ಸಿಂಧನೂರಿನ ನೊಬೆಲ್ ಪದವಿ ಮಹಾವಿದ್ಯಾಲಯದಲ್ಲಿ ಇತಿಹಾಸ ಸಾಮ್ರಾಜ್ಯ ದರ್ಶನ ಎಂಬ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಅತ್ಯಂತ ಯಶಸ್ವಿಯನ್ನು ಕಂಡು ಐತಿಹಾಸಿಕ ಕ್ಷಣಗಳನ್ನು ಸೃಷ್ಟಿ ಮಾಡುವಲ್ಲಿ ಕಾಲೇಜು ವಿದ್ಯಾರ್ಥಿಗಳು ಅತ್ಯಂತ ಪರಿಶ್ರಮ ಉತ್ತಮ ಆಸಕ್ತಿ ಹಾಗೂ ತನು ಮನದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಲೇಜಿಗೆ ಮತ್ತೊಂದು ದಾಖಲೆಯ ಗರಿಯನ್ನು ನೀಡಿದ್ದಾರೆ.
ಇತಿಹಾಸ ಸಾಮ್ರಾಜ್ಯ ದರ್ಶನ ಕಾರ್ಯಕ್ರಮದಲ್ಲಿ ಕಾಲೇಜಿನ ವ ಇತಿಹಾಸ ಉಪನ್ಯಾಸಕರಾದ ಶ್ರೀ ಪಂಚಾಕ್ಷರಯ್ಯ ಸ್ವಾಮಿ ಮತ್ತು ಮೌಲಾಸಾಬ್ ಇತಿಹಾಸ ಉಪನ್ಯಾಸಕರ ನೇತೃತ್ವದಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳನ್ನು ಒಟ್ಟು ಏಳು ತಂಡಗಳನ್ನು ರಚನೆ ಮಾಡಿ ಪ್ರತಿ ತಂಡಗಳಿಗೂ ಇತಿಹಾಸದ ಒಂದೊಂದು ವಿಷಯದ ಅಡಿಯಲ್ಲಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು
ಒಂದನೇ ತಂಡ ನಟರಾಜ ತಂಡದವರು
ನಾಯಕ : ನಿಸರ್ಗ
ಉಸ್ತುವಾರಿ ಉಪನ್ಯಾಸಕರು: ಶ್ರೀ ಸುರೇಶ್ ಮುಳ್ಳೂರ್ ಶ್ರೀ ಹೊನ್ನಪ್ಪ ಬೆಳಗುರ್ಕಿ
ಭಾರತೀಯ ಶಾಸ್ತ್ರೀಯ ನೃತ್ಯಗಳು ಕುರಿತು ದೇವಾಲಯದಲ್ಲಿರುವ ಕೆಲವು ಶಿಲ್ಪಗಳಿಗೆ ಜೀವ ತುಂಬಿ ನಾಟ್ಯ ನೃತ್ಯದ ಮೂಲಕ ಜನಮನ ಸೆಳೆದರು.
ಎರಡನೇ ತಂಡದ
ನಾಯಕ
ಉಸ್ತುವಾರಿ ಉಪನ್ಯಾಸಕರು: ಮರಿಸ್ವಾಮಿ ಇಂಗ್ಲೀಷ್ ಉಪನ್ಯಾಸಕರು
ಅವರು ವಿಜಯನಗರ ಸಾಮ್ರಾಜ್ಯದ ಕುರಿತು ಸಾಮ್ರಾಜ್ಯದ ಅರಸರು ಆಡಳಿತ ರಾಜರ ಪ್ರಜೆಗಳ ಆಡಳಿತದ ವೈಖರಿ ಹಾಗೂ ದೇವಾಲಯಗಳ ಕೆತ್ತನೆಗಳನ್ನು ಸವಿವರವಾಗಿ ಪ್ರದರ್ಶಿಸಿದರು
ಮೂರನೇ ತಂಡ
ನಾಯಕ :
ಉಸ್ತುವಾರಿ ಉಪನ್ಯಾಸಕರು: ಕುಮಾರಿ ಅಶ್ವಿನಿ ಶ್ರೀಮತಿ ನಂದಿನಿ ಉಪನ್ಯಾಸಕರು
ಗಂಗರ ತಲಕಾಡು ವಿಷಯದಡಿಯಲ್ಲಿ ಶಿವನ ಮೂರ್ತಿಯನ್ನು ಉದ್ಭವಿಸಿ ಪ್ರಮುಖ ಗಂಗರ ದೇವಾಲಯಗಳನ್ನು ನಿರ್ಮಿಸಿ ಅಲ್ಲಿನ ವಾಸ್ತುಶಿಲ್ಪವನ್ನು ಸ್ಮರಿಸುವ ಪ್ರದರ್ಶನ ನೀಡಿದರು.
