ಸಿಂಧನೂರು : ತಾಲೂಕಿನ ಜವಳಗೇರಾ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲಕೋತ್ಸವ 2025 ಜವಳಗೇರಾದಲ್ಲಿ ನಡೆದ ಸ್ಪರ್ಧೆಗಳಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಜವಳಗೇರಾ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಶಾಲೆಯ ಪ್ರಾಚಾರ್ಯರು ಮೌಲಾಲಿ ದೊಡ್ಡಮನಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 

ಪ್ರೌಢ ಶಾಲೆಯ ವಿಭಾಗದಲ್ಲಿ ಯರ್ರಿಸ್ವಾಮಿ ಹತ್ತನೇ ತರಗತಿ ವಿದ್ಯಾರ್ಥಿ ಹಿಂದಿ ಭಾಷಣದಲ್ಲಿ ಪ್ರಥಮ ಸ್ಥಾನ ಹಾಗೂ ಸವಿತಾ 9ನೇ ತರಗತಿ ವಿದ್ಯಾರ್ಥಿ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಆಫಿಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಇಂಗ್ಲಿಷ್ ಭಾಷಣದಲ್ಲಿ ಪ್ರಥಮ ಸ್ಥಾನ ಹಾಗೂ ರಾಧಿಕಾ 9ನೇ ತರಗತಿ ವಿದ್ಯಾರ್ಥಿನಿ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಯರ್ರಿಸ್ವಾಮಿ ಮತ್ತು ಪ್ರಜ್ವಲ್ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಹಾಗೂ ವಂಶಿ 10ನೇ ತರಗತಿ ವಿದ್ಯಾರ್ಥಿನಿ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಕೃಷ್ಣ 9ನೇ ತರಗತಿ ವಿದ್ಯಾರ್ಥಿ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಕಾವೇರಿ 9ನೇ ತರಗತಿ ವಿದ್ಯಾರ್ಥಿನಿ ಮಿಮಿಕ್ರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ ಹಾಗೂ ಅರುಣ್ ಕುಮಾರ್ ಹತ್ತನೇ ತರಗತಿ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಮಲ್ಲಿಕಾ ಎಂ 9ನೇ ತರಗತಿ ವಿದ್ಯಾರ್ಥಿನಿ ರಂಗೋಲಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಕಾಫಿಯ 9ನೇ ತರಗತಿ ವಿದ್ಯಾರ್ಥಿನಿ ಧಾರ್ಮಿಕ ಪಠಣದಲ್ಲಿ ದ್ವಿತೀಯ ಸ್ಥಾನ ಪಡೆದು ಪ್ರೌಢ ವಿಭಾಗಕ್ಕೆ ಕೀರ್ತಿ ತಂದಿದ್ದಾರೆ ಮತ್ತು ಪ್ರಾಥಮಿಕ ವಿಭಾಗದಲ್ಲಿ ತಿನೇತ್ರ ಪ್ರಬಂಧ ರಚನೆಯಲ್ಲಿ ಪ್ರಥಮ ಸ್ಥಾನ ಹಾಗೂ ಶಿವ ಪ್ರಸಾದ್ ಮಣ್ಣಿನ ಮಾದರಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ವೆಂಕಟರೆಡ್ಡಿ ಮಿಮಿಕ್ರಿಯಲ್ಲಿ ದ್ವಿತೀಯ ಸ್ಥಾನ ಸೈಫ್ ಉದ್ದಿನ್ ಚಿತ್ರಕಲೆಯಲ್ಲಿ ದ್ವಿತೀಯ ಸ್ಥಾನ ಪಡೆದು ಪ್ರಾಥಮಿಕ ವಿಭಾಗಕ್ಕೆ ಕೀರ್ತಿ ತಂದಿದ್ದಾರೆ ಈ ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಪ್ರಾಚಾರ್ಯರು ಮೌಲಾಲಿ ದೊಡ್ಡಮನಿ ಅವರು ಸುದ್ದಿಗೋಷ್ಠಿಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ ನಮ್ಮ ಶಾಲೆಯ ಸಾಧನೆಗೆ ತರಬೇತಿ ನೀಡಿದ ಎಲ್ಲಾ ನನ್ನ ಸಿಬ್ಬಂದಿ ಸ್ನೇಹಿತರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯರು ಮೌಲಾಲಿ ದೊಡ್ಡಮನಿ, ಸಹ ಶಿಕ್ಷಕರಾದ ವಿಶ್ವನಾಥ್ ಎ.ಕೆ , ರತೀಂದ್ರ ರಾಯ್,ದುರುಗಪ್ಪ, ಹನುಮೇಶ, ಮೌನೇಶ್, ಯೂಸುಫ್ ಸಾಬ್,ಆಂಜನೇಯ,ಸಣ್ಣ ಹುಸೇನಪ್ಪ,ಸುನಿಲ್ ಕುಮಾರ್ ಹಾಗೂ ಪ್ರಥಮ ದರ್ಜೆ ಸಹಾಯಕರು ಲಾವಣ್ಯ ಹಾಗೂ ನರ್ಸಿಂಗ್ ಆಫೀಸರ್ ಗೀತಾಂಜಲಿ ಸೇರಿ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮುಂದಿನ ತಾಲೂಕು, ಜಿಲ್ಲಾ , ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಕಲಾಕೋತ್ಸವದಲ್ಲಿ ಕೂಡ ಇದೆ ರೀತಿ ನಿಮ್ಮ ಸಾಧನೆ ಮುಂದುವರೆಯಲಿ ಎಂದು ವಿದ್ಯಾರ್ಥಿಗಳಿಗೆ ಶುಭಾಶಯ ತಿಳಿಸಿದ್ದಾರೆ

Leave a Reply

Your email address will not be published. Required fields are marked *