ರಾಯಚೂರು ಏಪ್ರಿಲ್ 13 (ಕರ್ನಾಟಕ ವಾರ್ತೆ): ರಾಯಚೂರಿನ ಯರಮರಸ್ ಮತ್ತು ಚಿಕ್ಕಸುಗೂರು ರೈಲ್ವೇ ನಿಲ್ದಾಣಗಳ ಮದ್ಯೆ ಸುಮಾರು 50 ವರ್ಷದ ಅಪರಿಚಿತ ಗಂಡಸ್ಸು ಯಾವುದೋ ಚಲಿಸುವ ರೈಲು ಗಾಡಿಗೆ ಅಡ್ಡ ಸಿಕ್ಕಿ ಆಕಸ್ಮಿಕವಾಗಿ ಮೃತಪಟ್ಟಿದ್ದು, ಈ ಕುರಿತು ರಾಯಚೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ನಂ: 03/2026 ಯು/ಎಸ್ 194 ರಿತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮೃತದೇಹ ದೊರೆತ ಘಟನಾ ಸ್ಥಳಗಳಲ್ಲಿ ಮೃತನ ವಾರಸುದಾರರು ಯಾರು ಪತ್ತೆಯಾಗಿರುವುದಿಲ್ಲ. ಆದ್ದರಿಂದ ಮೃತನ ವಾರುಸುದಾರ ಪತ್ತೆ ಹಾಗೂ ಪಿ.ಎಂ.ಇ. ಸಲುವಾಗಿ ಮೃತದೇಹಗಳನ್ನು ರಾಯಚೂರು ರೀಮ್ಸ್ ಆಸ್ಪತ್ರೆಯ ಶೀತಲ ಶವಗಾರದಲ್ಲಿ ಇಡಲಾಗಿದೆ.
ಅಪರಿಚಿತ ಗಂಡಸ್ಸು ವಯಸ್ಸು ಸುಮಾರು 50 ವರ್ಷ, ಎತ್ತರ ಸುಮಾರು 5.6 ಅಡಿ, ಗೋಧಿ ಮೈ ಬಣ್ಣ, ದುಂಡು ಮುಖ, ಸಣ್ಣ ಮೂಗು, ಕಪ್ಪು ಕಣ್ಣುಗಳು, ತಲೆಯಲ್ಲಿ 2 ಇಂಚು ಕಪ್ಪು ಮತ್ತು ಬಿಳಿ ಕೂದಲು, ಬಿಳಿ ಗಡ್ಡ ಮೀಸೆ ಬಿಟ್ಟಿರುತ್ತಾನೆ. ಸಾಧಾರಣ ಶರೀರ ಹೊಂದಿದ್ದು, ಒಂದು ಬಿಳಿ ಬಣ್ಣದ ಶರ್ಟು, ಒಂದು ನೀಲಿ ಬಣ್ಣದ ಬನಿಯಾನ, ಒಂದು ನೀಲಿ ಬಣ್ಣ ಚಡ್ಡಿ, ಒಂದು ನೀಲಿ ಬಣ್ಣದ ಚಕ್ಸ ಲುಂಗಿ ಧರಿಸಲಾಗಿದೆ.
ಮೃತನ ವಾರಸುದಾರರು ಪತ್ತೆಯಾದಲ್ಲಿ ಅಥವಾ ಈ ಮೃತನ ಹೋಲಿಕೆಯ ಪುರುಷ ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ದೂ.ನಂ: 08532-231716 ಅಥವಾ ಮೊಬೈಲ್ ಸಂಖ್ಯೆ: 9480802111 ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ: 080-22871291ಗೆ ಸಂಪರ್ಕ ಮಾಡಬಹುದಾಗಿದೆ ಎಂದು ರೈಲ್ವೇ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