ನಾಲ್ಕನೇ ತಂಡ
ನಾಯಕ:
ಉಸ್ತುವಾರಿ ಉಪನ್ಯಾಸಕರು:
ಕುಮಾರಿ ಜ್ಯೋತಿ ಮೇಡಂ
ಗೌತಮ ಬುದ್ಧನ ಜೀವನ ಬೋಧನೆಗಳು ಬುದ್ಧನ ಕಾಲದ ಸಮಾಜದ ಪರಿಸ್ಥಿತಿಯನ್ನು ನೈಸರ್ಗಿಕ ಸ್ಥಿತಿಯನ್ನು ವರ್ಣಿಸಿ ಚಿತ್ರಿಸಿ ಪ್ರದರ್ಶನ ನೀಡಿದರು
5ನೇ ತಾಂಡ
ನಾಯಕ
ಉಸ್ತುವಾರಿ ಉಪನ್ಯಾಸಕರು:
ಕುಮಾರ್ ಪಂಪಾಪತಿ ರಾಜ್ಯಶಾಸ್ತ್ರ ಉಪನ್ಯಾಸಕರು
ಮುಘಲ್ ಸಾಮ್ರಾಜ್ಯ ಕುರಿತು ಅವರ ಕಲೆ ಮತ್ತು ವಾಸ್ತುಶಿಲ್ಪದ ಸಮಗ್ರ ಚಿತ್ರಣ ಮತ್ತು ಮೊಘಲ್ ರಾಜರುಗಳ ಆಳ್ವಿಕೆಯ ಮಾಹಿತಿಯನ್ನು ಚಿತ್ರಿಸಿ ವರ್ಣಿಸಿದರು
ಆರನೇ ತಂಡ
ನಾಯಕ ಭಾಗ್ಯಶ್ರೀ
ಉಸ್ತುವಾರಿ ಉಪನ್ಯಾಸಕರು:
ಶ್ರೀ ವೆಂಕೋಬ ವಾಣಿಜ್ಯ ಉಪನ್ಯಾಸಕರು
ಗುಪ್ತ ಸಾಮ್ರಾಜ್ಯದ ಸುವರ್ಣ ಯುಗದ ಕುರಿತು ಸಮುದ್ರಗುಪ್ತನ ವೇಷ ತೊಟ್ಟು ಗುಪ್ತರ ಪ್ರಮುಖ ದೇವಾಲಯಗಳು ವಾಸ್ತುಶಿಲ್ಪವನ್ನು ಮರುಕಳಿಸುವ ರೀತಿಯಲ್ಲಿ ವಸ್ತು ಪ್ರದರ್ಶನ ಮಾಡಿದರು.
7ನೇ ತಂಡ
ನಾಯಕ ನವೀನ್ ಕುಮಾರ್
ಉಸ್ತುವಾರಿ ಉಪನ್ಯಾಸಕರು:
ಕುಮಾರಿ ಜ್ಯೋತಿ ಕನ್ನಡ ಉಪನ್ಯಾಸಕರು
ಬಾದಾಮಿ ಚಾಲುಕ್ಯರ ಅರಸರ ಆಡಳಿತದ ಜಾಣ್ಮೆ , ಗುಹೆ ಮತ್ತು ದುರ್ಗಾ ದೇವಾಲಯ, ಆಹಾರ ಪದ್ಧತಿಯ ಕುರಿತು ಸಮಗ್ರ ಚಿತ್ರಣವನ್ನು ಪ್ರದರ್ಶನ ಮಾಡಿದರು.
