ಮಸ್ಕಿ : ವಿದ್ಯಾರ್ಥಿಗಳು ನಿಶ್ಚಿತ ಗುರಿ ಜೊತೆ ಶ್ರದ್ದೆಯಿಂದ ಓದಿದರೆ ಯಶಸ್ಸು ಕಾಣಲು ಸಾಧ್ಯ ಎಂದು ಸಂಸ್ಥೆಯ ಕಾರ್ಯದರ್ಶಿ ರಾಮಣ್ಣ ನಾಯಕ ಹೇಳಿದರು. ಮಸ್ಕಿ ತಾಲೂಕಿನ ಮುದ್ದಾಪುರನ ತುಂಗಭದ್ರಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅದ್ಧ್ಯಕ್ಷತೆವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬರಿಗೂ ಶಿಕ್ಷಣ ಮುಖ್ಯ ಅದನ್ನು ಸಂಪಾದಿಸುವ ದೃಢಸಂಕಲ್ಪ ಮಾಡಬೇಕು. ವಿದ್ಯಾರ್ಥಿಗಳು ತಾಳ್ಮೆ ಮತ್ತು ಸಂಯಮದಿಂದ ನಡೆದುಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರು. ಕಾಲೇಜಿನ ಪ್ರಾಚಾರ್ಯ ಲಕ್ಷ್ಮಣ ಕರ್ಲಿ ಮಾತನಾಡಿ ಪಿಯುಸಿ ಹಂತ ಜೀವನದ ಬದಲಾವಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಆದ್ದರಿಂದ ವಿದ್ಯಾರ್ಥಿಗಳಲ್ಲಿ ಓದುವ ಛಲ ಮೂಡಬೇಕು ಎಂದರು. ಕಾಲೇಜಿನ ವಿದ್ಯಾರ್ಥಿಗಳಾದ ತಸ್ಲೀಮ್, ಹುಲಿಗೆಮ್ಮ, ಅನುಪಮಾ ಹಾಗೂ ನಿಂಗಮ್ಮ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕರಾದ ಸೋಮನಾಥ,ವಿಜಯಲಕ್ಷ್ಮಿ, ಶ್ರೀಕಾಂತ, ಬಸಲಿಂಗಪ್ಪ ಹಾಗೂ ವಿದ್ಯಾರ್ಥಿಗಳು ಇದ್ದರು. ದೀಪಾ ಮತ್ತು ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಉಪನ್ಯಾಸಕರಾದ ಹುಸೇನಬಾಷಾ ನಿರೂಪಿಸಿದರು, ಶಂಕ್ರಪ್ಪ ಸ್ವಾಗತಿಸಿದರೆ, ಅಕ್ಕಮಹಾದೇವಿ ವಂದಿಸಿದರು.

