ರಾಯಚೂರು ಮಾರ್ಚ್ 31 (ಕರ್ನಾಟಕ ವಾರ್ತೆ): ಜಿಲ್ಲೆಯ ಮಾನವಿ ಪಟ್ಟಣದ ಪುರಸಭೆಯಿಂದ 2026-27ನೇ ಸಾಲಿಗಾಗಿ ಶೇ.5 ಯೋಜನೆಯಡಿ ವಿಕಲಾಂಗ ಚೇತನರಿಗೆ ಎಸ್.ಎಫ್.ಸಿ. ಅನುದಾನದಲ್ಲಿ ಜೀವ ವಿಮಾ ಮಾಡಿಸಿಕೊಳ್ಳಲು ಸಹಾಯ ಧನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಅರ್ಜಿಯೊಂದಿಗೆ 2 ಭಾವಚಿತ್ರಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ್ ಮತ್ತು ರೇಷನ್ ಕಾರ್ಡ್, ವಿಕಲಾಂಗ ಚೇತನರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ವಯಸ್ಸಿನ ದೃಢೀಕರಣ ಪತ್ರ, ಜಿಲ್ಲಾ ತಾಲ್ಲೂಕ ವೈಧ್ಯಾಧಿಕಾರಿಗಳಿಂದವೈದಕೀಯ ದೈಹಿಕ ದೃಢೀಕರಣ ಪ್ರಮಾಣ ಪತ್ರಗಳನ್ನು ಏಪ್ರಿಲ್ 15 ರೊಳಗಾಗಿ ಈ ಕಚೇರಿಯ ಕಾರ್ಯಲಯಕ್ಕೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ವೇಳೆಯಲ್ಲಿ ಮಾನವಿ ಪಟ್ಟಣದ ಪುರಸಭೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
