ಮಾನ್ವಿ: ತಾಲೂಕಿನ ಆಲ್ದಾಳ ಗ್ರಾಮದಲ್ಲಿನ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ದೇವಾಸ್ಥಾನದಲ್ಲಿ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ಜಾತ್ರ ಮಹೋತ್ಸವ ಅಂಗವಾಗಿ 4 ನೇ ವರ್ಷದ ಕಲ್ಯಾಣೋತ್ಸವವನ್ನು ಗ್ರಾಮದ ಭಕ್ತರು ಶ್ರದ್ದೆ ಭಕ್ತಿಯಿಂದ ನೆರವೇರಿಸಿದರು. ಕಲ್ಯಾಣೋತ್ಸವ ಅಂಗವಾಗಿ ಬೆಳಿಗ್ಗೆ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರಸ್ವಾಮಿಗೆ ಮಹಾರುದ್ರಭಿಷೇಕ ಪೂಜೆ, ಹಾಗೂ ಸಹಸ್ರ ಬಿಲ್ವಾರ್ಚನೆ, ಮಹಾಮಂಗಳರತಿ ನೇರವೇರಿಸಲಾಯಿತು ನಂತರ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿಗೆ ಶಾಸ್ತ್ರೋಕ್ತವಾಗಿ ದೇವಸ್ಥಾನದ ಆರ್ಚಕರು ಕಲ್ಯಾಣೋತ್ಸವವನ್ನು ನೆರವೇರಿಸಿದರು. ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಕಲ್ಯಾಣೋತ್ಸವದಲ್ಲಿ ಭಾಗವಹಿಸಿದರು. ದೇವಸ್ಥಾನದ ನೂತನ ಮಹಾದ್ವಾರವನ್ನು ಕರೆಗುಡ್ಡ ಶ್ರೀ ಮಹಾಂತೇಶ್ವರ ಮಠದ ಶ್ರೀ ಮಹಾಂತ ಲಿಂಗಮಹಾಸ್ವಾಮಿಗಳು ಲೋಕರ್ಪಣೆ ನಡೆಸಿ ಆರ್ಶೀವಾಚನ ನೀಡಿದರು.

ದೇವಸ್ಥಾನದಲ್ಲಿ ನ.30 ರಂದು ನಡೆಯುವ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ಜಾತ್ರ ಮಹೋತ್ಸವ ಅಂಗವಾಗಿ,ಗೋಪುರಕ್ಕೆ ಮತ್ತು ರಥಕ್ಕೆ ಕಳಸರೋಹಣ ಹಾಗೂ ಹೂವಿನ ಅಲಂಕಾರ ನಡೆಯಲಿದೆ. ಸಂಜೆ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು, ನಂದಿಧ್ವಜ, ಕಳಸ, ಪುರವಂತಿಕೆಯೊಂದಿಗೆ ಮೆರವಣಿಗೆ ನಡೆಸಿ ರಥೋತ್ಸವ ನಡೆಯಲಿದೆ ಹರಕೆ ಹೊತ್ತಂತಹ ಭಕ್ತರು ಅಗ್ನಿಕುಂಡ ಪ್ರವೇಶಿಸಿ ಹರಕೆ ತಿರಿಸಲಿದ್ದಾರೆ. ಯಮನೂರು ಗ್ರಾಮದ ಬಸವೇಶ್ವರ ಸಂಘದ ರುದ್ರಮುನಿಸ್ವಾಮಿ ಹಾಗೂ ಗುರು ಶಾಂತಯ್ಯ ಸ್ವಾಮಿ ಇವರಿಂದ ಪುರವಂತಿಕೆ ಸೇವೆ ಮತ್ತು ಅಮರಪ್ಪ ಹೂಗಾರ ಸಂಗಡಿಗರಿಂದ ಶಹನಾಯಿ ಕಾರ್ಯಕ್ರಮ ನಡೆಯಲಿದೆ.

ಡಿ.1 ರಂದು ಸಂಜೆ 4ಕ್ಕೆ ನಂದಿಕೋಲು ,ಪುರವಂತಿಕೆ ಸೇವೆ, ಹಾಗೂ ಕಡುಬಿನ ಕಾಳಗ ನಡೆಯಲಿದೆ.ಎಂದು ಶ್ರೀ ಭದ್ರಕಾಳಿ, ಶ್ರೀ ವೀರಭದ್ರೇಶ್ವರ ಸದ್ಭಕ್ತ ಮಂಡಳಿ ಹಾಗೂ ಶ್ರೀ ಬಸವೇಶ್ವರ ಯುವಕ ಸಂಘದವರು ಪ್ರಕಟೆಯಲ್ಲಿ ತಿಳಿಸಿದ್ದಾರೆ.

ಮಾನ್ವಿ: ತಾಲೂಕಿನ ಆಲ್ದಾಳ ಗ್ರಾಮದಲ್ಲಿನ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರಸ್ವಾಮಿ ಕಲ್ಯಾಣೋತ್ಸವ ನಡೆಯಿತು.

ಮಾನ್ವಿ: ತಾಲೂಕಿನ ಆಲ್ದಾಳ ಗ್ರಾಮದಲ್ಲಿನ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಮಹಾದ್ವಾರ ಲೋಕಾರ್ಪಣೆ ನಡೆಯಿತು.

Leave a Reply

Your email address will not be published. Required fields are marked *