ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ರಾಯಚೂರು ವತಿಯಿಂದ ನಡೆದ ಸಾರ್ವಜನಿಕ ಕುಂದು ಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ರಾಯಚೂರು ಎಸ್.ಪಿ. ಸತೀಶ್ ಚಿಟಗುಪ್ಪಿ ಸಾರ್ವಜನಿಕರಿಂದ ಕುಂದು ಕೊರತೆ ಮತ್ತು ಅಹವಾಲುಗಳನ್ನು ಸ್ವೀಕಾರಿಸಿ ಮಾತನಾಡಿ ಕಾರ್ಯಕ್ರಮದಲ್ಲಿ 192 ಫಾರಂ ಅಡಿಯಲ್ಲಿ 3 ದೂರುಗಳು ಹಾಗೂ ಜಿಲ್ಲಾಧಿಕಾರಿಗಳಿಗೆ,ತಹಸೀಲ್ದಾರ್ ,ತಾಲೂಕು ಪಂಚಾಯಿತಿ ಇಲಾಖೆಗೆ ಸೇರಿದ 12 ಅಹವಾಲುಗಳನ್ನು ಸ್ವಿಕರಿಸಲಾಗಿದ್ದು ಅವುಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗುವುದು ಸಾರ್ವಜನಿಕರಿಗೆ ಹಾಗೂ ಫಲಾನುಭಾವಿಗಳಿಗೆ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರದ ಸೇವೆಗಳನ್ನು ಹಾಗೂ ಸೌಲಭ್ಯಗಳನ್ನು ಪಡೆಯುವುದಕ್ಕೆ ಸರ್ಕಾರಿ ಅಧಿಕಾರಿಗಳಿಂದ ತೊಂದರೆಯಾದಲ್ಲಿ, ಅನಗತ್ಯವಾದ ವಿಳಂಬವಾದಲ್ಲಿ, ಅಥಾವ ಯಾವುದೆ ಬೇಡಿಕೆಗಳನ್ನು ಇಟ್ಟಲ್ಲಿ ಸಾರ್ವಜನಿಕರು ಕರ್ನಾಟಕ ಲೋಕಾಯುಕ್ತ ರಾಯಚೂರು ರವರಲ್ಲಿ ದೂರು ಹಾಗೂ ಅಹಾವಲುಗಳನ್ನು ಸಲ್ಲಿಸಿ ಪರಿಹಾರ ಪಡೆಯಬಹುದಾಗಿದೆ ಸಾರ್ವಜನಿಕರಿಗೆ ತಮ್ಮ ಕುಂದು ಕೊರತೆ ಮತ್ತು ಅಹವಾಲುಗಳನ್ನು ಸಲ್ಲಿಸುವುದಕ್ಕೆ ಅನುಕೂಲವಾಗುವಂತೆ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದು ಕೊರತೆ ಮತ್ತು ಅಹವಾಲುಗಳನ್ನು ಸ್ವೀಕಾರ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕೆ.ಆರ್.ಎಸ್. ಪಕ್ಷದ ತಾ.ಅಧ್ಯಕ್ಷರಾದ ರಮೇಶನಾಯಕ ಲೋಕಯುಕ್ತರಲ್ಲಿ ಅಹವಾಲು ಸಲ್ಲಿಸಿ ತಾಲೂಕಿನಲ್ಲಿ ಶಾಲಾ ವಾಹನಗಳು ಹೆಚ್ಚು ಅಪಘಾತಕ್ಕೆ ಒಳಗಾಗುತ್ತಿರುವುದರಿಂದ ಮಕ್ಕಳ ಸುರಕ್ಷತೆಗಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಶಾಲಾ ವಹಾನಗಳ ಫಿಟ್ನೆಸ್ ಪರಿಶೀಲಿಸಬೇಕು, ಚಾಲಕರ ಚಾಲನ ಪ್ರಮಾಣ ಪತ್ರವನ್ನು ಪರಿಶೀಲಿಸಿ ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ಪುರಸಭೆಯಿಂದ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ವಿತರಿಸಲಾಗುತ್ತಿರುವ ಕಸದ ಬುಟ್ಟಿ ಕಳಪೆ ಗುಣಮಟ್ಟದಿಂದ ಕೂಡಿದ್ದು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೇಜರ್ ಶಹಾನವಾಜ್ ಖಾನ್ ಹೈದ್ರಾಬಾದ್ ಕರ್ನಾಟಕ ಸಂಘದ ಅಧ್ಯಕ್ಷರಾದ ಎಸ್.ಎಂ.ಶಾನವಾಜ್ ಪಟ್ಟಣದ ಸರ್ಕಾರಿ ಖಾಬರಸ್ಥಾನ ವಕ್ಪಗೆ ಸೇರಿದ್ದು ಅತಿಕ್ರಮಣಕ್ಕೆ ಒಳಗಾಗಿದ್ದು ಹದುಬಸ್ತ ಮಾಡಿಕೊಡುವಂತೆ ಕೋರಿದರು. ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಪ್ರಭುರಾಜ್ ಕೋಡ್ಲಿ ಮನವಿ ಸಲ್ಲಿಸಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಪರಿಶಿಷ್ಟ ಜಾತಿ ಸಮುದಾಯದವರ ವಸತಿ ನಿಲಯಗಳಿಗೆ ಆಹಾರ ಸಾಮಾಗ್ರಿಗಳನ್ನುಪೂರೈಸುವುದಕ್ಕೆ ಟೆಂಡರ್ ಪಡೆದ ಗುತ್ತಿಗೆದಾರರು ಇದುವರೆಗೆ ಕೂಡ ವಸತಿ ನಿಲಯಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನುಪೂರೈಕೆ ಮಾಡದೆ ಇರುವುದರಿಂದ ವಸತಿ ನಿಲಯದ ಮಕ್ಕಳಿಗೆ ಪೌಷ್ಟಕಾಂಶಯುತ ಗುಣಮಟ್ಟದ ಆಹಾರ ದೊರೆಯದೆ ಮಕ್ಕಳ ಆರೋಗ್ಯದ ಮೇಲೆ ಗಂಭಿರವಾದ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದು ಕ್ರಮ ಕೈಗೊಳ್ಳಬೇಕು. ಕಲ್ಮಾಲದಿಂದ ಸಿಂಧನೂರು ವರೆಗಿನ ಚತುಷ್ಪತ್ ರಸ್ತೆ ಯನ್ನು ನಿರ್ಮಾಣ ಮಾಡುತ್ತಿರುವ ಗುತ್ತಿಗೆ ಸಂಸ್ಥೆಯವರು ಹಾಗೂ ಕರ್ನಾಟಕ ರಾಜ್ಯ ಹೆದ್ದಾರಿ ಇಲಾಖೆ ಅಧಿಕಾರಿಗಳು ರಸ್ತೆ ನಡುವಿನಿಂದ 50 ಅಡಿ ನಿರ್ಮಾಣ ಮಾಡಬೇಕಾಗಿರುವ ರಸ್ತೆಯನ್ನು 30 ಅಡಿಗಳಿಗೆ ಕುಗ್ಗಿಸಿದ್ದು ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಲಿರುವುದರಿAದ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಚೀಕಲಪರ್ವಿ ಗ್ರಾಮದ ಹತ್ತಿರ ನಿರ್ಮಾಣ ವಾಗುತ್ತಿರುವ ವಿದ್ಯುತ್ ಉಪ ಕೇಂದ್ರಕ್ಕೆ ಅಗತ್ಯವಿರು ನೂರಾರು ಎಕರೆ ಭೂಮಿಯನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಮೋತ್ತಕ್ಕೆ ಖರೀದಿಸಿ ಸರ್ಕಾರದ ಬೋಕಸಕ್ಕೆ ನಷ್ಟ ಉಂಟುಮಾಡಿದ್ದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ದಲಿತ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಜಾವಿದ್ ಖಾನ್ ಮನವಿ ಸಲ್ಲಿಸಿ ಮಾನ್ವಿ ಪಟ್ಟಣದ ಅಂಬೇಡ್ಕರ್ ನಗರ ನವನಗರ,ಸೋನಿಯಾಗಾಂಧಿ ನಗರ, ಲಘುವಾಹನ ಚಾಲಕರ ಸಂಘದ ಪತ್ರಕರ್ತರ ಸಂಘ ಹಮಾಲರ ಸಂಘಗಳ ಪಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ನೀಡಬೇಕು ಹಾಗೂ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಮಹಿಳೆಯೊಬ್ಬರು ವಲಸೆದಾರರಿಗೆ ತಮ್ಮ ಹತ್ತಿರದ ನ್ಯಾಯಬೇಲೆ ಅಂಗಡಿಯಲ್ಲಿ ಪಡಿತರ ಚೀಟಿಗೆ ಅಗತ್ಯ ಪಡಿತರ ನೀಡುತ್ತಿಲ್ಲ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡರು.
ಕರ್ನಾಟಕ ಲೋಕಾಯುಕ್ತ ರಾಯಚೂರು ಹಾಗೂ ತಾಲೂಕು ಆಡಿಳಿತದಿಂದ ಸಾರ್ವಜನಿಕ ಕುಂದು ಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದ ಬಗ್ಗೆ ಸರಿಯಾದ ಪ್ರಚಾರ ಹಾಗೂ ಮಾಹಿತಿ ನೀಡದೆ ಇರುವುದರಿಂದ ಸಾರ್ವಜನಿಕರಿಂದ ಹೆಚ್ಚಿನ ಅಹವಾಲುಗಳು ಸಲ್ಲಿಕೆಯಾಗಿಲ್ಲ ಅದ್ದರಿಂದ ಮುಂದಿನ ದಿನಗಳಲ್ಲಿ ಸ್ಥಳಿಯ ಮಾಧ್ಯಮದವರಿಗೆ ಹಾಗೂ ಬ್ಯಾನರ್ ಅಳವಡಿಸಿ ಜನರಿಗೆ ಮಾಹಿತಿ ನೀಡಿದಲ್ಲಿ ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಂಡು ಪರಿಹಾರ ಪಡೆಯುವುದಕ್ಕೆ ಸಾಧ್ಯವಾಗಲಿದೆ .
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ, ಕರ್ನಾಟಕ ಲೋಕಾಯುಕ್ತ ರಾಯಚೂರು ಪಿ.ಐ. ಕಾಳಪ್ಪ ಬಡಿಗೇರ್,ಪಿ.ಐ. ರವಿಪುರುಷೋತ್ತಮ ಹಾಗೂ ಮಾನ್ವಿ ಪೋಲಿಸ್ ಠಾಣೆಯ ಪಿ.ಐ. ಸೋಮಸೇಖರ ಎಸ್.ಕೆಂಚರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ದೆವಮಾನೆ, ತಾ.ಅರೋಗ್ಯಧಿಕಾರಿ ಡಾ.ಶರಣಸವರಾಜು, ಪ,ವರ್ಗಗಳ ಕಲ್ಯಾಣಧಿಕಾರಿ ಮಹಾಲಿಂಗಪ್ಪ ಇಂಗಳಾದಳ್,ಸೇರಿದAತೆ ತಾಲೂಕಿನ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದರು.

