ಇಳಕಲ್: ನಗರದ ವಿಸಿ ಅಕ್ಕಿ ಸ್ಮಾರಕ ಸಂಘದ ಆಡಳಿತಾಧಿಕಾರಿಗಳಾದ ರಾಜಮಹಮ್ಮದ್ ಇಲಕಲ್ ಅವರ ನಿವಾಸಕ್ಕೆ ಗವಿಮಠದ ಪೂಜ್ಯ ಶ್ರೀಗಳು ಗೌರವ ಭೇಟಿ ನೀಡಿದರು. ಶ್ರೀಗಳನ್ನು ಆತ್ಮೀಯವಾಗಿ ಸ್ವಾಗತಿಸಿದ ರಾಜಮಹಮ್ಮದ್ ಇಲಕಲ್ ಹಾಗೂ ಕುಟುಂಬಸ್ಥರು ಪುಷ್ಪಗುಚ್ಛ ನೀಡಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಶ್ರೀಗಳು ಮಾತನಾಡಿ, ಸಮಾಜದಲ್ಲಿ ಶಾಂತಿ, ಸಹೋದರತ್ವ ಹಾಗೂ ಭಾವೈಕ್ಯತೆ ಅತ್ಯಂತ ಮುಖ್ಯವಾಗಿದ್ದು ಎಲ್ಲ ಧರ್ಮ, ಜಾತಿ, ಭಾಷೆಗಳ ಜನರು ಪರಸ್ಪರ ಗೌರವದಿಂದ ಬದುಕಿದಾಗ ಮಾತ್ರ ಸಮಾಜ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಮಾನವೀಯ ಮೌಲ್ಯಗಳು ಮತ್ತು ಪರಸ್ಪರ ಸಹಕಾರವೇ ನಿಜವಾದ ಧರ್ಮ ಎಂದು ಅವರು ಹೇಳಿದರು.
ಭೇಟಿಯ ವೇಳೆ ವಿವಿಧ ಧರ್ಮಗಳ ಮುಖಂಡರು, ಸಂಘದ ಪದಾಧಿಕಾರಿಗಳು, ಸ್ಥಳೀಯ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದು, ಧಾರ್ಮಿಕ ಸೌಹಾರ್ದತೆಗೆ ಇದು ಉತ್ತಮ ಉದಾಹರಣೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶ್ರೀಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ನಗರದಲ್ಲಿ ಭಾವೈಕ್ಯತೆ ಮತ್ತು ಸಾಮರಸ್ಯವನ್ನು ಬಲಪಡಿಸುವ ಉದ್ದೇಶದಿಂದ ನಡೆದ ಈ ಭೇಟಿ ಸಾರ್ವಜನಿಕರಲ್ಲಿ ಸಂತೋಷ ಮತ್ತು ಮೆಚ್ಚುಗೆಗೆ ಪಾತ್ರವಾಯಿತು.

Leave a Reply

Your email address will not be published. Required fields are marked *