ಮರಗಳನ್ನೇ ಮಕ್ಕಳಂತೆ ಸಾಕಿ ಸಲಹಿದ ವೃಕ್ಷಮಾತೆ ಸತಾಯಶೆ ಸಾಲು ಮರದ ತಿಮ್ಮಕ್ಕ ರವರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಿಂಧನೂರು ಹಾಗೂ ನಿವೃತ್ತ ಪಿಂಚಣಿ ನೌಕರರ ಸಂಘದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು,
ಶನಿವಾರ ಸಂಜೆ ತಹಶೀಲ್ದಾರ ಕಚೇರಿ ಆವರಣದಲ್ಲಿ ನಿವೃತ್ತ ನೌಕರರ ಭವನದಲ್ಲಿ ಎರಡು ಸಂಘಟನೆಗಳಿಂದ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ರವರ ಆತ್ಮಕ್ಕೆ ಶಾಂತಿ ಕೋರಿ ನುಡಿ ನಮನ ಕಾರ್ಯಕ್ರಮವನ್ನು ಸಲ್ಲಿಸಿದರು ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್ ಎಫ್ ಮಸ್ಕಿ ಮತ್ತು ನಿವೃತ್ತ ನೌಕರ ಹುಸೇನ್ ಬಾಷಾ ಮತ್ತು ಅಧ್ಯಕ್ಷರಾದ ಟಿ ಅಯ್ಯಪ್ಪ ಮಾತನಾಡಿ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದ ಸಾಲು ಮರದ ತಿಮ್ಮಕ್ಕನವರು ಕೆಲದಿನಗಳಿಂದ ವಯೋಸಹಜವಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು ಉಸಿರಾಟದ ಸಮಸ್ಯೆ ಉಂಟಾಗಿದ್ದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ , ಮಕ್ಕಳಿಲ್ಲದ ತಿಮ್ಮಕ್ಕ ಮರಗಳನ್ನೇ ಮಕ್ಕಳೆಂದು ಸಾಕಿ ಸಲುಹಿದ ತಾಯಿ ಅವರಾಗಿದ್ದರು ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಸೌಲಬ್ಯದೊಂದಿಗೆ ಕಲಾಗ್ರಾಮದಲ್ಲಿ ನಡೆಯಿತು ಎಂದು ಹೇಳಿದರು, ತಿಮ್ಮಕನ ಕುರಿತು ಚುಟುಕು ಕವನ ವಚನದ ಮೂಲಕ ಕವಿ ನಮನವನ್ನು ಬೀರಪ್ಪ ಶಂಭೋಜಿ ಸಲ್ಲಿಸಿದರು , ಕಾರ್ಯಕ್ರಮದಲ್ಲಿ ಬಸವರಾಜ್ ಬಿ, ಬಿಳೇಕಲ್, ಹುಸೇನಪ್ಪಾ ಅಮರಾಪುರ್, ಪ್ರಭು, ವೆಂಕಟರೆಡ್ಡಿ , ಯಲಪ್ಪ, ರಸೂಲ್ ಅನ್ವರ್ ಮಿಯಾ , ಪ್ರಭು, ಸಿದ್ದೇಶ್ವರಿ, ಶಿವಬಸಪ್ಪ, ಶ್ರೀಶೈಲ ಸೇರಿದಂತೆ ಎರಡು ಸಂಘಟನೆಯ ಮುಖಂಡರು ಇದ್ದರು

