳಿವಿಗಾಗಿ ನಮ್ಮ ನಾರಾಯಣಗೌಡ್ರು ತನು ಮನ ಧನ ಅರ್ಪಿಸುತ್ತಿದ್ದಾರೆ. ಅವರ ವಿನಂತಿಯನ್ನು ಯಾವುದೇ ಸರ್ಕಾರವಿರಲಿ ಸ್ವೀಕರಿಸಿ ಸ್ಪಂದಿಸುತ್ತಿರುವುದು ನಮ್ಮ ಸಂಘಟನೆಗೆ ಶಕ್ತಿ ತುಂಬಿದೆ. ಕನ್ನಡದ ನೆಲ ಜಲ ಭಾಷೆಯ ಉಳಿವಿಗಾಗಿ ನಮ್ಮ ನಾರಾಯಣಗೌಡರ ಹೋರಾಟವೇ ನಮಗೆ ಆದರ್ಶವಾಗಿದೆ. ನಮ್ಮ ನಾಡಿನಲ್ಲಿ ನಾರಾಯಣಗೌಡರು ಎಂದರೆ ಕನ್ನಡ ಕನ್ನಡ ಎಂದರೆ ನಾರಾಯಣಗೌಡರು ಎನ್ನುವುದನ್ನು ತೋರಿಸಿಕೊಟ್ಟ ಕೀರ್ತಿ ನಮ್ಮ ರಾಜ್ಯಾಧ್ಯಕ್ಷರಿಗೆ ಸಲ್ಲುತ್ತದೆ. ಅವರ ಆಶಯದಂತೆ ನಮ್ಮ ಸಿಂಧನೂರಿನ ಈ ಕರುಣೆಯ ಕಾರುಣ್ಯ ಕುಟುಂಬದಲ್ಲಿ ಅವರ ಜನ್ಮದಿನವು ಜನ್ಮ ಸಾರ್ಥಕ ದಿನವಾಗಿ ನಾವೆಲ್ಲರೂ ಆಚರಿಸುತ್ತಿದ್ದೇವೆ. ಅವರು ಶತಾಯುಷಿಗಳಾಗಿ ನೊಂದವರ ಬಾಳಿಗೆ ಬೆಳಕಾಗಿ ಅನ್ಯಾಯಕ್ಕೆ ಖಡ್ಗವಾಗಿ ನ್ಯಾಯಕ್ಕೆ ಸಹೋದರನಾಗಿ ಎಲ್ಲರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಮಾತನಾಡಿ ರಾಜ್ಯಾಧ್ಯಕ್ಷರಿಗೆ ಶುಭ ಕೋರಿದರು. ನಂತರ ಜಿಲ್ಲಾ ಉಪಾಧ್ಯಕ್ಷರಾದ ದೇವೇಂದ್ರಗೌಡ ಮಾತನಾಡಿ ಅವರು ಅದೆಷ್ಟೇ ಶ್ರೀಮಂತರಿದ್ದರೂ ಕೂಡ ಆಡಂಬರವಿಲ್ಲದೆ ತಮ್ಮ ಜನ್ಮದಿನವನ್ನು ಕಾರುಣ್ಯದಂತಹ ಪುಣ್ಯಕ್ಷೇತ್ರದಲ್ಲಿ ಆಚರಿಸಲು ನಮಗೆ ಸೂಚಿಸಿರುವುದು ಸಮಾಜಕ್ಕೆ ಆದರ್ಶ ಕಾರ್ಯಕ್ರಮ ಇದಾಗಿದೆ ನಮ್ಮ ಸಂಘಟನೆಯನ್ನು ಬಲಪಡಿಸುವಲ್ಲಿ ಅವರ ಕನಸಿನ ಕನ್ನಡ ನಾಡನ್ನು ಕಟ್ಟಲು ನಾವೆಲ್ಲ ಶ್ರಮಿಸುತ್ತೇವೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟಿ. ಎ. ನಾರಾಯಣಗೌಡರ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ದೇವೇಂದ್ರಗೌಡ. ಗೌರವಾಧ್ಯಕ್ಷರಾದ ಕಾಳಪ್ಪ ಮೇಸ್ತ್ರಿ. ಉಪಾಧ್ಯಕ್ಷರಾದ ಬಸವರಾಜ ವಿಶ್ವಕರ್ಮ. ಭಾಷಾ ಸಾಬ್. ನಗರ ಘಟಕದ ಅಧ್ಯಕ್ಷರಾದ ಆರ್ ಎಕ್ಸ್ ಸುರೇಶ್. ನಗರ ಘಟಕದ ಉಪಾಧ್ಯಕ್ಷರಾದ ರವಿ ಹಿರೇಮಠ ಬಸಾಪುರ. ಮುಖಂಡರುಗಳಾದ ಕಾಶಿಪತಿ ವಿಶ್ವಕರ್ಮ.ಚಾನ್ ಗ್ರಾ. ಪಂ. ಸದಸ್ಯರು ಗಾಂಧಿನಗರ. ಲಕ್ಷ್ಮಣ ಗಾಂಧಿನಗರ. ರಾಮಕೃಷ್ಣ ಗಾಂಧಿನಗರ. ಬೀರಪ್ಪ ಸುಕಾಲಪೇಟೆ ಶೇಖರ್. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ.ಸಿದ್ದಯ್ಯ ಸ್ವಾಮಿ.ಮರಿಯಪ್ಪ.ಜ್ಯೋತಿ. ಹಾಗೂ ಕರವೇ ಹಲವಾರು ಮುಖಂಡರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *