ರಾಯಚೂರು ಮಾರ್ಚ್ 31 (ಕರ್ನಾಟಕ ವಾರ್ತೆ): ರಾಯಚೂರು ಮಹಾನಗರ ಪಾಲಿಕೆ ವತಿಯಿಂದ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಗಣತಿ ತರಬೇತಿ ಕಾರ್ಯಕ್ರಮವನ್ನು ಏಪ್ರಿಲ್ 1, 4 ಹಾಗೂ 5ರಂದು ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 1 ಹಾಗೂ 4ರಂದು ಬೆಳಿಗ್ಗೆ 10ರಿಂದ 05:30 ರವರೆಗೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮAದಿರ ಹಾಗೂ ಏಪ್ರಿಲ್ 5ರಂದು ಬೆಳಿಗ್ಗೆ 10ರಿಂದ 05:30ರವರೆಗೆ ನಗರದ ಸ್ಟೇಷನ್ ರೋಡ್ ರಸ್ತೆಯ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗಣತಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ವಲಯ 2ರ ಚಾರ್ಜ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಂಧನೂರು ನಗರಸಭೆ ವತಿಯಿಂದ ವಿಮೆ ಮಾಡಿಸಲು ಅರ್ಜಿ ಆಹ್ವಾನ
ರಾಯಚೂರು ಮಾರ್ಚ್ 31 (ಕರ್ನಾಟಕ ವಾರ್ತೆ): ಜಿಲ್ಲೆಯ ಸಿಂಧನೂರು ನಗರಸಭೆ ವತಿಯಿಂದ 2024-25ನೇ ಸಾಲಿನ ಶೇ.5 ರ ಯೋಜನೆಯ ನಗರಸಭೆ ನಿಧಿ ಅನುದಾನದಡಿ ಜೀವ ವಿಮಾ/ಆರೋಗ್ಯ ಯೋಜನೆಯ ವಾರ್ಷಿಕ ಪ್ರೀಮಿಯಂ ಕಂತುಗಳನ್ನು ವಿಕಲಚೇತನರ ಜನರಿಗೆ ವಿಮೆಯನ್ನು ಮಾಡಿಸಲು ಅಥವಾ ನವೀಕರಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಶೇ.5 ಯೋಜನೆಗಳಿಗೆ ಕಾಯ್ದಿರಿಸಲಾದ ಅನುಷ್ಠಾನಕ್ಕಾಗಿ ವೈಯಕ್ತಿಕ ಚಟುವಟಿಕೆಗಳ ಪೂರ್ಣ ವಿವರದ ಪ್ರಕಟಣೆಯನ್ನು ನಗರಸಭೆ ಕಾರ್ಯಾಲಯ ನೊಟೀಸ್ ಫಲಕದಲ್ಲಿ ಲಗತ್ತಿಸಿದ್ದು. ಹಾಗೂ ಈ ಸಂಬAದ ವೆಬ್‌ಸೈಟ್ http://www.sindhanurcity.mrc.gov.in/ ನಲ್ಲಿ ಈ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಂಡು ವಿವರ ಪಡೆದುಕೊಳ್ಳಬಹುದು. ಆಸಕ್ತ ಅರ್ಹ ಫಲಾನುಭವಿಗಳು ವೈಯಕ್ತಿಕ ಚಟುವಟಿಕೆವಾರು ಮುಂದೆ ತಿಳಿಸಿರುವ ಅಗತ್ಯ ಎಲ್ಲಾ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಗಳ ಧೃಢೀಕರಣದೊಂದಿಗೆ ಏಪ್ರಿಲ್ 07ರ 5.30ರೊಳಗಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಕೊನೆಯ ದಿನಾಂಕ ಮೀರಿ ಬಂದAತಹ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಪ್ರಕಟಣೆಯಲ್ಲಿನ ಪ್ರಚೂರಪಡಿಸಲಾದ ವೈಯ್ಯಕ್ತಿಕ ಚಟುವಟಿಕೆಗಳ ಯೋಜನೆಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಫಲಾನುಭವಿಗಳು ಕುಟುಂಬದ ಆದಾಯ ಕುರಿತು ಹಾಗೂ ಇತರ ಯಾವುದೇ ದಾಖಲಾತಿಗಳ ತಪ್ಪು ಮಾಹಿತಿ ನೀಡಿ ಈ ಯೋಜನೆಯಡಿ ಸೌಲಭ್ಯವನ್ನು / ಸಹಾಯಧನವನ್ನು ಪಡೆದಿದ್ದು ಕಂಡು ಬಂದಲ್ಲಿ ತಪ್ಪು ನಿರೂಪಣೆ ಮೇರೆಗೆ ಪಡೆಯಲಾದ ಸೌಲಭ್ಯ/ಸಹಾಯಧನದ ಮೊತ್ತವನ್ನು ದಂಡ ಸಮೇತ ವಸೂಲಿಸಿ, ತಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲಾಗವುದು, ಆದ್ದರಿಂದ ಅರ್ಹ ಫಲಾನುಭವಿಗಳು ಮಾತ್ರ ಅರ್ಜಿ ಸಲ್ಲಿಸಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *