ರಾಯಚೂರು ಮಾರ್ಚ್ 31 (ಕರ್ನಾಟಕ ವಾರ್ತೆ): ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯತಿ ವತಿಯಿಂದ
2026-27ನೇ ಸಾಲಿನ ಅವಧಿಗೆ ಮಾರುಕಟ್ಟೆ ಬಹಿರಂಗ ಹರಾಜು ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಏಪ್ರಿಲ್ 6ರ ಬೆಳಿಗ್ಗೆ 11ಗಂಟೆಗೆ ನೂತನ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಭಾಗವಹಿಸಬಹುದಾಗಿದೆ ಎಂದು ಕೋರಲಾಗಿದೆ.
ಆಸಕ್ತಿಯುಳ್ಳವರು ಷರತ್ತುಗಳಿಗೆ ಒಳಪಟ್ಟು ವಾರದ ಮಾರುಕಟ್ಟೆಗೆ 50 ಸಾವಿರ ಠೇವಣಿ ಹಾಗೂ ದಿನದ ಮಾರುಕಟ್ಟೆಗೆ 25 ಸಾವಿರ ಠೇವಣಿ ಪಾವತಿಸಬೇಕು. ಠೇವಣಿ ಹಣವನ್ನು ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ ಸಿರವಾರ ಇವರಿಗೆ ಬ್ಯಾಂಕ್ ಮೂಲಕ ಡಿಡಿ ಪಾವತಿಸಿ ಅಥವಾ ನಗದು ರೂಪದಲ್ಲಿ ಸಲ್ಲಿಸಿ ಹರಾಜಿನಲ್ಲಿ ಭಾಗವಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಿರವಾರ ಪಟ್ಟಣ ಪಂಚಾಯತಿಯನ್ನು ಕಚೇರಿಯ ಸಮಯದಲ್ಲಿ ಭೇಟಿ ನೀಡಿ, ಮಾಹಿತಿ ಪಡೆಯಬಹುದಾಗಿದೆ ಎಂದು ರವಾರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
