ಮಾನ್ವಿ,: ಇಂದು ಭೋಗಾವತಿ
ಶ್ರೀಬಸವೇಶ್ವರ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಜರುಗಲಿದ್ದು ಸಂಜೆ 5.30 ನಿ.ಕ್ಕೆ ಅತ್ಯಂತ ವಿಜೃಂಬಣೆಯಿಂದ ರಥೋತ್ಸವ ಜರುಗುವುದು ಈ ಎಲ್ಲಾ ಭಕ್ತಿಪೂರ್ವಕ ಕಾರ್ಯಕ್ರಮದಲ್ಲು ಭೋಗಾವತಿ ಹಾಗೂ ಹಿರೇಕೊಟ್ನೆಕಲ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ಅನೇಕ ಸಕಲ ಸದ್ಭಕ್ತರುಗಳು ಭಾಗವಹಿಸಿ ಶ್ರೀಬಸವೇಶ್ವರ ಕೃಪೆಗೆ ಪಾತ್ರರಾಗಬೇಕೆಂದು ಭೋಗಾವತಿ ಗ್ರಾಮದ ಸದ್ಭಕ್ತ ಮಂಡಳಿ, ಭೋಗಾವತಿ ಹಿರೇಕೊಟ್ನೆಕಲ್ ಹಾಗೂ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಕೋರಿದ್ದಾರೆ.
ನ.29 ಶನಿವಾರ ಬೆಳಿಗ್ಗೆ 8.45 ನಿ.ಕ್ಕೆ ಶ್ರೀಮಾರುತಿ ದೇವಸ್ಥಾನದದಿಂದ ಶ್ರೀ ಬಸವೇಶ್ವರ ದೇವಸ್ಥಾನದವರೆಗೆ ಕಳಸಾರೋಹಣ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮತ್ತು ರಥೋತ್ಸವಕ್ಕೆ ಪೂಜೆ ಮತ್ತು ಕಳಸಾರೋಹಣ ಕಾರ್ಯಕ್ರಮಗಳು ತದನಂತರ ಎಲೆಪೂಜೆ ಮತ್ತು ಗಂಡಾರತಿ, ದೀಡ್ ನಮಸ್ಕಾರ, ರುದ್ರಾಭಿಷೇಕ, ಪಂಚಾಭಿಷೇಕ ಮತ್ತು ರಾಶಿ ನಕ್ಷತ್ರ ಪೂಜೆ ಕಾರ್ಯಕ್ರಮ ಜರುಗುತ್ತವೆ. ಸಂಜೆ 5.30 ನಿ.ಕ್ಕೆ ಅತ್ಯಂತ ವಿಜೃಂಬಣೆಯಿಂದ ನೂತನ ಕಳಸಾರೋಹಣದೊಂದಿಗೆ ರಥೋತ್ಸವ ನಡೆಯುತ್ತದೆ. ರಾತ್ರಿ 9.ಗಂ.ಗೆ ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ ನೆರವೇರಲಿದೆ.
ನ.30 ರವಿವಾರ ಸಾಯಂಕಾಲ ಕಡುಬಿನ ಕಾಳಗ ನಂತರ ಹೂ ಕಾಯಿ ಕರ್ಪೂರದೊಂದಿಗೆ ಮಹಾಮಂಗಲಗೊಳ್ಳುವುದು ಎಂದು ಆರ್ಚಕ ಬಸವರಾಜಪ್ಪ, ಭೋಗಾವತಿ ಗ್ರಾಮದ ಸದ್ಭಕ್ತ ಮಂಡಳಿ, ಭೋಗಾವತಿ ಹಿರೇಕೊಟ್ನೆಕಲ್ ಹಾಗೂ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ತಿಳಿಸಿದ್ದಾರೆ.

