ಹಾಲಾಪೂರ: ಗ್ರಾಮದ ಸಗರಪ್ಪ ವಿಶ್ವಕರ್ಮ ರವರು ಪೊಲೀಸ್ ಇಲಾಖೆಯಲ್ಲಿ ನೇಮಕಗೊಂಡು, ಸುದೀರ್ಘವಾಗಿ ರಾಯಚೂರಿನಲ್ಲಿ 26 ವರ್ಷ ಪೊಲೀಸ್, ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸಿ, ನಂತರ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆಗೊಂಡು ಅಲ್ಲಿ ಸೇವೆ ಸಲ್ಲಿಸಿದ ನಂತರ ಎಎಸ್ಐ ವೈರ್ಲೆಸ್ ಆಗಿ ಬಡ್ತಿ ಪಡೆದು ಪುನಹ ರಾಯಚೂರಿಗೆ ವರ್ಗಾವಣೆಯಾಗಿದ್ದಕ್ಕೆ ಗ್ರಾಮಸ್ಥರು, ಸ್ನೇಹ ಬಳಗದವರು ಗೌರವ ಸನ್ಮಾನ ಸಲ್ಲಿಸಿ ಅಭಿನಂದಿಸಿದರು. ನಂತರ ರಂಗಭೂಮಿ ಕಲಾವಿದರಾದ ಮಾನಯ್ಯ ವಿಶ್ವಕರ್ಮ ಮಾತನಾಡಿ ಸಗರಪ್ಪ ವಿಶ್ವಕರ್ಮ ರವರು ಕುಟುಂಬವು ಬಹಳಷ್ಟು ದೈವಭಕ್ತಿ, ಸಂಪ್ರದಾಯಸ್ಥ ಕುಟುಂಬ ಅವರ ತಂದೆ ಬಹಳಷ್ಟು ಕಾಯಕಯೋಗಿಗಳು, ಹೀಗಾಗಿ ಅವರ ಶ್ರಮದ ಫಲವೇ ಇಂದು ಮಗನಿಗೆ ಅತ್ಯುತ್ತಮವಾದ ಹುದ್ದೆಯನ್ನು ಹೊಂದಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ. ಆರ್ ಬಿ ಹಿರೇಮಠ, ಶಂಕರಗೌಡ ಪೊ.ಪಾ, ಬೋಸರಾಜು, ಶಂಕರಗೌಡ ಮಾ.ಪಾ, ಗಂಗಾಧರ ಮರಾಠ, ಮಹಾದೇವ ವಿಶ್ವಕರ್ಮ, ವೆಂಕೋಬ ಬಿ, ಮೌನೇಶ ಬಡಿಗೇರ, ರಂಗಪ್ಪ ಕಂಪ್ಯೂಟರ, ಯಂಕಪ್ಪ ನಾಯಕ, ಮೌನೇಶ ಎಮ್, ಗಂಗಾಧರ ಎಸ್, ಸುನಿಲ ಹಾಗೂ ಇನ್ನಿತರ ಇದ್ದರು.

Leave a Reply

Your email address will not be published. Required fields are marked *