ರಾಯಚೂರು ಏಪ್ರಿಲ್ 10 (ಕರ್ನಾಟಕ ವಾರ್ತೆ): 2025-2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 1ರಲ್ಲಿ ಉತ್ತಮ ಫಲಿತಾಂಶ ಪಡೆದಿರುವ ರಾಯಚೂರಿನ ಬೋಳಮಾನದೊಡ್ಡಿಯ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜು ಸಾಧನೆಗೈದಿದ್ದು, ವಿದ್ಯಾರ್ಥಿಗಳ ಈ ಸಾಧನೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ವರ್ಗವು ವರ್ಷ ವ್ಯಕ್ತಪಡಿಸಿದೆ.
ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇಕಡ 100 ಮತ್ತು ವಾಣಿಜ್ಯ ವಿಭಾಗದಲ್ಲಿ ಶೇಕಡ 97.82 ಸೇರಿದಂತೆ ಕಾಲೇಜಿನ ಒಟ್ಟು ಫಲಿತಾಂಶ ಶೇಕಡ 98.98 ರಷ್ಟು ಉತ್ತಮ ಸಾಧನೆ ಮಾಡಲಾಗಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು.ಸಾನಿಯಾ ಬೇಗಂ ತಂದೆ ಮದರ್ ಸಾಬ್ 600 ಅಂಕಗಳಿಗೆ 575 ಅಂಕಗಳನ್ನು ಪಡೆಯುವ ಮೂಲಕ ಶೇಕಡ 95.83 ಸಾಧನೆ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿನಿ ಭಾಗ್ಯಶ್ರೀ ತಂದೆ ಮೌನೇಶ 600ಕ್ಕೆ 574 ಅಂಕಗಳು ಪಡೆಯುವ ಮೂಲಕ ಶೇಕಡ 95.66, ಕು.ಶ್ವೇತಾ ತಂದೆ ಮೌನೇಶ 600ಕ್ಕೆ 568 ಅಂಕಗಳನ್ನು ಪಡೆಯುವ ಮೂಲಕ ಶೇಕಡ 94.66 ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿನಿ ಕುಮಾರಿ ಅನ್ನಮ್ಮ ತಂದೆ ಶಾಂತಪ್ಪ 600 ಅಂಕಗಳಿಗೆ 575 ಅಂಕಗಳನ್ನು ಪಡೆಯುವ ಮೂಲಕ ಶೇಕಡ.95.83 ಸಾಧನೆ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಸಂಜನಾ 600ಕ್ಕೆ 574 ಅಂಕಗಳನ್ನು ಪಡೆಯುವ ಮೂಲಕ ಶೇಕಡ 95.66, ಕು. ಮಹೇಶ್ವರಿ 600ಕ್ಕೆ 573 ಅಂಕಗಳು ಪಡೆಯುವ ಮೂಲಕ ಶೇಕಡ 95.50 ಪಡೆದಿದ್ದಾರೆ. ಅನಿತಾ ತಂದೆ ಕರಿಯಪ್ಪ 600ಕ್ಕೆ 573 ಅಂಕಗಳಿಸಿರುತ್ತಾರೆ.
19 ವಿದ್ಯಾರ್ಥಿನಿಯರು ಕನ್ನಡ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಉರ್ದು ವಿಷಯದಲ್ಲಿ 2, ಅರ್ಥಶಾಸ್ತç 3, ಇತಿಹಾಸ 1, ವ್ಯವಹಾರ ಅಧ್ಯಾಯನ 1, ಭೌತಶಾಸ್ತç 1 ವಿದ್ಯಾರ್ಥಿನಿಯರು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಪ್ರವೀಣ್‌ಕುಮಾರ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *