ಮುದ್ದೇಬಿಹಾಳ:ರಾಜ್ಯದಲ್ಲಿ ನಡೆದ ಡಾವಣಗೇರೆ ಉಪಚುನಾವಣೆಯ ಹಿನ್ನಲೆಯಲ್ಲಿ ರಾಜಕೀಯ ವಾತಾವರಣ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಅವರ ವಿರುದ್ಧ ವಿನಾಕಾರಣ ಅಸತ್ಯ ಪ್ರಚಾರ ನಡೆಯುತ್ತಿರುವುದು ಖಂಡನೀಯ ಎಂದು ಅಹಿಂದ ಯುವ ಬ್ರಿಗೇಡ್ ಅಧ್ಯಕ್ಷ ಮಕಬುಲ್ ಎ. ಬನ್ನೇಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕೆಯ ಪ್ರತನಿಧಿನಿಯೊಂದಿಗೆ ಮಾತನಾಡಿದ ಅವರು, “ಜಮೀರ್ ಅಹ್ಮದ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಸಮುದಾಯದ ಅಭಿವೃದ್ಧಿ ಹಾಗೂ ಜನಪರ ಕೆಲಸಗಳಿಗೆ ಒತ್ತು ನೀಡಿದ ನಾಯಕರು. ಆದರೆ ಉಪಚುನಾವಣೆಯ ಹೊತ್ತಿನಲ್ಲಿ ಕೆಲವರು ರಾಜಕೀಯ ಲಾಭಕ್ಕಾಗಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸುಳ್ಳು ಪ್ರಚಾರ ನಡೆಸುತ್ತಿರುವುದು ವಿಷಾದನೀಯ. ನಮ್ಮ ಸಮುದಾಯದ ನಾಯಕರಿಂದಲೇ ನಮ್ಮ ನಾಯಕರನ್ನು ತುಳಿಯುವ ಪ್ರವೃತ್ತಿ ಕಾಣಿಸುತ್ತಿದೆ,” ಎಂದು ಆರೋಪಿಸಿದರು.
“ಇಂತಹ ಅಸತ್ಯ ಆರೋಪಗಳು ಮತ್ತು ನಿಂದನಾತ್ಮಕ ರಾಜಕಾರಣವನ್ನು ಸಮುದಾಯ ಎಂದಿಗೂ ಸಹಿಸುವುದಿಲ್ಲ. ಇದರಿಂದ ಜನರಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶ ಸ್ಪಷ್ಟವಾಗಿದೆ. ಆದರೆ ಜಾಗೃತ ಮತದಾರರು ಇಂತಹ ಕುತಂತ್ರಗಳಿಗೆ ಮಣಿಯುವುದಿಲ್ಲ,” “ಜಮೀರ್ ಅಹ್ಮದ್ ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕ್ರಮ ಕೈಗೊಂಡಲ್ಲಿ, ಸಮುದಾಯದ ಪರವಾಗಿ ತಕ್ಕ ಪಾಠ ಕಲಿಸಲು ನಾವು ಹಿಂಜರಿಯುವುದಿಲ್ಲ,” ಎಂದು ತೀವ್ರವಾಗಿ ಪ್ರತಿಕ್ರಿಯಿಸಿದರು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದ್ದು, ಸಮುದಾಯದ ಭಾವನೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಬನ್ನೇಟ್ಟಿ ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *