ತಾಳಿಕೋಟಿ: ಹಿಂದೂ ಸನಾತನ ಧರ್ಮದ ಸಂಸ್ಕೃತಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಅದರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು ಇದಕ್ಕಾಗಿ ನಾವೆಲ್ಲರೂ ಒಂದಾಗುವ ಅಗತ್ಯ ಇದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಪಟ್ಟಣದ ಮಹಾರಾಣಾ ಪ್ರತಾಪ್ ಸಿಂಹ ವೃತದಲ್ಲಿ ಶ್ರೀ ರಾಮನವಮಿ ಉತ್ಸವ ಸಮಿತಿ(ರಿ) ಇವರ ವತಿಯಿಂದ ಹಮ್ಮಿಕೊಂಡ 2ನೇ ವರ್ಷದ ಶ್ರೀರಾಮ ನವಮಿ ಉತ್ಸವವನ್ನು ಉದ್ಘಾಟಿಸಿ ಸೋಮವಾರ ಸಂಜೆ ಅವರು ಮಾತನಾಡಿದರು. ಹಿಂದೂ ಧರ್ಮದಲ್ಲಿ ಇನ್ನೂ ಜೀವಂತವಾಗಿರುವ ಅಸ್ಪೃಶ್ಯತೆ ಹಾಗೂ ಜಾತಿ ವ್ಯವಸ್ಥೆಯಿಂದಾಗಿ ನಾವು ದುರ್ಬಲರಾಗುತ್ತಿದ್ದೇವೆ ನಾವು ಹಿಂದೂಗಳು ನಾವೆಲ್ಲರೂ ಒಂದು ಎಂಬ ಭಾವನೆ ಎಲ್ಲರಲ್ಲೂ ಬರಬೇಕಾಗಿದೆ ನಮ್ಮಲ್ಲಿರುವ ವ್ಯತ್ಯಾಸಗಳನ್ನು ಮರೆತು ಹಿಂದುತ್ವದ ರಕ್ಷಣೆಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ, ರಾಮಾಯಣ ಮಹಾಭಾರತ ಹಾಗೂ ಡಾ.ಬಾಬಾ ಸಾಹೇಬರು ರಚಿಸಿದ ಸಂವಿಧಾನ ನಮಗೆ ಶ್ರೇಷ್ಠ ಗ್ರಂಥಗಳಾಗಿವೆ. ಹಿಂದೂ ಸನಾತನ ಧರ್ಮ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ ಅವರು ಶ್ರೀ ರಾಮನವಮಿ ಉತ್ಸವ ಸಮಿತಿಯ ಯುವಕರು ಧರ್ಮರಕ್ಷಣೆಯ ಕಾರ್ಯವನ್ನು ಮಾಡುತ್ತಿದ್ದಾರೆ ಅವರಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು. ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಪ್ರಾಸ್ತಾವಿಕವಾಗಿ ಮಾತನಾಡಿ ರಾಮ ನವಮಿ ಉತ್ಸವ ಸಮಿತಿ ಪದಾಧಿಕಾರಿಗಳ ಧರ್ಮ ಸೇವೆಯನ್ನು ಶ್ಲಾಘಿಸಿದರು. ತಾಳಿಕೋಟಿ ಖಾಸ್ಗತೇಶ್ವರ ಮಠದ ಪೂಜ್ಯ ಸಿದ್ದಲಿಂಗ ದೇವರು, ಗುಂಡಕನಾಳ ಬ್ರಹನ್ಮಠದ ಷ.ಬ್ರ. ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು,ಕೆಸರಟ್ಟಿ ಶಂಕರಲಿಂಗ ಮಠದ ಪೂಜ್ಯ ಸೋಮಲಿಂಗ ಸ್ವಾಮಿಗಳು ಹಾಗೂ ವೇ.ಮೂ.ವೆಂಕಟೇಶಾಚಾರ್ಯರು ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪುರಸಭೆ ಮಾಜಿ ಅಧ್ಯಕ್ಷ ದಶರಥ ಸಿಂಗ್ ಎನ್.ಮನಗೂಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪುರಸಭೆ ಮಾಜಿ ಸದಸ್ಯ ಸುರೇಶ ಹಜೇರಿ, ಶ್ರೀ ರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಅಮಿತಸಿಂಗ್ ಡಿ.ಮನಗೂಳಿ,ಉಪಾಧ್ಯಕ್ಷ ಸೂರಜ ಹಜೇರಿ, ಹರಿಸಿಂಗ್ ಮೂಲಿಮನಿ, ಮಾನಸಿಂಗ್ ಕೊಕಟನೂರ,ಬಾಬು ಹಜೇರಿ, ಗೋವಿಂದಸಿಂಗ್ ಮೂಲಿಮನಿ,ರತನಸಿಂಗ್ ಕೊಕಟನೂರ, ರಾಜು ಹಂಚಾಟೆ,ಡಿ.ಕೆ.ಪಾಟೀಲ, ಪ್ರಭು ಬಿಳೆಭಾವಿ, ಪರಶುರಾಮ ಎಂ.ಕಟ್ಟಿಮನಿ, ರಾಜು ಸೊಂಡೂರ,ಭಂಡು ಧಾಯಪುಲೆ, ನಾಗೇಶ ಕಟ್ಟಿಮನಿ, ರಾಮಣ್ಣ ಕಟ್ಟಿಮನಿ,ಸಂಜೀವಪ್ಪ ಬರದೇನಾಳ, ಶ್ರೀರಾಮ ನವಮಿ ಉತ್ಸವ ಸಮಿತಿ ಪದಾಧಿಕಾರಿಗಳಾದ ಗೋವಿಂದಸಿಂಗ್ ಹಜೇರಿ,ಸುಧೀರ ತಿವಾರಿ, ರಾಘು ಹಜೇರಿ, ವಿಠಲಸಿಂಗ್ ಹಜೇರಿ, ನಿತಿನ್ ವಿಜಾಪೂರ, ರಾಜು ಹಜೇರಿ, ಚಂದ್ರು ರಜಪೂತ, ಸರ್ವ ಸಮಾಜದ ಗಣ್ಯರು,ಮುಖಂಡರು,ಅಪಾರ ಸಂಖ್ಯೆಯಲ್ಲಿ ಯುವಕರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