ಈ ಮೇಲಿನ ಏಳು ತಂಡಗಳ ಉಸ್ತುವಾರಿಯನ್ನು ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಶ್ರೀ ಪಂಚಾಕ್ಷರಯ್ಯ ಸ್ವಾಮಿ ಮತ್ತು ಮೌಲ್ ಸಾಬ್ ಇತಿಹಾಸ ಉಪನ್ಯಾಸಕರು ವಹಿಸಿ ಅದ್ಭುತ ಕಾರ್ಯವನ್ನು ಮಾಡಿದ್ದಾರೆ ಎಂದು ಆಡಳಿತ ಮಂಡಳಿಯವರು ಗುಣಗಾನ ಮಾಡಿದರು
ಈ ವಸ್ತು ಪ್ರದರ್ಶನವನ್ನು ಸಿಂಧನೂರಿನ ಸರ್ಕಾರಿ ಪ್ರಮುಖ ಪ್ರಮುಖ ಉಪನ್ಯಾಸಕರುಗಳಾದ ಹಾಗೂ ಅತಿಥಿ ಉಪನ್ಯಾಸಕರುಗಳಾದ ಶ್ರೀ ನರಸಣ್ಣ ……. ಇವರುಗಳು ಈ ಪ್ರದರ್ಶನವನ್ನು ವೀಕ್ಷಿಸಿ ವಸ್ತು ಪ್ರದರ್ಶನದ ಸಭೆಯನ್ನು ಸವಿದು ಕಾಲೇಜಿನ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಮೆಚ್ಚಿ ಹೊಗಳಿದರು
ಸಿಂಧನೂರಿನ ಪ್ರತಿಷ್ಠಿತ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರುಗಳು ಆದ ಆರ್ ಸಿ ಪಾಟೀಲ್ , ಕೃಷ್ಣಾರೆಡ್ಡಿ ……….
ಸಿಂಧನೂರಿನ ಎಲ್ಲಾ ಕಾಲೇಜಿನ ಉಪನ್ಯಾಸಕರಾದ ಹೂ ತಾಯಪ್ಪ ನಾಗರಾಜ ಸಾಯಿ ಉಪನ್ಯಾಸಕರು ಭಾಗವಹಿಸಿದ್ದರು
ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿ ಸದಸ್ಯರು ವಿದ್ಯಾರ್ಥಿಗಳ ಕಾರ್ಯ ಕ್ರಿಯಾಶೀಲತೆ ಮತ್ತು ಇತಿಹಾಸ ಸಾಮ್ರಾಜ್ಯ ದರ್ಶನವನ್ನು ವರ್ಣಿಸಿದ ಮಾಹಿತಿಯನ್ನು ಗುಣಗಾನ ಮಾಡಿದರು.
ಆರ್ ಸಿ ಪಾಟೀಲ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗಳು ದೇಶದ ಭವಿಷ್ಯದ ಸಾಧಕರು ಆಗುವಿರಿ ಎಂದು ಪ್ರಶಂಶಿಸಿದರು.
ಸಿಂಧನೂರಿನ ಬೇರೆ ಬೇರೆ ಕಾಲೇಜಿನ ಆಡಳಿತ ಮಂಡಳಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಸಮೂಹ ವರ್ಗ ಪ್ರದರ್ಶನವನ್ನು ವೀಕ್ಷಿಸಿ ಅಭಿನಂದನೆ ಮಾತುಗಳನ್ನಾಡಿ ಪ್ರೋತ್ಸಾಹಿಸಿದ್ದಾರೆ…ನಂತರ ವಸ್ತು ಪ್ರದರ್ಶನದಲ್ಲಿ….ನೋಬೆಲ್ ಚಾಲೆಂಜರ್ಸ್
ಥರ್ಮಕೋಲಿನಿಂದ ಪಾತಾಳೇಶ್ವರ ದೇವಾಲಯ ಮತ್ತು ಅರ್ಕೇಶ್ವರ ದೇವಾಲಯ
ವಿವಿಧ ರೀತಿಯ ರಾಜರ ಭಾವಚಿತ್ರಗಳು ಮತ್ತು ದೇವಾಲಯದ ಭಾವಚಿತ್ರಗಳು..
ಮಾರಂತಕ ತಂಡ
ವಿಜಯನಗರ ಸಾಮ್ರಾಜ್ಯ
1. ಹೇಮಕೂಟ
2. ಹಂಪಿ ಕಲ್ಲಿನ ರಥ
3. ವಿರೂಪಾಕ್ಷ ದೇವಸ್ಥಾನ
4. ಹಂಪಿ ಮಾರುಕಟ್ಟೆ
5. ಸಾಸುವೆ ಕಾಳು ಗಣೇಶ
ಗೌತಮಬುದ್ಧ ತಂಡವಾದ ನಾವು ಈವತ್ತಿನ ಕಾರ್ಯಕ್ರಮದಲ್ಲಿ ಬೌದ್ಧ ಧರ್ಮ ಯನ್ನುವ ವಿಷಯ ತೆಗೆದುಕೊಂಡು ಇದ್ದೆವು ಅದರಲ್ಲಿ ನಾವು ಗೌತಮ ಬುದ್ಧ ಸಾಂಚಿ ಸ್ತುಪಾ ಹಾಗೂ ಬೌದ್ಧ ದೇವಾಲಯವನ್ನು ನಿರ್ಮಿಸಿದ್ದೆವು ಹಾಗೆ ಕೊಠಡಿ ಯನ್ನು ನಿಸರ್ಗ ದತ್ತಾವಾಗಿ ಸಿಂಗರಿಸಿ ಬುದ್ಧನ ಜೀವನ ದಿಂದ ಅವನತಿ ವರೆಗೂ ವಂದು ಕೊಠಡಿಯಲ್ಲಿ ಚಿತ್ರಿಸಿದೇವು
ವಿಜಯ ಸಂಭ
1 ಗುಹಾಂತರ ದೇವಾಲಯ
2 ನರ್ಮದಾ ನದಿ ಕಾಳಗ
3 ರಂಗನಾಥ ಸ್ವಾಮಿ ದೇವಾಲಯ
4 ದುರ್ಗಾ ದೇವಾಲಯ
5 ಲಡಾಖನ್ ದೇವಾಲಯ
6 ವಿಜಯ ಸ್ಥಭಾ
7 ಇಮ್ಮಡಿ ಪುಲಿಕೇಶಿ (ವೇಷದಾರಿ)
8 ಆಹಾರ ಪದ್ಧತಿ…..
ವರ್ಣ ಯುಗ ತಂಡ.
ಗುಪ್ತ ಸಾಮ್ರಾಜ್ಯದ ವಸ್ತು ಪ್ರದರ್ಶನ
ಇಂದು ನಮ್ಮ ಕಾಲೇಜಿನಲ್ಲಿ ಇತಿಹಾಸ ಸಾಮ್ರಾಜ್ಯಗಳ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ನಮ್ಮ ತಂಡ ಸುವರ್ಣ ಯುಗ ಗುಪ್ತ ಸಾಮ್ರಾಜ್ಯದ ಶ್ರೇಷ್ಠ ಅರಸನಾದಂತಹ ಸಮುದ್ರ ಗುಪ್ತನ ವೇಷವನ್ನು ಹಾಕಲಾಗಿತ್ತು ಹಾಗೂ ಸೈನಿಕರ ವೇಷವು ಸಹ ಹಾಕಲಾಗಿತ್ತು ನಂತರ ಕೊನೆರ್ತ್ನೂರ ದೇವಾಲಯವನ್ನು ವಸ್ತು ಪ್ರದರ್ಶನ ಮಾಡಲಾಯಿತು. ಹಾಗೂ ಅಲಹಾಬಾದ್ ಸ್ತಂಭ ಶಾಸನವನ್ನು ಕೂಡ ಪ್ರದರ್ಶನಕ್ಕೆ ಇಡಲಾಗಿತ್ತು ಹಾಗೂ ನಳಂದ ವಿಶ್ವವಿದ್ಯಾಲಯವನ್ನು ಕೂಡ ಪ್ರದರ್ಶನಕ್ಕೆ ಇಡಲಾಗಿತ್ತು
ಈ ಕಾರ್ಯಕ್ರಮದಲ್ಲಿ ನೊಬೆಲ್ ಕಾಲೇಜಿನ ಕಾಲೇಜು ಆಡಳಿತ ಮಂಡಳಿ .ಸಿಂಧನೂರಿನ ಬೇರೆ ಬೇರೆ ಕಾಲೇಜಿನ ಆಡಳಿತ ಮಂಡಳಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು … ನೊಬೆಲ್ ಕಾಲೇಜಿನ ಉಪನ್ಯಾಸಕರು , ಬೋಧಕ್ಕೆ ತರ ಸಿಬ್ಬಂದಿ ವಿದ್ಯಾರ್ಥಿಗಳು ಭಾಗವಹಿಸಿದರು…


